»   » ಕಹಿ ಘಟನೆಯಿಂದ ಹೊರಬಂದ ಜಗ್ಗೇಶ್ ಪುತ್ರ ಈಗ 'ವಿಷ್ಣು ಅಭಿಮಾನಿ'

ಕಹಿ ಘಟನೆಯಿಂದ ಹೊರಬಂದ ಜಗ್ಗೇಶ್ ಪುತ್ರ ಈಗ 'ವಿಷ್ಣು ಅಭಿಮಾನಿ'

Posted By:
Subscribe to Filmibeat Kannada

ಕಳೆದ ಕೆಲ ದಿನಗಳ ಹಿಂದೆಯಷ್ಟೇ ನಟ ಜಗ್ಗೇಶ್ ಅವರ ಪುತ್ರ ಗುರುರಾಜ್ ಗೆ ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದಿದ್ದ. ನಂತರ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ವಿಶ್ರಾಂತಿಯಲ್ಲಿದ್ದ ಜಗ್ಗೇಶ್ ಪುತ್ರ ಈಗ 'ವಿಷ್ಣು ಸರ್ಕಲ್'ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಹೌದು, ಶಿವರಾಜ್ ಕುಮಾರ್ ಅಭಿನಯದ 'ಮಾಸ್ ಲೀಡರ್' ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಗುರುರಾಜ್ ಈಗ ಹೊಸ ಚಿತ್ರವನ್ನ ಕೈಗೆತ್ತಿಕೊಂಡಿದ್ದಾರೆ. ಈ ಚಿತ್ರದ ಹೆಸರು 'ವಿಷ್ಣು ಸರ್ಕಲ್'.

Jaggesh Son Gururaj starrer New Movie Vishnu Circle Launched

ನಂದಿನಿ ಲೇಔಟ್ ನಲ್ಲಿರುವ ಗಣೇಶ ದೇವಸ್ಥಾನದಲ್ಲಿ 'ವಿಷ್ಣು ಸರ್ಕಲ್' ಚಿತ್ರದ ಮುಹೂರ್ತ ಸಮಾರಂಭ ಇತ್ತಿಚೆಗಷ್ಟೇ ನೆರವೇರಿದ್ದು, ನಟ ಜಗ್ಗೇಶ್ ಮತ್ತು ಪತ್ನಿ ಪರಿಮಳ ಜಗ್ಗೇಶ್ ಅವರು ಭಾಗವಹಿಸಿ, ತಮ್ಮ ಮಗನ ಚಿತ್ರಕ್ಕೆ ವಿಶ್ ಮಾಡಿದರು.

ವಿಷ್ಣು ಅಭಿಮಾನಿಯ ಕಥೆ ಇರುವ ಈ ಚಿತ್ರ ''ತುತ್ತು ಅನ್ನ ತಿನ್ನೋಕೆ ಬೊಗಸೆ ನೀರು ಕುಡಿಯೋಕೆ'' ಎನ್ನುವ ಟ್ಯಾಗ್ ಲೈನ್ ಹೊಂದಿದೆ. ಈ ಹಿಂದೆ 'ಹಾಫ್‍ ಮೆಂಟಲ್' ಎಂಬ ಚಿತ್ರ ನಿರ್ದೇಶಿಸಿದ್ದ ಲಕ್ಷ್ಮೀ ದಿನೇಶ್, ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಉಳಿದಂತೆ ಆರ್.ಬಿ ಈ ಚಿತ್ರವನ್ನ ನಿರ್ಮಾಣ ಮಾಡುತ್ತಿದ್ದಾರೆ.

English summary
Kannada Actor Jaggesh Son Gururaj starrer New Movie 'Vishnu Circle' Launched. The Movie Directed by lakshmi dinesh
Please Wait while comments are loading...