ಅಪ್ಪನ ಕಾಸು ಕದ್ದು ಜಗ್ಗೇಶ್ ಈ ಸಿನಿಮಾ ನೋಡಿದ್ದರು
Recommended Video

ನಟ ಜಗ್ಗೇಶ್ ತಮ್ಮ ಹಳೆಯ ನೆನಪುಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳೊಂದಿಗೆ ಆಗಾಗ ಹಂಚಿಕೊಳ್ಳುತ್ತಿರುತ್ತಾರೆ. ಈಗ ಅದೇ ರೀತಿ ಒಂದು ಘಟನೆಯನ್ನು ಅವರು ಹೇಳಿಕೊಂಡಿದ್ದಾರೆ.
ಜಗ್ಗೇಶ್ ಬಡತನದ ಕುಟುಂಬದಲ್ಲಿ ಬೆಳೆದ ಹುಡುಗ. ಚಿಕ್ಕವಯಸ್ಸಿನಿಂದ ಸಿನಿಮಾ ಬಗ್ಗೆ ಪ್ರೀತಿ ಹೊಂದಿದ್ದ ಜಗ್ಗೇಶ್ ಒಂದು ಸಿನಿಮಾ ನೋಡಲು ಅಪ್ಪನ ಕಾಸು ಕಳವು ಮಾಡಿದ್ದರಂತೆ. ಜಗ್ಗೇಶ್ ಚಿಕ್ಕ ಹುಡುಗನಾಗಿದ್ದಾಗ ಡಾ.ವಿಷ್ಣುವರ್ಧನ್ ಅವರ 'ನಾಗರಹಾವು' ಸಿನಿಮಾ ಬಿಡುಗಡೆಯಾಗಿತ್ತು. ಆದರೆ, ಈ ಚಿತ್ರ ನೋಡಲು ಪುಟ್ಟ ಜಗ್ಗೇಶ್ ಬಳಿ ದುಡ್ಡು ಇರಲಿಲ್ಲ.

ಸಿನಿಮಾ ನೋಡುವ ಆಸೆ ಹೊಂದಿದ್ದ ಜಗ್ಗೇಶ್ ಅದಕ್ಕಾಗಿ ಅಪ್ಪನ ಅಂಗಡಿಯಲ್ಲಿ ದುಡ್ಡು ಕದ್ದಿದ್ದರಂತೆ. ಇತ್ತೀಚಿಗಷ್ಟೆ ಏನೋ ಹುಡುಕುವಾಗ ಆ ಫೋಟೋ ಸಿಕ್ಕಿದ್ದು, ಅದನ್ನು 'ಅಮರ ಹಳೆ ನೆನೆಪು' ಎಂದು ತಮ್ಮ ಇನ್ಟಾಗ್ರಾಮ್ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ.

ಅಂದಹಾಗೆ, 'ನಾಗರಹಾವು' ಸಿನಿಮಾ ಕಳೆದ ತಿಂಗಳು ಮರು ಬಿಡುಗಡೆಯಾಗಿದ್ದು, ಇನ್ನೂ ಕೂಡ ಸಿನಿಮಾ ಚಿತ್ರಮಂದಿರಗಳಲ್ಲಿ ಪ್ರದರ್ಶನ ಆಗುತ್ತಿದೆ. ನಟ ಜಗ್ಗೇಶ್ ಕೂಡ ಮತ್ತೆ ರಿಲೀಸ್ ಆಗಿರುವ ಈ ಸಿನಿಮಾವನ್ನು ನೋಡಿ ಖುಷಿ ಪಟ್ಟಿದ್ದಾರೆ.


Click it and Unblock the Notifications











