ಜಗ್ಗೇಶ್-ಪರಿಮಳ ಪ್ರೀತಿ ಎಷ್ಟು ಗಟ್ಟಿಯಾದದ್ದು ಎಂಬುದಕ್ಕೆ ಇದೇ ಸಾಕ್ಷಿ.!

ನವರಸ ನಾಯಕ ಜಗ್ಗೇಶ್ ಮತ್ತು ಅವರ ಪತ್ನಿ ಪರಿಮಳ ಅವರ ಲವ್ ಸ್ಟೋರಿಯ ಬಗ್ಗೆ ಈಗಾಗಲೇ ಹಲವು ವಿಷ್ಯಗಳು ಎಲ್ಲರಿಗೂ ಗೊತ್ತಿದೆ. ಹಲವು ಕಾರ್ಯಕ್ರಮ, ಹಲವು ವೇದಿಕೆಗಳಲ್ಲಿ ಸ್ವತಃ ಜಗ್ಗೇಶ್ ಅವರೇ ತಮ್ಮ ಲವ್ ಸ್ಟೋರಿ ಬಗ್ಗೆ ಮಾತನಾಡಿದ್ದರು.

ಇದೀಗ, ಜಗ್ಗೇಶ್ ಅವರ ಹಳೇ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, 35 ವರ್ಷದ ಹಿಂದಿನ ಒಂದು ಘಟನೆಯೊಂದನ್ನ ಟ್ವಿಟ್ಟರ್ ಮೂಲಕ ಹಂಚಿಕೊಂಡಿದ್ದಾರೆ.

ಈ ಫೋಟೋ ಹಿಂದೆ ಒಂದು ಮಧುರವಾದ ನೆನಪು ಅಡಗಿದೆ. ಅದನ್ನ ಸ್ವತಃ ಜಗ್ಗಣ್ಣ ಹೇಳಿಕೊಂಡಿದ್ದಾರೆ. ಮಂತ್ರಾಲಯದ ತುಂಗಭದ್ರ ನದಿಯ ಮಧ್ಯದಲ್ಲಿರುವ ಬಂಡೆಯ ಮೇಲೆ ಜಗ್ಗೇಶ್ ಮತ್ತು ಪರಿಮಳ ಹೆಸರನ್ನ ಕಲ್ಲಿನಿಂದ ಕೆತ್ತಲಾಗಿದೆ. ನದಿಯ ನೀರು ಸ್ವಲ್ಪ ಕಡಿಮೆಯಾದಾಗ ಈ ಸ್ಥಳಕ್ಕೆ ಭೇಟಿ ನೀಡಬಹುದು. ಹೀಗೆ, ಒಮ್ಮೆ ಜಗ್ಗೇಶ್ ಅವರು ಹೋಗಿ ಫೋಟೋ ಕ್ಲಿಕ್ಕಿಸುತ್ತಿರುವ ಫೋಟೋ ಒಂದು ರಿವೀಲ್ ಆಗಿದೆ.

Jaggesh shares his old photo

ಈ ಫೋಟೋವನ್ನ ನೋಡಿದ ಜಗ್ಗೇಶ್ ತಮ್ಮ ಹಳೆಯ ನೆನಪನ್ನ ಹಂಚಿಕೊಂಡಿದ್ದಾರೆ. 1983, ನವೆಂಬರ್ 17 ರಂದು ಈ ಹೆಸರನ್ನ ಬರೆಯಲಾಗಿತ್ತು. ಈ ದಾಖಲೆಯ ಪ್ರಕಾರ, ಜಗ್ಗೇಶ್ ಮತ್ತು ಪರಿಮಳ ಪ್ರೀತಿಗೆ 35 ವರ್ಷದ ಸಂಭ್ರಮ.

'ಅಂದು ಮಂತ್ರಾಲಯ ಹಳೆ ಊರಿನಂತೆ ಇತ್ತು. ಆಗ ನನಗೆ 20ವರ್ಷ. ಚಿರಾಯು ಆಗಲಿ ನಮ್ಮ ಸಂಬಂಧ ಎಂದು ರಾಯರ ಮಡಿಲಲ್ಲಿ ಅರ್ಧ ದಿನ ಕೂತು ನಾನೆ ಕೈಯಾರೆ ಕತ್ತಿದೆ. ಅಂದು ಪ್ರೇಮಕ್ಕಾಗಿ ಕೆತ್ತಿದ್ದು ಇಂದು ಅಮರ ಹಳೆ ನೆನಪು.. ಮಂತ್ರಾಲಯಕ್ಕೆ ಹೋದರೆ ಈಗಲು ಅಲ್ಲಿ ಕುಳಿತು ಅಂದಿನ ಕಾಸಿಲ್ಲದ ಕಷ್ಟದ ದಿನಗಳ ನೆನೆದು ಬರುವೆ. ಧನ್ಯವಾದ ನೆನಪಿಸಿದ್ದಕ್ಕೆ'' ಎಂದು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

More from Filmibeat

English summary
On November 17, 1983, Actor Jaggesh and Parimala carved their names on a rock in the middle of the Tungabhadra River in Mantralaya.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X