For Quick Alerts
  ALLOW NOTIFICATIONS  
  For Daily Alerts

  ಅಮ್ಮ ಪೂಜಿಸುತ್ತಿದ್ದ ಗಣಪ, ಇವನ ವಯಸ್ಸು ಇಂದಿಗೆ 45 ವರ್ಷ

  |

  45 ವರ್ಷದ ಬಹಳ ಹಿಂದಿನ ಗಣೇಶ ವಿಗ್ರಹದ ಫೋಟೋವನ್ನು ನಟ ಜಗ್ಗೇಶ್ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. 'ಈ ಗಣಪನನ್ನು ನಮ್ಮ ತಾಯಿ ಪೂಜಿಸುತ್ತಿದ್ದರು. ಈಗಲೂ ನಮ್ಮ ಮನೆಯಲ್ಲಿದೆ' ಎಂದು ನೆನಪು ಮೆಲುಕು ಹಾಕಿದ್ದಾರೆ.

  ''ಅಮ್ಮ ಪೂಜಿಸುತ್ತಿದ್ದ ಗಣಪ... ಇವನ ವಯಸ್ಸು ಇಂದಿಗೆ 45 ವರ್ಷ.. ನಾನು ನಟನಾಗುವಂತೆ, ಪರಿಮಳ ಮಡದಿಯಾಗುವಂತೆ ಪ್ರಾರ್ಥಿಸುತ್ತಿದ್ದ ಗಣನಾಥ... ಇಂದು ಕೋಮಲ್ ಮನೆಯ ಪೂಜಾಗೃಹದಲ್ಲಿ ವಿರಾಜಮಾನನಾಗಿ ಪೂಜೆ ಪಡೆದ ಕ್ಷಣ..'' ಎಂದು ಫೋಟೋ ಹಂಚಿಕೊಂಡಿದ್ದಾರೆ.

  ಕೋಮಲ್ ಹೊಸ ಚಿತ್ರದ ಬಗ್ಗೆ ಮಾಹಿತಿ ನೀಡಿದ ನರೇಂದ್ರ ಮೋದಿಕೋಮಲ್ ಹೊಸ ಚಿತ್ರದ ಬಗ್ಗೆ ಮಾಹಿತಿ ನೀಡಿದ ನರೇಂದ್ರ ಮೋದಿ

  ಈಗಾಗಲೇ ತಿಳಿದಿರುವಂತೆ ಜಗ್ಗೇಶ್ ಮತ್ತು ಪರಿಮಳ ಅವರದ್ದು ಪ್ರೇಮ ವಿವಾಹ. ಮನೆಯವರ ವಿರೋಧದ ನಡುವೆಯೂ ಪ್ರೀತಿಸಿ ಮದುವೆಯಾಗಿದ್ದರು. ಜಗ್ಗೇಶ್ ಮದುವೆ ವಿಚಾರ ಸುಪ್ರೀಂಕೋರ್ಟ್‌ನಲ್ಲಿ ಚರ್ಚೆಗೆ ಬಂದಿತ್ತು. ಪ್ರೀತಿಸಿದ ಹುಡುಗಿಯನ್ನು ಮದುವೆ ಆಗುವ ಈ ವಿಚಾರದಲ್ಲಿ ಈ ಗಣಪನ ಆಶೀರ್ವಾದ ಇತ್ತು ಎಂದು ಜಗ್ಗೇಶ್ ನೆನಪಿಸಿಕೊಂಡಿದ್ದಾರೆ.

  ಅಂದ್ಹಾಗೆ, ವಿಜಯ ಪ್ರಸಾದ್ ನಿರ್ದೇಶನದಲ್ಲಿ 'ತೋತಾಪುರಿ' ಸಿನಿಮಾದ ಚಿತ್ರೀಕರಣ ಮುಗಿಸಿದ ಜಗ್ಗೇಶ್ ಈಗ 'ಮಠ' ಗುರು ಪ್ರಸಾದ್ ಜೊತೆ 'ರಂಗನಾಯಕ' ಆರಂಭಿಸುತ್ತಿದ್ದಾರೆ.

  Recommended Video

  Yuvarathnaa Breaks Yuvarathna KGF Record, KGF ದಾಖಲೆ ಮುರಿದ ಯುವರತ್ನ | Filmibeat Kannada

  'ಕೆಂಪೇಗೌಡ-2' ಚಿತ್ರದ ಬಳಿಕ ನಟ ಕೋಮಲ್ 'ಅಯೋಗ್ಯ' ನಿರ್ಮಾಪಕ ಟಿಆರ್ ಚಂದ್ರಶೇಖರ್ ಜೊತೆ ಹೊಸ ಸಿನಿಮಾ ಮಾಡ್ತಿದ್ದಾರೆ. ಈ ಚಿತ್ರಕ್ಕೆ 'ರಾಬರ್ಟ್' ಸಿನಿಮಾಗೆ ಸಂಭಾಷಣೆ ರಚಿಸಿದ್ದ ರಾಜಶೇಖರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.

  English summary
  Kannada actor Jaggesh Shared 45 Years Old Ganesha idol from Komal's House.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X