ಗಾಳಿಪಟ 2 ಚಿತ್ರತಂಡದ ಜೊತೆ ಜಗ್ಗೇಶ್ ಪ್ರತ್ಯಕ್ಷ! ಏನು ಸಮಾಚಾರ?
ಗಾಳಿಪಟ 2 ಸಿನಿಮಾ ಕನ್ನಡದ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದು. ಗಣೇಶ್, ದಿಗಂತ್ ಮತ್ತು ಪವನ್ ಕುಮಾರ್ ಒಟ್ಟಿಗೆ ನಟಿಸುತ್ತಿರುವ ಈ ಚಿತ್ರಕ್ಕೆ ಈಗ ಮತ್ತೊಬ್ಬ ಹಿರಿಯ ನಾಯಕ ನಟ ಜೊತೆಯಾಗಿದ್ದಾರೆ.
Recommended Video
ಹೌದು, ಜಗ್ಗೆಶ್ ಅವರು ಗಾಳಿಪಟ 2 ಸಿನಿಮಾ ತಂಡದ ಜೊತೆ ಕಾಣಿಸಿಕೊಂಡಿದ್ದಾರೆ. ಆದರೆ ಇದು ಅನಿರೀಕ್ಷಿತ ಭೇಟಿಯೋ ಅಥವಾ ಸಿನಿಮಾದಲ್ಲಿ ಜಗ್ಗೇಶ್ ಅವರ ತೊಡಗಿಕೊಳ್ಳುವಿಕೆ ಏನಾದರೂ ಇದೆಯೋ ಎಂಬ ಅನುಮಾನ ವ್ಯಕ್ತವಾಗಿದೆ.
ಗಾಳಿಪಟ 2 ನಿರ್ದೇಶಕ ಯೋಗರಾಜ್ ಭಟ್ ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವಂತೆ, 'ಚಿತ್ರದ ಡಬ್ಬಿಂಗ್ ವೇಳೆ ಅಚಾನಕ್ಕಾಗಿ ಜಗ್ಗೇಶ್ ಸಿಕ್ಕಿದರಂತೆ'.

ಎರಡು ತಿಂಗಳಿಂದ ಆತ್ಮೀಯರನ್ನು ಭೇಟಿ ಆಗಿರಲಿಲ್ಲ
ಜಗ್ಗೇಶ್ ಅವರು ಸಹ ಈ ಭೇಟಿ ಬಗ್ಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದು, '2ತಿಂಗಳಿಂದ ನನ್ನ ಯಾವ ಆತ್ಮೀಯರನ್ನು ನೋಡದೆ ಒಬ್ಬನೆ ಇದ್ದು ಸ್ವಲ್ಪ ಮಾನಸಿಕ ಒತ್ತಡ ಆಗಿತ್ತು! ಇಂದು ಭಟ್ಟರ ಚಿತ್ರದ ಡಬ್ಬಿಂಗ್ ನಡೆಯುತ್ತಿತ್ತು ಹಾಗಾಗಿ ಅಲ್ಲಿ ಹೋಗಿ ಗಣಪ, ದಿಗಂತ, ಭಟ್ಟರು, ಯೋಗಿ team ಸಿಕ್ಕರು ಮನಸೋ ಇಚ್ಚೆ ಮಾತಾಡಿ ಮನಸ್ಸು ಹಗುರ ಮಾಡಿಕೊಂಡು ಬಂದೆ!' ಎಂದಿದ್ದಾರೆ.

ಕೊರೊನಾ ಗೆ ಮನಸೋಇಚ್ಛೆ ಶಪಿಸಿದರಂತೆ ಜಗ್ಗೇಶ್
ಹರಟೆ ಹೊಡೆಯುವ ಜೊತೆಗೆ ಜೊತೆಗೆ ನಮ್ಮ ಈ ಸ್ಥಿತಿಗೆ ತಂದ ಕೊರೋನ ಚೈನ ಶಪಿಸಿದೆ! ಎಂದು ಸಹ ಜಗ್ಗೇಶ್ ಹೇಳಿದ್ದಾರೆ. ಜೊತೆಗೆ ಗಣೇಶ್, ದಿಗಂತ್, ಯೋಗರಾಜ್ ಭಟ್ ಅವರೊಟ್ಟಿಗಿನ ಚಿತ್ರ ಸಹ ಹಂಚಿಕೊಂಡಿದ್ದಾರೆ.

ವಿದೇಶ ಚಿತ್ರೀಕರಣ ರದ್ದು, ಭಾರತದಲ್ಲಿಯೇ ಶೂಟಿಂಗ್
ಗಾಳಿಪಟ 2 ಚಿತ್ರೀಕರಣ ಯೂರೋಪ್ ಸೇರಿದಂತೆ ಇನ್ನೂ ಕೆಲವು ಕಡೆ ನಡೆಯಬೇಕಿತ್ತು. ಆದರೆ ಕೊರೊನಾ ಕಾರಣದಿಂದಾಗಿ ವಿದೇಶದಲ್ಲಿ ನಡೆಸಲಿಚ್ಛಿಸಿದ್ದ ಚಿತ್ರೀಕರಣ ಬಂದ್ ಮಾಡಿ, ಹಿಮಾಚಲ ಪ್ರದೇಶದಲ್ಲಿಯೇ ಚಿತ್ರೀಕರಣ ನಡೆಸಲು ತಂಡ ನಿರ್ಣಯಿಸಿದೆ.

ಗಾಳಿಪಟ ಬಿಡುಗಡೆ ಆಗಿ 12 ವರ್ಷ ಆಗಿದೆ
ಸೂಪರ್ ಹಿಟ್ ಚಿತ್ರ ಗಾಳಿಪಟ ಬಿಡುಗಡೆ ಆಗಿ 12 ವರ್ಷಗಳ ನಂತರ ಗಾಳಿಪಟ 2 ಸಿನಿಮಾ ಬರುತ್ತಿದ್ದು, ಸಹಜವಾಗಿಯೇ ಭಾರಿ ಕುತೂಹಲವನ್ನು ಈ ಸಿನಿಮಾ ಕೆರಳಿಸಿದೆ. ಚಿತ್ರಕತೆ ಹೆಣೆಯುವುದರಲ್ಲಿ ಯೋಗರಾಜ್ ಭಟ್ ಜೊತೆಗೆ ಜಯಂತ್ ಕಾಯ್ಕಿಣಿ ಸಹ ಸೇರಿಕೊಂಡಿರುವುದು ಮತ್ತೊಂದು ವಿಶೇಷ.


Click it and Unblock the Notifications











