For Quick Alerts
  ALLOW NOTIFICATIONS  
  For Daily Alerts

  ಚಿತ್ರರಂಗಕ್ಕೆ ಜಗ್ಗೇಶ್ ಕುಟುಂಬದಿಂದ ಮತ್ತೊಂದು ಪ್ರತಿಭೆ ಎಂಟ್ರಿ!

  |

  ನವರಸ ನಾಯಕ ಜಗ್ಗೇಶ್ ಅವರ ಕುಟುಂಬದಿಂದ ಮತ್ತೊಂದು ಪ್ರತಿಭೆ ಚಿತ್ರರಂಗ ಪ್ರವೇಶಿಸಲು ಸಜ್ಜಾಗುತ್ತಿದೆ. ಸದ್ಯ ಜಗ್ಗೇಶ್ ಮತ್ತು ಅವರ ಮಕ್ಕಳಾದ ಗುರುರಾಜ್ ಹಾಗೂ ಯತಿರಾಜ್ ಇಂಡಸ್ಟ್ರಿಯಲ್ಲಿ ಗುರುತಿಸಿಕೊಂಡಿದ್ದಾರೆ.

  ವರ್ಷಗಳ ನಂತರ ಸಹೋದರಿಯರ ಭೇಟಿ ಮಾಡಿದ ಜಗ್ಗೇಶ್ವರ್ಷಗಳ ನಂತರ ಸಹೋದರಿಯರ ಭೇಟಿ ಮಾಡಿದ ಜಗ್ಗೇಶ್

  ಜೊತೆಗೆ ಜಗ್ಗೇಶ್ ಸಹೋದರ ಕೋಮಲ್ ಕುಮಾರ್ ಕೂಡ ಚಿತ್ರರಂಗದಲ್ಲಿದ್ದಾರೆ. ಇದೀಗ ಇನ್ನೊಬ್ಬ ನಟ ಸಿನಿಮಾ ಲೋಕಕ್ಕೆ ಬರಲು ರೆಡಿಯಾಗುತ್ತಿದ್ದಾರೆ. ಈ ವಿಚಾರವನ್ನು ಖುದ್ದು ಜಗ್ಗೇಶ್ ಬಹಿರಂಗಪಡಿಸಿದ್ದಾರೆ. ಯಾರದು? ಮುಂದೆ ಓದಿ....

  ಜಗ್ಗೇಶ್ ಅಕ್ಕನ ಮಗ ಸಿನಿಮಾ ಎಂಟ್ರಿ!

  ಜಗ್ಗೇಶ್ ಅಕ್ಕನ ಮಗ ಸಿನಿಮಾ ಎಂಟ್ರಿ!

  ಜಗ್ಗೇಶ್ ಅವರ ಎರಡನೇ ಅಕ್ಕನ ಮಗ ಸುಧೀಂದ್ರ ಅವರು ಚಿತ್ರರಂಗಕ್ಕೆ ಬರುವ ಸಾಧ್ಯತೆ ಇದೆ ಎಂದು ಪರೋಕ್ಷವಾಗಿ ಜಗ್ಗೇಶ್ ಸುಳಿವು ನೀಡಿದ್ದಾರೆ. ಜಗ್ಗೇಶ್ ಅವರಿಗೆ ಇಬ್ಬರು ಅಕ್ಕಂದಿರು. ಮೊದಲನೇ ಅಕ್ಕ ಮಹಾದೇವಿ. ಎರಡನೇ ಅಕ್ಕ ಡಾ ವಿಜಯಲಕ್ಷ್ಮಿ. ವಿಜಯಲಕ್ಷ್ಮಿ ಅವರ ಮಗ ಸುಧೀಂದ್ರ.

  'ಕನ್ನಡಿಗರು ಹೆಣ್ಣು ಸಿಂಹ, ಪರಭಾಷಿಕರು ಗಂಡು ಸಿಂಹ': ಜಗ್ಗೇಶ್ ಹೀಗೇಳಿದ್ದೇಕೆ?'ಕನ್ನಡಿಗರು ಹೆಣ್ಣು ಸಿಂಹ, ಪರಭಾಷಿಕರು ಗಂಡು ಸಿಂಹ': ಜಗ್ಗೇಶ್ ಹೀಗೇಳಿದ್ದೇಕೆ?

  ಲಾ ಮುಗಿಸಿರುವ ಸುಧೀಂದ್ರ

  ಲಾ ಮುಗಿಸಿರುವ ಸುಧೀಂದ್ರ

  ಸದ್ಯ ಸುಧೀಂದ್ರ ಅವರು ಲಾ ಮುಗಿಸಿದ್ದಾರೆ. ಅವರನ್ನು ನ್ಯಾಯಾಧೀಶರನ್ನಾಗಿಸಬೇಕು ಎನ್ನುವುದು ಜಗ್ಗೇಶ್ ಅವರ ಆಸೆಯಾಗಿದೆ. ಆದರೆ, ಸುಧೀಂದ್ರ ಅವರ ಆಸೆ ಬೇರೆಯೇ ಇದೆ. ಸುಧೀಂದ್ರ ಅವರಿಗೆ ನಟನಾಗಬೇಕು ಎಂಬ ಆಸೆ ಹೊಂದಿದ್ದಾರಂತೆ. ಅಲ್ಲಿಗೆ ಸಿನಿಮಾ ರಂಗ ಸುಧೀಂದ್ರ ಅವರನ್ನ ಸೆಳೆಯುತ್ತಿದೆ ಎನ್ನುವುದು ಈ ಮಾತಿನಲ್ಲಿ ಅರ್ಥವಾಗುತ್ತಿದೆ.

  ಗಮನ ಸೆಳೆಯುತ್ತಿದೆ ಟಿಕ್ ಟಾಕ್

  ಗಮನ ಸೆಳೆಯುತ್ತಿದೆ ಟಿಕ್ ಟಾಕ್

  ಜಗ್ಗೇಶ್ ಅವರ ಅಕ್ಕನ ಮಗ ಸುಧೀಂದ್ರ ಅವರು ಮಾವನ ಹಾಡಿಗೆ ಟಿಕ್ ಟಾಕ್ ಮಾಡಿದ್ದಾರೆ. ಈ ವಿಡಿಯೋವನ್ನು ಜಗ್ಗಣ್ಣ ತಮ್ಮ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೆಲವರು ಸಿನಿಮಾ ಮಾಡಲಿ ಬಿಡಿ ಎಂದು ಸಲಹೆ ನೀಡಿದರೆ, ಇನ್ನು ಕೆಲವರು ನ್ಯಾಯಾಧೀಶರಾಗುವುದೇ ಉತ್ತಮ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.

  '1 ಕೋಟಿ ಹಣಕ್ಕೆ ಬಾಯಿ ತೆಗೆದರೆ ನನ್ನ ವಿಷಯವು ಹೀಗೆ ಬರುವುದು'- ಜಗ್ಗೇಶ್ ಮಾತಿನ ಅರ್ಥ ಏನು?'1 ಕೋಟಿ ಹಣಕ್ಕೆ ಬಾಯಿ ತೆಗೆದರೆ ನನ್ನ ವಿಷಯವು ಹೀಗೆ ಬರುವುದು'- ಜಗ್ಗೇಶ್ ಮಾತಿನ ಅರ್ಥ ಏನು?

  ಹಣೆಬರಹ ಬಲ್ಲವರಾರು..!!

  ಹಣೆಬರಹ ಬಲ್ಲವರಾರು..!!

  ಕಳೆದ ತಿಂಗಳಲ್ಲಿ ಜಗ್ಗೇಶ್ ಅವರ ತಮ್ಮ ಸಹೋದರಿಯರ ಫೋಟೋ ಹಂಚಿಕೊಂಡಿದ್ದರು. ಇನ್ನು 'ಸುಧೀಂದ್ರ ಅವರ ಹಣೆಬರಹದಲ್ಲಿ ಏನಿದ್ಯೋ ಯಾರಿಗೆ ಗೊತ್ತು' ಎನ್ನುವ ಮೂಲಕ ಮುಂದಿನ ದಿನದಲ್ಲಿ ಚಿತ್ರರಂಗಕ್ಕೆ ಬಂದರೂ ಬರಬಹುದು ಎಂದು ಕುತೂಹಲ ಮೂಡಿಸಿದ್ದಾರೆ.

  English summary
  Kannada actor Jaggesh shared his Nephew sudheendra's Tik Tok video.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X