For Quick Alerts
  ALLOW NOTIFICATIONS  
  For Daily Alerts

  ಸಿನಿಮಾ ಹಿಟ್ ಆದರೂ ಸಂಬಳ ಕೊಡದೆ ಜಗ್ಗೇಶ್‌ಗೆ ನಿರ್ಮಾಪಕರ ಮೋಸ

  |

  ಚಂದನವನದ ಹಿರಿಯ ನಟ ಜಗ್ಗೇಶ್ ತಮ್ಮ ಕಷ್ಟದ ದಿನಗಳನ್ನು ಆಗಾಗ ನೆನಪಿಸಿಕೊಳ್ಳುತ್ತಿರುತ್ತಾರೆ. ಇಂದು ಸ್ಟಾರ್ ಆಗಿ ಗುರುತಿಸಿಕೊಂಡಿರುವ ಜಗ್ಗೇಶ್ ಈ ಸ್ಥಾನಕ್ಕೆ ಬರಲು ತುಂಬಾ ಶ್ರಮಿಸಿದ್ದಾರೆ. ಕಷ್ಟ ಪಟ್ಟು ಬೆಳೆದು ಬಂದ ನಟ ಜಗ್ಗೇಶ್. ಅಂದು ಎಷ್ಟು ಕಷ್ಟವಿತ್ತೆಂದರೆ ಸಿನಿಮಾ ಹಿಟ್ ಆದರೂ ಸಂಬಳಕ್ಕಾಗಿ ಪರದಾಡಬೇಕಿತ್ತು ಅಂತ ಕಾಲವಿತ್ತು.

  Jaggesh ಅವರು ಬಾಡಿಗೆ ಮನೆಯ ನೆನಪು ಮಾಡಿಕೊಂಡಿದ್ದು ಹೀಗೆ | Filmibeat Kannada

  ನಿರ್ಮಾಪಕರಿಂದ ಸಂಬಳ ಪಡೆದುಕೊಳ್ಳುವುದು ಸಹ ಒಂದು ಸಾಹಸವಾಗಿತ್ತು. ಚಿತ್ರರಂಗದ ಕಷ್ಟದ ದಿನಗಳನ್ನು, ತಾವು ಎದುರಿಸಿದ ಕಷ್ಟವನ್ನು ಜಗ್ಗೇಶ್ ಆಗಾಗ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುವ ಜಗ್ಗೇಶ್ ಆಗಾಗ ಅನೇಕ ಪೋಸ್ಟ್ ಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಜಗ್ಗೇಶ್ ಸಂಬಳ ಕೊಡದೆ ಮೋಸ ಮಾಡಿದ ನಿರ್ಮಾಪಕರ ಬಗ್ಗೆ ಬರೆದುಕೊಂಡಿದ್ದಾರೆ. ಮುಂದೆ ಓದಿ...

  'ನನ್ನ ತಂದೆ ಸತ್ತಾಗಲು ಹಾಗೆ ಆಯಿತು': ಅಣ್ಣಾವ್ರ ಸಾವಿನ ದಿನ ನೆನೆದ ಜಗ್ಗೇಶ್

  ರಾಯರ ಮಗ ಸಿನಿಮಾದ ಅನುಭವ ಬಿಚ್ಚಿಟ್ಟ ಜಗ್ಗೇಶ್

  ರಾಯರ ಮಗ ಸಿನಿಮಾದ ಅನುಭವ ಬಿಚ್ಚಿಟ್ಟ ಜಗ್ಗೇಶ್

  ಇತ್ತೀಚಿಗೆ ಜಗ್ಗೇಶ್ ತನಗೆ ಸಂಬಳ ಕೊಡದೆ ಮೋಸ ಮಾಡಿದ ನಿರ್ಮಾಪಕರ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಸಿನಿಮಾ ಸೂಪರ್ ಹಿಟ್ ಆದರೂ ಸಂಬಳ ಕೊಡದೆ ಇದ್ದ ಕಾಲದಲ್ಲಿ ಬದುಕಿದವರು ಎಂದು ಜಗ್ಗೇಶ್ ಬರೆದುಕೊಂಡಿದ್ದಾರೆ. 'ರಾಯರ ಮಗ' ಸಿನಿಮಾದ ಒಂದು ಅನುಭವವನ್ನು ಜಗ್ಗೇಶ್ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.

  ಸಿನಿಮಾ ಹಿಟ್ ಆದರೂ ಜಗ್ಗೇಶ್ ಸಿಕ್ಕಿರಲಿಲ್ಲ ಸಂಬಳ

  ಸಿನಿಮಾ ಹಿಟ್ ಆದರೂ ಜಗ್ಗೇಶ್ ಸಿಕ್ಕಿರಲಿಲ್ಲ ಸಂಬಳ

  1994ರಲ್ಲಿ ತೆರೆಗೆ ಬಂದ ಜಗ್ಗೇಶ್ ನಟನೆಯ 'ರಾಯರಮಗ' ಸಿನಿಮಾ ಅಂದಿನ ಮೆಗಾಹಿಟ್ ಸಿನಿಮಾಗಳಲ್ಲಿ ಒಂದು. ಜಗ್ಗೇಶ್, ಲಕ್ಷ್ಮಿ, ರಾಜೇಶ್, ಶ್ರೀನಾಥ್ ಸೇರಿದಂತೆ ದೊಡ್ಡ ದೊಡ್ಡ ಕಲಾವಿದರು ಇದ್ದ ಸಿನಿಮಾ. ಸಿನಿಮಾ ಸೂಪರ್ ಹಿಟ್ ಆದರೂ ಜಗ್ಗೇಶ್‌ಗೆ ಸಂಬಳ ಕೊಡದೆ ನಿರ್ಮಾಪಕರು ಮೋಸ ಮಾಡಿದ್ದಾರಂತೆ. ಈ ಬಗ್ಗೆ ಜಗ್ಗೇಶ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

  1994ರಲ್ಲಿ ಬಂದ ಸಿನಿಮಾ

  1994ರಲ್ಲಿ ಬಂದ ಸಿನಿಮಾ

  '1994 ರಾಯರ ಮಗ ಚಿತ್ರ. ಇಂದಿನ ಪೊಗರು ನಿರ್ಮಾಪಕ ಗಂಗಾಧರ ಅವರ ತಂದೆ ಈ ಚಿತ್ರದ ವಿತರಕರು. ಅಂದಿನ ಮೆಗಾಹಿಟ್ ಚಿತ್ರ. ಆದರು ನನಗೆ ಸ್ವಂತ ಮನೆಯಿರಲಿಲ್ಲ 4000 ಬಾಡಿಗೆ ಮನೆಯಲ್ಲಿ ಇದ್ದೆ. ಈ ಚಿತ್ರದ ನಿರ್ಮಾಪಕ ನನಗೆ ಸಂಬಳ ಕೊಡದೆ ಮೋಸ ಮಾಡಿದ. ಸಾಲ ಮಾಡಿ ಸಂಸಾರ ನಿಭಾಯಿಸುತ್ತಿದ್ದೆ. ಹಿಟ್ ಕೊಟ್ಟರು ಕಾಸಿಲ್ಲದೆ ಬರಿ ಹೆಸರಿಗೆ ಬದುಕಿದವರು ಅಂದು' ಎಂದು ಬರೆದುಕೊಂಡಿದ್ದಾರೆ.

  ಅಮ್ಮ ಪೂಜಿಸುತ್ತಿದ್ದ ಗಣಪ, ಇವನ ವಯಸ್ಸು ಇಂದಿಗೆ 45 ವರ್ಷ

  ಜಗ್ಗೇಶ್ ಬಳಿ ಇರುವ ಸಿನಿಮಾಗಳು

  ಜಗ್ಗೇಶ್ ಬಳಿ ಇರುವ ಸಿನಿಮಾಗಳು

  ನಟ ಜಗ್ಗೇಶ್ ಅನೇಕ ಅದ್ಭುತ ಸಿನಿಮಾಗಳಲ್ಲಿ ನಟಿಸಿದ್ದಾರೆ. ನಟನೆಯ ಜೊತೆಗೆ ಎರಡು ಸಿನಿಮಾಗಳನ್ನು ನಿರ್ದೇಶನ ಕೂಡ ಮಾಡಿದ್ದಾರೆ. ಸದ್ಯ ಸಿನಿಮಾ ಜೊತೆಗೆ ಜಗ್ಗೇಶ್ ಕಿರುತೆರೆಯಲ್ಲೂ ಬ್ಯುಸಿಯಾಗಿದ್ದಾರೆ. ಜಗ್ಗೇಶ್ ಕೊನೆಯದಾಗಿ ಕಾಳಿದಾಸ ಕನ್ನಡ ಮೇಷ್ಟ್ರು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ತೋತಾಪುರಿ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಇನ್ನು ಮಠ ಗುರುಪ್ರಸಾದ್ ಅವರ ರಂಗನಾಯಕ ಸಿನಿಮಾದಲ್ಲಿ ನಟಿಸಲು ಸಜ್ಜಾಗಿದ್ದಾರೆ.

  English summary
  Actor Jaggesh shares Rayara Maga movie producer cheating story.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X