ಒಂದೆರಡು ಚಿತ್ರಕ್ಕೆ ಜಗದೇಕವೀರರಂತೆ ಮಾತಾಡಬೇಡಿ ; ಚೇತನ್ ವಿರುದ್ಧ ಜಗ್ಗೇಶ್ ಧಗಧಗ

ಮಾತು ಬೆಳ್ಳಿ ಮೌನ ಬಂಗಾರ ಎಂಬ ಮಾತು ಶತಶತಮಾನಗಳಿಂದ ಚಾಲನೆಯಲ್ಲಿದೆ. ಈ ಮಾತಿಗೆ ವಿವಿಧ ಕಾಲಗಳಲ್ಲಿ ವಿವಿಧ ವಿವರಣೆಗಳನ್ನು ಕೂಡ ನೀಡಲಾಗಿದೆ. ಮಾತಿನಲ್ಲಿಯೇ ಕಾಲಹರಣ ಮಾಡುವರಿಗಾಗಿಯೇ ಈ ಮಾತನ್ನು ಹೇಳಲಾಗಿದೆಯಾ ಗೊತ್ತಿಲ್ಲ. ಇನ್ನು ಮಾತು ಕೆಲವೊಮ್ಮೆ ಪವಾಡವನ್ನು ಮಾಡಬಹುದು. ಬದುಕಿನಲ್ಲಿ ನಿರಾಶೆಯಾದವರಿಗೆ ಭರವಸೆಯನ್ನು ನೀಡಬಹುದು. ಬದುಕಿನ ಜಂಜಾಟದಲ್ಲಿ ನರಳುವವರಿಗೆ ಹೊಸ ಜೀವನವನ್ನು ಕೂಡ ನೀಡಬಲ್ಲದು.

ಆದರೆ ಈಗೀಗ ಈ ಮಾತು ಮನೆಯನ್ನು ಕೆಡಿಸುತ್ತಿದೆ. ಮನಸನ್ನು ಕೂಡ ಕೆಡಿಸುತ್ತಿದೆ. ದ್ವೇಷವನ್ನು ಬಿತ್ತುವಲ್ಲಿ ಕೂಡ ಮಾತು ಪ್ರಮುಖ ಪಾತ್ರ ವಹಿಸುತ್ತಿದೆ. ಇದಕ್ಕೆ ಡಾ.ರಾಜ್ ಕುಮಾರ್ ಅವರ ಸ್ಮಾರಕದ ಕುರಿತು ಚೇತನ್ ಮಾತನಾಡಿರುವ ಮಾತು ಸದ್ಯದ ಸಾಕ್ಷಿ.

jaggesh-vs-chetan-ahimsa-navarasa-nayaka-blasts-disgusting-comments-on-dr-rajkumar-s-memorial

ಹೌದು, ಎಲ್ಲರಿಗೆ ಗೊತ್ತಿರುವಂತೆ ಅಣ್ಣಾವ್ರ ಜನ್ಮ ದಿನದಂದು ಚೇತನ್ ವಿವಾದದ ಕಿಡಿ ಹೊತ್ತಿಸಿದ್ದರು. ನಾವು ರಾಜಕುಮಾರ್ ಅವರನ್ನು ಒಬ್ಬ ಮಹಾನ್ ಕಲಾವಿದರಾಗಿ ಗೌರವಿಸುತ್ತೇವೆ. ಆದರೆ, ಬೆಂಗಳೂರು ನಗರ ಮಧ್ಯದಲ್ಲಿ 2006ರಲ್ಲಿ ಒಬ್ಬ ನಟನ ಸಮಾಧಿ ಕಾಂಪ್ಲೆಕ್ಸ್‌ಗಾಗಿ 2.5 ಎಕರೆ ಭೂಮಿಯನ್ನು ನೀಡುವುದು ತಿಳಿವಳಿಕೆಯ ನಿರ್ಧಾರವಾಗಿತ್ತೇ ಎಂದು ಪ್ರಶ್ನೆ ಮಾಡಿದ್ದರು.

21ನೇ ಶತಮಾನದ ಭಾರತದಲ್ಲಿ ಪ್ರಮುಖ ಹೋರಾಟವೇ ಭೂಮಿ. ಸರ್ಕಾರವು ಅದನ್ನು ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಹಾಗೂ ಸಾರ್ವಜನಿಕ ಉಪಯೋಗಕ್ಕೆ ತಕ್ಕಂತೆ ಹಂಚಬೇಕೇ ಹೊರತು ಮತಗಳ ಲಾಭದ ಅವಕಾಶವಾದಿ ಉದ್ದೇಶದಿಂದ ಅಲ್ಲ ಎಂದು ಹೇಳಿದ್ದ ಚೇತನ್ ಒಂದು ವೇಳೆ ರಾಜ್‌ಕುಮಾರ್ ಬದುಕಿದ್ದಾಗಲೇ ತಿಳಿದಿದ್ದರೆ ಅವರೇ ಸ್ಮಾರಕಕ್ಕೆ ಕೊಟ್ಟಿರುವ ಜಾಗ ಬೇಡ ಎನ್ನುತ್ತಿದ್ದರು ಎಂದು ಹೇಳಿದ್ದರು.

ಚೇತನ್ ಅವರ ಈ ಮಾತು ಹಲವರನ್ನು ಕೆರಳಿಸಿತ್ತು. ಸಾರಾ ಗೋವಿಂದು ಮತ್ತು ಚೇತನ್ ನಡುವೆ ವಾಗ್ಯುದ್ದವೂ ನಡೆಯಿತು. ಚೇತನ್ ನ ಕೂಡಲೇ ಗಡಿಪಾರು ಮಾಡಬೇಕೆಂಬ ಆಗ್ರಹ ಕೂಡ ಕೇಳಿ ಬಂತು. ಚಿತ್ರರಂಗದಲ್ಲಿಯೇ ಹಲವರು ಚೇತನ್ ವಿರುದ್ಧ ಕಿಡಿ ಕಾರಿದರು. ಈಗ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಜಗ್ಗೇಶ್ ಪ್ರತಿಕ್ರಿಯಿಸಿದ್ದಾರೆ. ಚೇತನ್ ವಿರುದ್ಧ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ. ಹಾಗಿದ್ದರೆ ಚೇತನ್ ಕುರಿತು ಜಗ್ಗೇಶ್ ಹೇಳಿದ್ದೇನು ಎಂದು ತಿಳಿಯಲು ಮುಂದೆ ಓದಿ.

ಚೇತನ್ ವಿರುದ್ಧ ಜಗ್ಗೇಶ್ ಧಗಧಗ

ಹೋದವರೆಲ್ಲಾ ಒಳ್ಳೆಯವರು ನಮ್ಮ ಹಿರಿಯರು. ಆ ಹಿರಿಯರಲ್ಲಿ ನಮ್ಮ ತಂದೆ,ತಾಯಿ, ತಾತ, ಅಜ್ಜಿ, ವಂಶದ ಪರಂಪರೆಯೇ ಸೇರಿರುತ್ತದೆ ಅಲ್ಲವೆ? ಹಿರಿಯರು ಎಂದ ಮೇಲೆ ನಮ್ಮ ಮನೆಯವರೆ ಅಲ್ಲಾ ಸಂಬಂಧಿಗಳು ಅಥವಾ ಯಾವುದೆ ಕ್ಷೇತ್ರದಲ್ಲಿ ಸಾಧನೆ ಮಾಡಿದವರು ನಮ್ಮ ವಂಶದ ಹಿರಿಯರ ಸಮ ಅಲ್ಲವೆ ಎಂದು ಪ್ರಶ್ನೆ ಮಾಡಿದ್ದಾರೆ.

ಆತನಿಗೆ ನನ್ನ ಕಿವಿಮಾತು

ಇದು ಹೇಳುವ ಕಾರಣ ರಾಜಣ್ಣನ ಸಮಾಧಿಯ ಬಗ್ಗೆ ಒಬ್ಬ ನಟ ಆಡಿದ ಮಾತು ಮನಸ್ಸಿಗೆ ಬಹಳ ನೋವುಂಟು ಮಾಡಿತು. ಆತನಿಗೆ ನನ್ನ ಕಿವಿಮಾತು 1954ರಲ್ಲಿ ಕನ್ನಡ ಚಿತ್ರರಂಗಕ್ಕೆ ನೆಲೆ ಬೆಲೆ ಇಲ್ಲದ ಕಾಲ! ಇರಲು ಸೂರಿಲ್ಲಾ ಉದರಕ್ಕೆ ತೃಪ್ತ ಆಹಾರವಿಲ್ಲಾ ಅಂಥಹ ಸಮಯದಿಂದ ಕನ್ನಡ ಚಿತ್ರರಂಗ ಕಟ್ಟಿ ಬೆಳೆಸಿ ಅರಮನೆಯಂತೆ ಮಾಡಿ ಹೋಗಿದ್ದಾರೆ!

ಇಂದು ಅದರ ಬೆಲೆ ಅರಿಯದೆ ಒಂದು ಅಥವ ಎರಡು ಚಿತ್ರಕ್ಕೆ ಜಗದೇಕವೀರರಂತೆ ಮಾತಾಡಿ ಮಲೀನವಾಗೋ ಸಂಪ್ರದಾಯ ಹುಟ್ಟಿ ಹಿರಿಯರೆಲ್ಲಾ ಮೂಖರಂತೆ ಯಾರ ತಂಟೆ ಬೇಡವೆಂದು ಉಳಿದುಬಿಟ್ಟಿದ್ದಾರೆ!

ದ್ವನಿ ಎತ್ತಿದರೆ ಸರ್ಕಾರ ಬದಲಾಗುತ್ತಿತ್ತು ಅದು ರಾಜಣ್ಣನ ತಾಕತ್ತು ,ಅಂಥಹ ಸಾಧಕ ಹೋದಾಗ ಇಡಿ ಚಿತ್ರರಂಗ ಸರ್ಕಾರ ಒಟ್ಟುಗೂಡಿ ಅವರ ಶ್ರಮಕ್ಕೆ ಗೌರವ ನೀಡಲು ಅವರ ಕೊನೆಯ ಚಿರನಿದ್ರೆಗೆ ಕಲಾವಿದರ ರಂಗಸ್ಥಳವನ್ನ ಪ್ರೀತಿಯ ಹಾಸಿಗೆ ಮಾಡಿ ಮಲಗಿಸಿದ್ದಾರೆ!

ಕಳೆದುಹೋದ ಸಮಯ ವಿಷಯ ಪ್ರಚಾರಕ್ಕಾಗಿ ಈಗ ಮಾತಾಡುವ ಚಿಕ್ಕಮನಸ್ಸು ಕಂಡು ಅಸಹ್ಯವಾಯಿತು! ಉತ್ತಮ ಚಿತ್ರಮಾಡಿ ಪ್ರೇಕ್ಷಕರ ರಂಜಿಸಿ ಹೆಸರುಮಾಡಿ (ಪ್ರೇಕ್ಷಕ ಇಷ್ಟಪಟ್ಟರೆ) ಇಲ್ಲದಿದ್ದರೆ ಗಳಿಸಿದ ಅಲ್ಪ ಹೆಸರು ಮಾಸಿ ಜೀವನ ರೋಸಿ ಹೋಗುತ್ತದೆ...!!ಸರಿ ಅನ್ನಿಸಿದರೆ ಪಾಲಿಸಿ

English summary
"‘Dr. Rajkumar built this industry!’ Actor Jaggesh fires back at Chetan Ahimsa for questioning the location of the legendary actor's final resting place. Discover why the Navarasa Nayaka is defending the dignity of the Kannada film icon."
Read more about: chethan jaggesh filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X