'ಈ ಸಿನಿಮಾ ನನ್ನ ಬದುಕಿಗೆ ನವಿಲುಗರಿ' ಎಂದ ಜಗ್ಗೇಶ್: ಯಾವುದು ಆ ಸಿನಿಮಾ?

ವಯಸ್ಸು ಮಾಗಿದಂತೆಯೂ ಭಿನ್ನ ಭಿನ್ನ ಪಾತ್ರಗಳು ಜಗ್ಗೇಶ್ ಅವರನ್ನು ಅರಸಿ ಬರುತ್ತಿವೆ. ಜಗ್ಗೇಶ್ ಸಿನಿಮಾಗಳಿಗೆ ಅದರದ್ದೇ ಆದ ಅಭಿಮಾನಿ ವರ್ಗವೂ ಇದೆ. ಈಗಾಗಲೇ ಎರಡು ಸಿನಿಮಾಗಳ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಕಾಯುತ್ತಿರುವ ಜಗ್ಗೇಶ್ ಅವರು ಹೊಸದೊಂದು ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದು, ಈ ಹೊಸ ಸಿನಿಮಾ ನನ್ನ ವೃತ್ತಿ ಬದುಕಿನಲ್ಲಿ ನವಿಲುಗರಿ ಇದ್ದಂತೆ ಎಂದು ವರ್ಣಿಸಿದ್ದಾರೆ.

ಜಗ್ಗೇಶ್ ಸಾಮಾಜಿಕ ಜಾಲತಾಣದಲ್ಲಿ ಬಹಳ ಸಕ್ರಿಯ. ಸಮಕಾಲೀನ ವಿಷಯಗಳಿಗೆ ಸಾಮಾಜಿಕ ಜಾಲತಾಣದ ಮೂಲಕ ಪ್ರಕ್ರಿಯಿಸುವ ಜಗ್ಗೇಶ್ ತಮ್ಮ ವೈಯಕ್ತಿಕ ಜೀವನ, ವೃತ್ತಿ ಜೀವನ, ಅಧ್ಯಾತ್ಮದ ಆಸಕ್ತಿ ಇತರೆ ವಿಷಯಗಳನ್ನು ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳಿಗೆ ತಲುಪಿಸುತ್ತಿರುತ್ತಾರೆ. ಇದೀಗ ತಾವು ಬಹಳ ನಿರೀಕ್ಷೆ ಇಟ್ಟಿಸಿರುವ ಹೊಸ ಸಿನಿಮಾ ಬಗ್ಗೆಯೂ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋದೊಟ್ಟಿಗೆ ಮಾಹಿತಿ ಹಂಚಿಕೊಂಡಿದ್ದಾರೆ.

ವೃತ್ತಿ ಬದುಕಿಗೆ ನವಿಲುಗರಿ: ಜಗ್ಗೇಶ್

ವೃತ್ತಿ ಬದುಕಿಗೆ ನವಿಲುಗರಿ: ಜಗ್ಗೇಶ್

ಸಂತೋಶ್ ಆನಂದ್‌ರಾಮ್ ನಿರ್ದೇಶನದ 'ರಾಘವೇಂದ್ರ ಸ್ಟೋರ್ಸ್' ಸಿನಿಮಾದಲ್ಲಿ ಜಗ್ಗೇಶ್ ನಟಿಸುತ್ತಿದ್ದು ಈ ಸಿನಿಮಾ 'ಕೆಜಿಎಫ್' ಖ್ಯಾತಿಯ ಹೊಂಬಾಳೆ ಫಿಲಮ್ಸ್ ನಿರ್ಮಾಣ ಮಾಡುತ್ತಿದೆ. ಅದ್ಧೂರಿಯಾಗಿ ಸಿನಿಮಾದ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಸಿನಿಮಾದ ಎರಡನೇ ಹಂತದ ಚಿತ್ರೀಕರಣ ಚಾಲ್ತಿಯಲ್ಲಿದೆ. ಈ ಸಿನಿಮಾ ಬಗ್ಗೆ ಬಹು ನಿರೀಕ್ಷೆ ಹೊಂದಿರುವ ಜಗ್ಗೇಶ್, ''ರಾಘವೇಂದ್ರ ಸ್ಟೋರ್ಸ್' ಸಿನಿಮಾ ನನ್ನ ವೃತ್ತಿ ಬದುಕಿಗೆ ನವಿಲುಗರಿ' ಎಂದಿದ್ದಾರೆ.

ಪ್ರಕೃತಿ ಮಡಿಲಲ್ಲಿ ಚಿತ್ರೀಕರಣ

ಪ್ರಕೃತಿ ಮಡಿಲಲ್ಲಿ ಚಿತ್ರೀಕರಣ

ಸಿನಿಮಾದ ಚಿತ್ರೀಕರಣ ಮಲೆನಾಡಿನ ಸುಂದರ ಸ್ಥಳಗಳಲ್ಲಿ ನಡೆಯುತ್ತಿದ್ದು, ಮಲೆನಾಡಿನ ಪ್ರಕೃತಿ ಚೆಲುವನ್ನು ಜಗ್ಗೇಶ್ ಬಹಳ ಎಂಜಾಯ್ ಮಾಡುತ್ತಿದ್ದಾರೆ. ಚಿತ್ರೀಕರಣ ಮಾಡಲಾಗುತ್ತಿರುವ ಸುಂದರ ಸ್ಥಳದ ವಿಡಿಯೋ ಹಂಚಿಕೊಂಡಿರುವ ನಟ ಜಗ್ಗೇಶ್, ''ಮನಸ್ಸು ಪ್ರಶಾಂತವಾಗಿ ಆನಂದಸ್ವರೂಪ ತಾಳಲು ಪರಿಸರದ ಮಡಿಲಲ್ಲಿ ಜೀವಿಸಬೇಕು ಎಂದು ನಮ್ಮ ಸನಾತನ ಧರ್ಮದ ಗ್ರಂಥಗಳು ಸಾರಿವೆ. ಆ ಅನುಭವ ನಾನು ಬಹಳ ವರ್ಷಗಳಿಂದ ಅನುಭವಿಸುತ್ತಿರುವೆ ಕಾರಣ ಹಳ್ಳಿಯಿಂದ ಬಂದವನು. ಈಗ 'ರಾಘವೇಂದ್ರ ಸ್ಟೋರ್ಸ್' ಚಿತ್ರತಂಡದಿಂದ ಮತ್ತೆ ಆ ಅವಕಾಶ ಸಿಕ್ಕಿದೆ ಕಾರಣ ಈ ಚಿತ್ರ ಸಂಪೂರ್ಣ ಮಲೆನಾಡಿನಲ್ಲಿ ವಾಸಮಾಡುವ ನಾಯಕನ ಪಾತ್ರ. ಪ್ರತಿದಿನ ಅದ್ಭುತ ಅನುಭವ ನೀಡುವ ಸ್ಥಳದಲ್ಲಿ ಚಿತ್ರೀಕರಣ ನಡೆಯುತ್ತದೆ'' ಎಂದಿದ್ದಾರೆ.

ಸಂತೋಶ್ ಆನಂದ್‌ರಾಮ್ ನಿರ್ದೇಶನದ ಸಿನಿಮಾ

ಸಂತೋಶ್ ಆನಂದ್‌ರಾಮ್ ನಿರ್ದೇಶನದ ಸಿನಿಮಾ

ಚಿಕ್ಕಮಗಳೂರಿನ ಸುಂದರ ಸ್ಥಳಗಳಲ್ಲಿ ಸಿನಿಮಾದ ಎರಡನೇ ಶೆಡ್ಯೂಲ್‌ನ ಚಿತ್ರೀಕರಣ ನಡೆಯುತ್ತಿದೆ. ಚಿತ್ರೀಕರಣ ಸೆಟ್‌ನಲ್ಲಿ ತಾವು ಮೇಕಪ್ ಹಾಕಿಸಿಕೊಳ್ಳುತ್ತಿರುವ ವಿಡಿಯೋವನ್ನು ನಿನ್ನೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು ಜಗ್ಗೇಶ್. ಹಾಸ್ಯಮಯ ಕೌಟುಂಬಿಕ ಸಿನಿಮಾ 'ರಾಘವೇಂದ್ರ ಸ್ಟೋರ್ಸ್' ಆಗಿದ್ದು, ಈ ಹಿಂದೆ ಯಶ್ ನಟನೆಯ 'ಮಿಸ್ಟರ್ ಆಂಡ್ ಮಿಸಸ್ ರಾಮಚಾರಿ', ಪುನೀತ್ ರಾಜ್‌ಕುಮಾರ್ ನಟನೆಯ 'ರಾಜಕುಮಾರ' ಹಾಗೂ 'ಯುವರತ್ನ' ಸಿನಿಮಾಗಳನ್ನು ನಿರ್ದೇಶಿಸಿದ್ದ ಸಂತೋಶ್ ಆನಂದ್ ರಾಮ್ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದ ಕತೆಯನ್ನು ನಟ ಪುನೀತ್ ರಾಜ್‌ಕುಮಾರ್ ಸಹ ಕೇಳಿ ಬಹುವಾಗಿ ಮೆಚ್ಚಿಕೊಂಡಿದ್ದರಂತೆ.

ಎರಡು ಸಿನಿಮಾಗಳು ಬಿಡುಗಡೆ ಆಗಬೇಕಿವೆ

ಎರಡು ಸಿನಿಮಾಗಳು ಬಿಡುಗಡೆ ಆಗಬೇಕಿವೆ

ಜಗ್ಗೇಶ್ ನಟಿಸಿರುವ 'ತೋತಾಪುರಿ' ಹಾಗೂ 'ರಂಗನಾಯಕ' ಸಿನಿಮಾಗಳು ಬಿಡುಗಡೆ ಆಗಬೇಕಿದೆ. ಜಗ್ಗೇಶ್ ನಟನೆಯ 'ನೀರ್ ದೋಸೆ' ಸಿನಿಮಾ ನಿರ್ದೇಶಿಸಿದ್ದ ವಿಜಯ್‌ಪ್ರಸಾದ್ ಅವರೇ 'ತೋತಾಪುರಿ' ಸಿನಿಮಾ ನಿರ್ದೇಶನ ಮಾಡಿದ್ದು ಸಿನಿಮಾದಲ್ಲಿ ಡಾಲಿ ಧನಂಜಯ್ ಸಹ ನಟಿಸಿದ್ದಾರೆ. ಇನ್ನು ಜಗ್ಗೇಶ್ ನಟನೆ ಎರಡು ಸೂಪರ್ ಹಿಟ್ ಸಿನಿಮಾ 'ಮಠ' ಹಾಗೂ 'ಎದ್ದೇಳು ಮಂಜುನಾಥ' ನಿರ್ದೇಶನ ಮಾಡಿದ್ದ ಗುರುಪ್ರಸಾದ್ ನಿರ್ದೇಶಿಸಿರುವ 'ರಂಗನಾಯಕ' ಸಿನಿಮಾ ಸಹ ಬಿಡುಗಡೆ ಆಗಬೇಕಿದೆ.

More from Filmibeat

English summary
Actor Jaggesh says he is very happy to act in Raghavendra Stores movie. Movie will be milestone in his acting career.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X