ಡಾ ರಾಜ್ ಕುಮಾರ್ ಅವರ ನೆಚ್ಚಿನ ಟಿವಿ ಬಗ್ಗೆ ಜಗ್ಗೇಶ್ ಹೇಳಿದ ಕಥೆ
ವರನಟ ಡಾ ರಾಜ್ ಕುಮಾರ್ ಅಂದ್ರೆ ಜಗ್ಗೇಶ್ ಅವರಿಗೆ ಬಹಳ ಅಭಿಮಾನ ಮತ್ತು ಪ್ರೀತಿ. ತಮ್ಮ ಜೀವನದಲ್ಲಿ ಅಣ್ಣಾವ್ರನ್ನು ಬಹಳ ವಿಷಯಗಳಲ್ಲಿ ಸ್ಫೂರ್ತಿಯಾಗಿಸಿಕೊಂಡಿದ್ದಾರೆ. ರಾಜಣ್ಣನ ಬದುಕು, ಅವರ ನುಡಿ, ಅವರ ನಡೆಯನ್ನು ಕಣ್ಣಾರೆ ಕಂಡ ಜಗ್ಗೇಶ್ ಅದನ್ನು ಅನುಕರಿಸುತ್ತಿದ್ದಾರೆ.
ಇಂದಿನ ಯುವ ಕಲಾವಿದರಿಗೆ ಹಾಗೂ ಸಿನಿಮಾ ಮಂದಿಗೆ ಕಿವಿಮಾತು ಹೇಳಬೇಕು ಎನಿಸಿದರೆ ಮೊದಲ ಉದಾಹರಣೆ ನೀಡುವುದೇ ಅಣ್ಣಾವ್ರನ್ನ. ರಾಜ್ ಕುಮಾರ್ ಮತ್ತು ಜಗ್ಗೇಶ್ ಅವರ ಬಾಂಧವ್ಯದ ಬಗ್ಗೆ ಎಷ್ಟೇ ಹೇಳಿದರೂ ಕಡಿಮೆಯೇ.
ಅಣ್ಣಾವ್ರ ಬಗ್ಗೆ ಅನೇಕ ನೆನಪುಗಳನ್ನು ಹೊಂದಿರುವ ಜಗ್ಗೇಶ್ ಈಗ ರಾಜ್ ಕುಮಾರ್ ಅವರ ನೆಚ್ಚಿನ ಟಿವಿ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ರಾಜ್ ಇಷ್ಟಪಟ್ಟು ಇಟ್ಟುಕೊಂಡಿದ್ದ ಟಿವಿಯ ಬಗ್ಗೆ ಈಗ ಜಗ್ಗೇಶ್ ಮಾತನಾಡಿದ್ದಾರೆ.

ಈ ಕುರಿತು ಟ್ವಿಟ್ಟರ್‌ನಲ್ಲಿ ಬರೆದುಕೊಂಡಿರುವ ಜಗ್ಗೇಶ್ ''ರಾಜಣ್ಣನ favorite TV... ನಾನು ರಾಜಣ್ಣನ ನೋಡಲು ಅವರ ಮನೆಗೆ ಹೋದಾಗ ಅಣ್ಣ ಅವರ ಹಾಲ್‌ನಲ್ಲಿ 'ಎರಡು ಕನಸು' ಚಿತ್ರದ ಹಾಡು 'ಎಂದೆದು ನಿನ್ನನು ಮರೆತು' ಹಾಡು ನೋಡುತ್ತ ಆ ಸನ್ನಿವೇಶ ಊಟದ ಬ್ರೇಕ್ ನಂತರ ತೆಗೆದದ್ದು ಎಂದು ನಿಕರವಾಗಿ ನೆನೆದು ಹೇಳಿದ್ದರು! ಅಣ್ಣನ ಟಿವಿಯ ಚಿತ್ರ ನಾನು ಯಾವಾಗಲೋ ತೆಗೆದು ಇಟ್ಟಿದ್ದೆ. ಅದು ಇಂದು ನನಗೆ ಸಿಕ್ಕಿತು! ಅಣ್ಣನ TV'' ಎಂದು ಸಂತಸ ಹಂಚಿಕೊಂಡಿದ್ದಾರೆ.
ಇನ್ನು ಗುರುಪ್ರಸಾದ್ ನಿರ್ದೇಶನ ಮಾಡುತ್ತಿರುವ 'ರಂಗನಾಯಕ' ಎಂಬ ಚಿತ್ರದಲ್ಲಿ ಜಗ್ಗೇಶ್ ನಟಿಸುತ್ತಿದ್ದಾರೆ.


Click it and Unblock the Notifications











