For Quick Alerts
  ALLOW NOTIFICATIONS  
  For Daily Alerts

  Jaggesh: 'ರಾಘವೇಂದ್ರ ಸ್ಟೋರ್ಸ್‌'ನಲ್ಲಿ ಜಗ್ಗೇಶ್ ನವರಸ!

  |

  ಹೊಂಬಾಳೆ ಫಿಲಂಸ್ ಅಡಿಯಲ್ಲಿ ತಯಾರಾಗಲಿರುವ 12ನೇ ಪ್ರಾಜೆಕ್ಟ್ 'ರಾಘವೇಂದ್ರ ಸ್ಟೋರ್ಸ್'. ಈ ಚಿತ್ರ ಟೈಟಲ್ ಮೂಲಕವೇ ಹೆಚ್ಚಾಗಿ ಗಮನ ಸೆಳೆದಿತ್ತು. ಅದರಲ್ಲೂ ನವರಸ ನಾಯಕ ಜಗ್ಗೇಶ್ ಅಭಿನಯ ಇದೆ. ಚಿತ್ರವನ್ನು ನಿರ್ದೇಶಕ ಸಂತೋಷ್ ಆನಂದ್ ರಾಮ್ ನಿರ್ದೇಶನ ಮಾಡಿದ್ದರೆ. ಈ ಹಿಂದೆ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಗಮನ ಸೆಳೆದಿತ್ತು. ಈಗ ಟೀಸರ್ ಗಮನ ಸೆಳೆದಿದೆ.

  Recommended Video

  ನೆಚ್ಚಿನ ನಿರ್ದೇಶಕನ ನೆನೆದು ಭಾವುಕರಾದ ಜಗ್ಗೇಶ್ | KV Raju No more | Jaggesh

  ಚಿತ್ರದ ಟೀಸರ್ ರಿಲೀಸ್ ಆಗಿದೆ. ಚಿತ್ರದಲ್ಲಿ ಏನಿರಬಹುದು ಎನ್ನುವ ಬಗ್ಗೆ ಟೀಸರ್ ಸೂಚನೆ ಕೊಟ್ಟಿದೆ. ಟೀಸರ್‌ನಲ್ಲಿ ನಟ ಜಗ್ಗೇಶ್ ಜೀವನ ಶೈಲಿಯ ಹಾವ-ಭಾವ ವ್ಯಕ್ತವಾಗಿವೆ. ಈ ಟೀಸರ್ 'ಕೆಜಿಎಫ್ 2' ಚಿತ್ರದ ಜೊತೆಗೆ ಇಂಟರ್‌ವಲ್ ವೇಳೆ ಸಿನಿಮಾ ಪರದೆ ಮೇಲೆ ಮೂಡಿ ಬರಲಿದೆ.

  'ರಾಘವೇಂದ್ರ ಸ್ಟೋರ್ಸ್‌' ಹೇಗಿದೆ: ಜಗ್ಗೇಶ್ ತೋರಿಸಿದ್ದಾರೆ ನೋಡಿ! 'ರಾಘವೇಂದ್ರ ಸ್ಟೋರ್ಸ್‌' ಹೇಗಿದೆ: ಜಗ್ಗೇಶ್ ತೋರಿಸಿದ್ದಾರೆ ನೋಡಿ!

  ಚಿತ್ರದ ಟೈಟಲ್‌ಗೆ ತಕ್ಕಂತೆ ಟೀಸರ್‌ನಲ್ಲಿ ನಟ ಜಗ್ಗೇಶ್ ಅಡುಗೆ ಭಟ್ಟನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಡುಗೆ ಭಟ್ಟ ಆಗಿರುವ ನಟ ಜಗ್ಗೇಶ್ ಬದುಕಿನ ಕಥೆ, ವ್ಯಥೆಯಲ್ಲಿ ಚಿಕ್ಕದಾಗಿ ಟೀಸರ್ ರಿವೀಲ್ ಮಾಡಿದೆ.

  ಟೀಸರ್‌ನಲ್ಲಿ ನವರಸಗಳ ಅನಾವರಣ!

  ಟೀಸರ್‌ನಲ್ಲಿ ನವರಸಗಳ ಅನಾವರಣ!

  'ರಾಘವೇಂದ್ರ ಸ್ಟೋರ್ಸ್' ಟೀಸರನ್ನು ಸೂಕ್ಷ್ಮವಾಗಿ ಗಮನಿಸಿದರೆ, ಈ ಟೀಸರ್‌ನಲ್ಲಿ ಒಂಭತ್ತು ರಸಗಳು ಇರುವುದು ಗೊತ್ತಾಗುತ್ತದೆ. ಟೀಸರ್ ಆರಂಭದಲ್ಲಿ ಶಾಂತ ರೂಪಿಯಾಗಿ ಕಾಣುವ ಜಗ್ಗೇಶ್, ಬಳಿಕ ಹಾಸ್ಯ, ಭೀಭತ್ಸ, ಅದ್ಬುತ, ಕರುಣ, ಭಯಾನಕ, ರೌದ್ರ, ವೀರ, ಶೃಂಗಾರ, ಕರುಣ ರಸಗಳು ಈ ಟೀಸರ್‌ನಲ್ಲಿ ಜಗ್ಗೇಶ್ ವ್ಯಕ್ತವಾಗಿದೆ.

  ಚಿತ್ರದಲ್ಲಿದೆ ಸಾಮಾಜಿಕ ಸಂದೇಶ!

  ಚಿತ್ರದಲ್ಲಿದೆ ಸಾಮಾಜಿಕ ಸಂದೇಶ!

  ನಟ ಜಗ್ಗೇಶ್ ಚಿತ್ರದ ಟೀಸರ್ ರಿಲೀಸ್ ಬಗ್ಗೆ ಮಾತನಾಡಿದ್ದಾರೆ. ಟ್ವಿಟ್ಟರ್‌ನಲ್ಲಿ ವಿಡಿಯೋ ಹಂಚಿಕೊಂಡು, ಈ ಚಿತ್ರದಲ್ಲಿ ಉತ್ತಮ ಸಾಮಾಜಿಕ ಸಂದೇಶ ಇದೆ ಎಂದಿದ್ದರೆ. ಹಾಗಾಗಿ ಸದ್ಯ ಟೀಸರ್‌ನಲ್ಲಿ ಇರುವುದನ್ನು ಬಿಟ್ಟು ಚಿತ್ರದಲ್ಲಿ ಇನ್ನೇನೋ ಇದೆ ಎನ್ನುವುದು ಗೊತ್ತಾಗುತ್ತದೆ. ಆದರೆ ಟೀಸರ್ ಅಷ್ಟರ ಮಟ್ಟಿಗೆ ಎಫೆಕ್ಟಿವ್ ಆಗಿಲ್ಲ. ಜಗ್ಗೇಶ್ ನವರಸಗಳ ಅನಾವರಣ ಆಗಿದ್ದು ಬಿಟ್ಟರೆ ಮತ್ತೇನು ಕಾಣುವುದಿಲ್ಲ.

  ಜಗ್ಗೇಶ್‌ಗೆ ಒಪ್ಪುವ ಕಥೆ!

  ಜಗ್ಗೇಶ್‌ಗೆ ಒಪ್ಪುವ ಕಥೆ!

  ಇನ್ನು ಟೀಸರ್‌ನಲ್ಲಿ ಡಬಲ್ ಮೀನಿಂಗ್ ಡೈಲಾಗ್‌ಗಳು ಹೇರಳವಾಗಿವೆ. ಆದರೆ ಇದನ್ನು ನವರಸಗಳಿಗೆ ಹೊಂದಾಣಿಕೆ ಮಾಡಲು, ಬರೆಯಲಾಗಿದೆ ಎನ್ನುವುದು ಸ್ಪಷ್ಟ. ಇನ್ನುಳಿದಂತೆ ಜಗ್ಗೇಶ್‌ಗೆ ಒಪ್ಪುವ ಕಥೆ ಇದಾಗಿದೆ. ಟೀಸರ್‌ನಲ್ಲಿ ಇರುವ ಎಲ್ಲಾ ಅಂಶಗಳು ಜಗ್ಗಣ್ಣನಿಗೆ ಹೋಲುತ್ತವೆ. ಆದರೆ ಈ ಹಿಂದೆ ಬಂದ ಜಗ್ಗೇಶ್ ಅವರ 'ನೀರ್ ದೋಸೆ', 'ಎದ್ದೇಳು ಮಂಜುನಾಥ' ಚಿತ್ರಗಳನ್ನು ಈ ಟೀಸರ್ ನೆನಪಿಸುತ್ತವೆ.

  ಜಗ್ಗೇಶ್ ಜೊತೆಗೆ ಶ್ವೇತಾ ಶ್ರೀವತ್ಸವ್ ಅಭಿನಯ!

  ಜಗ್ಗೇಶ್ ಜೊತೆಗೆ ಶ್ವೇತಾ ಶ್ರೀವತ್ಸವ್ ಅಭಿನಯ!

  ನಟ ಜಗ್ಗೇಶ್ ಜೊತೆಗೆ ನಟಿ ಶ್ವೇತಾ ಶ್ರೀವತ್ಸವ್ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಹಲವು ವರ್ಷಗಳ ಗ್ಯಾಪ್‌ ಬಳಿಕ ಶ್ವೇತಾ ಶ್ರೀವತ್ಸವ್ ಈ ಚಿತ್ರದ ಮೂಲಕ ಕಮ್ ಬ್ಯಾಕ್ ಮಾಡುತ್ತಾ ಇದ್ದಾರೆ. ಹಾಗಾಗಿ ಶ್ವೇತಾ ಪಾತ್ರದ ಮೇಲು ನಿರೀಕ್ಷೆ ಹೆಚ್ಚಾಗಿದೆ. ಇನ್ನು ಕಮರ್ಷಿಯಲ್ ಚಿತ್ರಗಳ ನಿರ್ದೇಶಕ ಸಂತೋಷ್‌ ಅನಂದ್‌ರಾಮ್ ಇದೇ ಮೊದಲ ಬಾರಿಗೆ ಇಂತಹ ಸಾಮಾಜಿಕ ಸಂದೇಶ ಇರುವ ಚಿತ್ರವನ್ನು ಮಾಡುತ್ತಿರುವುದು ಕೂಡ ಕುತೂಹಲ ಮೂಡಿಸಿದೆ.

  English summary
  Jaggesh Starrer And Santhosh Ananddram Directional Raghavendra Stores Teaser Release
  Thursday, April 14, 2022, 17:57
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X