For Quick Alerts
  ALLOW NOTIFICATIONS  
  For Daily Alerts

  ಜಗ್ಗೇಶ್ ಬಗ್ಗೆ ಎನ್.ಟಿ.ಆರ್ ನುಡಿದಿದ್ದ ಭವಿಷ್ಯ ನಿಜವಾಯ್ತು.!

  By Bharath Kumar
  |
  N .T .R ಹೇಳಿದ ಮಾತು ನೆನೆದು ಭಾವುಕರಾದ ಜಗ್ಗೇಶ್ | Filmibeat Kannada

  ನವರಸ ನಾಯಕ ಜಗ್ಗೇಶ್ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು ಪೋಷಕ ನಟನಾಗಿ. ಆರಂಭದ ದಿನಗಳಲ್ಲಿ ಖಳನಾಯಕನಾಗಿ, ಹಾಸ್ಯನಟನಾಗಿ ತನ್ನ ಪ್ರತಿಭೆಯ ಸಾಮರ್ಥ್ಯ ಪರಿಚಯಿಸಿದ ಜಗ್ಗೇಶ್ ನಂತರ ಹೀರೋ ಆಗಿದ್ದು ಈಗ ಇತಿಹಾಸ.

  ಜಗ್ಗೇಶ್ ಅವರ ಬಗ್ಗೆ ಆಗಾಗಲೇ ತೆಲುಗಿನ ಸೂಪರ್ ಸ್ಟಾರ್ ನಟರೊಬ್ಬರು ಭವಿಷ್ಯ ನುಡಿದಿದ್ದರಂತೆ. ''ಮುಂದಿನ ದಿನದಲ್ಲಿ ನೀನೊಬ್ಬ ದೊಡ್ಡ ನಟನಾಗಿ ಬೆಳೆಯುತ್ತೀಯಾ'' ಎಂದಿದ್ದರಂತೆ. ಅದು ಈಗ ನಿಜವಾಗಿದೆ. ಇಂತಹ ಸಂದರ್ಭದಲ್ಲಿ ಆ ನಟನನ್ನ ಜಗ್ಗೇಶ್ ಅರು ನೆನಪಿಸಿಕೊಂಡಿದ್ದಾರೆ.

  ದರ್ಶನ್-ಸುದೀಪ್ ವಿಚಾರದಲ್ಲಿ ಹೊಸ ಭರವಸೆ ಮೂಡಿಸಿದ ಜಗ್ಗೇಶ್ ಟ್ವೀಟ್ದರ್ಶನ್-ಸುದೀಪ್ ವಿಚಾರದಲ್ಲಿ ಹೊಸ ಭರವಸೆ ಮೂಡಿಸಿದ ಜಗ್ಗೇಶ್ ಟ್ವೀಟ್

  ಹೌದು, ಜಗ್ಗೇಶ್ ಅವರ ಬಗ್ಗೆ ಈ ರೀತಿ ಭವಿಷ್ಯ ಹೇಳಿದಿದ್ದು ತೆಲುಗು ಸೂಪರ್ ಸ್ಟಾರ್ ನಟ ಎನ್.ಟಿ.ರಾಮರಾವ್ (NTR). ಈ ಬಗ್ಗೆ ಟ್ವೀಟ್ ಮಾಡಿರುವ ಜಗ್ಗೇಶ್ ಶ್ರೇಷ್ಠ ನಟನ ಬಗ್ಗೆ ಅಭಿಮಾನ ಮೆರೆದಿದ್ದಾರೆ.

  ''NTR ಶ್ರೇಷ್ಟ ನಟ..ಖ್ಯಾತ ನಿರ್ದೇಶಕ ಹಾಗೂ ಬಾಹುಬಲಿ ಚಿತ್ರದ ನಿರ್ಮಾಪಕ ಕೆ.ರಾಘವೇಂದ್ರ ರಾವ್ ನನ್ನನ್ನು ಅಂದು ಈ ಮಹನೀಯನಿಗೆ ಭೇಟಿ ಮಾಡಿಸಿದ್ದರು. ಆಗ ಅವರು ಹರಸಿದ್ದು "ಬ್ರದರ್ ಒಕ ರೋಜು ಮೀರು ಗೊಪ್ಪನಟುಡುಗ ಪೆರುಗುತಾರನ್ನಿ ಮಾ ಮನಂ ಚೆಪ್ಪುತಾವುಂದಿ'' ಅಂದರು. ಅಂದರೆ ಮುಂದೆ ನೀವು ದೊಡ್ಡ ನಟ ಆಗುತ್ತೀರಿ ಎಂದು. ಆಗ ನಾನು ಸಣ್ಣ ಪೋಷಕ ನಟನಾಗಿದ್ದೆ.'' ಎಂದು ಹಳೆಯ ಘಟನೆಯನ್ನ ಸ್ಮರಿಸಿಕೊಂಡಿದ್ದಾರೆ.

  ಸದ್ಯ ಜಗ್ಗೇಶ್ ಅವರು '8 ಎಂಎಂ' ಚಿತ್ರದಲ್ಲಿ ನಟಿಸಿದ್ದಾರೆ. ಜೀ ಕನ್ನಡದಲ್ಲಿ 'ಕಾಮಿಡಿ ಕಿಲಾಡಿಗಳು-2' ಕಾರ್ಯಕ್ರಮದ ತೀರ್ಪುಗಾರಗಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

  English summary
  Kannada actor jaggesh has taken his twitter account to share Telugu Superstar Nt Rama rao's old photo.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X