ನಟನಾಗುವ ಮುನ್ನಾ ಪಟ್ಟ ಕಷ್ಟಗಳನ್ನು ಅಭಿಮಾನಿಯೊಂದಿಗೆ ಹಂಚಿಕೊಂಡ ಜಗ್ಗೇಶ್
ನಟ ಜಗ್ಗೇಶ್ ಅನುಭವಿ ಮತ್ತು ಹಿರಿಯ ನಟ. ಅವರ ಅನುಭವ, ಹಿರಿತನವನ್ನು ಹಾಗೆಯೇ ವ್ಯರ್ಥವಾಗಲು ಬಿಡದೆ ಸಾಮಾಜಿಕ ಜಾಲತಾಣದ ಮೂಲಕ ಜನರಿಗೆ, ಅಭಿಮಾನಿಗಳಿಗೆ ಸ್ಪೂರ್ತಿ ತುಂಬುವ ಕಾರ್ಯ ಮಾಡುತ್ತಿದ್ದಾರೆ.
Recommended Video
ಅಭಿಮಾನಿಗಳೊಂದಿಗೆ ಸದಾ ಸಾಮಾಜಿಕ ಜಾಲತಾಣದ ಮೂಲಕ ಸಂಪರ್ಕದಲ್ಲಿರುವ ಜಗ್ಗೇಶ್ ಅವರು ಹಿರಿಯಣ್ಣನಂತೆ ಸಲಹೆಗಳನ್ನು ನೀಡುತ್ತಾ, ಸ್ಪೂರ್ತಿಯ ಮಾತುಗಳು ಹೇಳುತ್ತಿರುತ್ತಾರೆ.
ಸಾಕಷ್ಟು ಮಂದಿ ತಮ್ಮ ಸಮಸ್ಯೆಗಳನ್ನು ಟ್ವಿಟ್ಟರ್ ಮೂಲಕ ಜಗ್ಗೇಶ್ ಅವರ ಬಳಿ ಹೇಳಿಕೊಳ್ಳುತ್ತಾರೆ. ಅವರಿಗೆ ಕೇವಲ ಒಣುಪದೇಶ ನೀಡದೆ, ತಮ್ಮ ಜೀವನದ ಘಟನೆಗಳನ್ನೇ ಹೆಕ್ಕಿ ಹೇಳಿ ತಿಳಿಸಿ ಬದುಕಲು ಧೈರ್ಯತುಂಬುತ್ತಾರೆ.
ಇತ್ತೀಚೆಗೆ ವ್ಯಕ್ತಿಯೊಬ್ಬರು ತಾವು ಎದುರಿಸುತ್ತಿರುವ ಕಷ್ಟಗಳ ಬಗ್ಗೆ ಜಗ್ಗೇಶ್ ಅವರ ಬಳಿ ಹೇಳಿಕೊಂಡಾಗ, ತಾವು ಆರಂಭದಲ್ಲಿ ಎಂಥಹಾ ಕಷ್ಟದ ದಿನಗಳನ್ನು ಎದುರಿಸಿದ್ದೆ ಎಂಬುದನ್ನು ತಿಳಿಸಿ ಹೇಳಿದ್ದಾರೆ ಜಗ್ಗೇಶ್.

ತಮ್ಮ ಕಷ್ಟದ ದಿನಗಳ ನೆನಪು ಹಂಚಿಕೊಂಡ ಜಗ್ಗೇಶ್
ಇತ್ತೀಚೆಗೆ ವ್ಯಕ್ತಿಯೊಬ್ಬರು ತಾವು ಎದುರಿಸುತ್ತಿರುವ ಕಷ್ಟಗಳ ಬಗ್ಗೆ ಜಗ್ಗೇಶ್ ಅವರ ಬಳಿ ಹೇಳಿಕೊಂಡಾಗ, ತಾವು ಆರಂಭದಲ್ಲಿ ಎಂಥಹಾ ಕಷ್ಟದ ದಿನಗಳನ್ನು ಎದುರಿಸಿದ್ದೆ ಎಂಬುದನ್ನು ತಿಳಿಸಿ ಹೇಳಿದ್ದಾರೆ ಜಗ್ಗೇಶ್.

ಯುವಕನೊಬ್ಬ ಕಷ್ಟ ಹೇಳಿಕೊಂಡ
'ಕಳೆದ 7-8 ವರ್ಷಗಳಿಂದ ಸರ್ಕಾರಿ ಕೆಲಸಕ್ಕೆ ಪ್ರಯತ್ನಿಸಿ ಸಾಕಾಗಿರುವೆ ನನಗೆ ಆಸ್ತಿ ಇಲ್ಲಾ ಎಂಬುದು ನನ್ನ ಮಾವನ ಮನೆಯವರ ಕೋಪಕ್ಕೆ ಕಾರಣ ಜೊತೆಗೆ ನಾವು ಕ್ಷೌರಿಕರು ಎಂಬುದು. ಹೆಂಡತಿ ಮನೆಯವರು ಬರುತ್ತಿಲ್ಲ ಎಂಬ ಚಿಂತೆಯಲ್ಲಿ ಮುಳುಗಿ ದರೆ ನನಗೆ ಕೆಲಸವಿಲ್ಲದ ಯೋಚನೆ. ನನ್ನ ಪ್ರತಿಯೊಂದು ಕೆಲಸಕ್ಕೂ ವಿಘ್ನಗಳೇ ಹೆಚ್ಚು' ಎಂದು ತಾವು ಅನುಭವಿಸುತ್ತಿರುವ ಸಮಸ್ಯೆ, ಮಾನಸಿಕ ತುಮುಲವನ್ನು ಜಗ್ಗೇಶ್ ಅವರ ಬಳಿ ಹೇಳಿಕೊಂಡಿದ್ದಾರೆ.

ಮೈಸೂರು ಕ್ವಾಲಿಟಿ ಬಾರ್‌ನಲ್ಲಿ ಕೆಲಸ
ಇದಕ್ಕೆ ಪ್ರತಿಕ್ರಿಯಿಸಿರುವ ಜಗ್ಗೇಶ್, 'ನಾನು ನನ್ನಆರಂಭದ ದಿನದಲ್ಲಿ ಮೈಸೂರು ಕ್ವಾಲಿಟಿಬಾರ್ ನಲ್ಲಿ ಹಾಗೂ ಚಾಮುಂಡೇಶ್ವರಿ ಚಿತ್ರ ಮಂದಿರ ಪಕ್ಕದ ಮಾರ್ಡನ್ ಕೆಫೆಯಲ್ಲಿ ಸಪ್ಲೈಯರ್ ಆಗಿ. ಪೂನ ಕುದುರೆ ಲಾಯದಲ್ಲಿ ಕೆಲಸಮಾಡಿದೆ. ಕಾರಣ ಸ್ವಾಭಿಮಾನ. ಹೆಣ ಹೋರುವವಗೆ ಹಿಂದಾಗಲಿ ಮುಂದಾಗಲಿ ಕಾರಣವೇಕೆ ಬೇಕು. ಕಾಯಕ ಯಾವುದಾದರೇನು ಅದರಲ್ಲಿಯೇ ಕೈಲಾಸ ಕಾಣಿ. ಬದುಕಿಗೆ ಪ್ರತಿಷ್ಟೆ ಬೇಡ ದುಡ್ಡಿದ್ದರೆ ದುನಿಯ' ಎಂದಿದ್ದಾರೆ ಜಗ್ಗೇಶ್.

ಬಾರ್, ಹೋಟೆಲ್, ಕುದುರೆ ಲಾಯದಲ್ಲಿ ಕೆಲಸ
ಜಗ್ಗೇಶ್ ಅವರು ತಮ್ಮ ಆರಂಭದ ದಿನದಲ್ಲಿ ಬಾರ್ ನಲ್ಲಿ, ಹಾಗೂ ಹೋಟೆಲ್ ನಲ್ಲಿ ಸಪ್ಲೈಯರ್ ಆಗಿ ದುಡಿದಿದ್ದು ಮತ್ತು ಕುದುರೆ ಲಾಯದಲ್ಲಿ ಕೆಲಸ ಮಾಡಿದ್ದ ವಿಷಯ ಹಲವರಿಗೆ ಗೊತ್ತಿಲ್ಲ. ಈ ವಿಷಯ ತಿಳಿದು ಅವರ ಅಭಿಮಾನಿಗಳೇ ಆಶ್ಚರ್ಯ ಪಟ್ಟಿದ್ದಾರೆ.


Click it and Unblock the Notifications











