For Quick Alerts
  ALLOW NOTIFICATIONS  
  For Daily Alerts

  'ದಕ್ಷಿಣೆ ಪಡೆದು ಕಳಿಸುವ ಚಾಂಡಾಳ ವೃತ್ತಿಯಾಗಿದೆ ಚಿತ್ರರಂಗ': ನಟ ಜಗ್ಗೇಶ್ ಆಕ್ರೋಶ

  |

  ಸ್ಯಾಂಡಲ್ ವುಡ್ ನ ಹಿರಿಯ ನಟ ಜಗ್ಗೇಶ್ ಚಿತ್ರರಂಗದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಕರುಣೆ ಇಲ್ಲದೆ ಬಂದ ಹೆಣ ಸುಟ್ಟು ದಕ್ಷಿಣೆ ಪಡೆದು ಕಳಿಸುವ ಚಾಂಡಾಳ ವೃತ್ತಿಯಾಗಿದೆ ಚಿತ್ರರಂಗ ಎಂದು ಗುಡುಗಿದ್ದಾರೆ. ಅಷ್ಟಕ್ಕು ಜಗ್ಗೇಶ್ ಏಕಾಏಕಿ ಸಿಟ್ಟಾಗಲು ಕಾರಣ ಉತ್ತಮ ಪ್ರದರ್ಶನ ಕಾಣುತ್ತಿರುವ 'ಕಾಳಿದಾಸ ಕನ್ನಡ ಮೇಷ್ಟ್ರು' ಚಿತ್ರವನ್ನು ಚಿತ್ರರಂಗದಿಂದ ಎತ್ತಂಗಡಿ ಮಾಡಿದವರ ವಿರುದ್ಧ.

  ಇತ್ತೀಚಿಗೆ ರಿಲೀಸ್ ಆದ 'ಕಾಳಿದಾಸ ಕನ್ನಡ ಮೇಷ್ಟ್ರು' ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ. ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆಕೊಳ್ಳುತ್ತಿರುವ ಕನ್ನಡ ಮೇಷ್ಟ್ರು ಚಿತ್ರವನ್ನು ಚಿತ್ರಮಂದಿರದಿಂದ ಎತ್ತಂಗಡಿ ಮಾಡಲಾಗಿದೆ ಎಂದು ಜಗ್ಗೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿತ್ರ ಉತ್ತಮ ಕಲೆಕ್ಷನ್ ಮಾಡುತ್ತಿದ್ದರು ಚಿತ್ರಮಂದಿರದ ಮಾಲಿಕರು ಬಲವಂತವಾಗಿ ಚಿತ್ರವನ್ನು ತೆಗೆಯುತ್ತಿದ್ದಾರೆ ಎಂದು ಬೇಸರ ಹೊರಹಾಕಿದ್ದಾರೆ.

  ಪ್ರಿಯಾಂಕಾ ರೆಡ್ಡಿ ಅತ್ಯಾಚಾರ: ಮರುಗಿದ ಜಗ್ಗೇಶ್, ಹೆಣ್ಣು ಕುಲಕ್ಕೊಂದು ಸಲಹೆಪ್ರಿಯಾಂಕಾ ರೆಡ್ಡಿ ಅತ್ಯಾಚಾರ: ಮರುಗಿದ ಜಗ್ಗೇಶ್, ಹೆಣ್ಣು ಕುಲಕ್ಕೊಂದು ಸಲಹೆ

  ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ "ವಿದ್ಯುತ್ ಚಿತಾಗಾರವಾಯಿತು ಕನ್ನಡ ಚಿತ್ರರಂಗ. ಕರುಣೆ ಇಲ್ಲದೆ ಬಂದ ಹೆಣ ಸುಟ್ಟು ದಕ್ಷಿಣೆ ಪಡೆದು ಕಳಿಸುವ ಚಾಂಡಾಳ ವೃತ್ತಿಯಾಗಿದೆ ಚಿತ್ರರಂಗ. ಯಶಸ್ವಿಯಾದ ಕಾಳಿದಾಸ ಕನ್ನಡ ಮೇಷ್ಟ್ರು ಕರುಣೆಯಿಲ್ಲದೆ ಎತ್ತಂಗಡಿ ಅನೇಕ ಚಿತ್ರಮಂದಿರದಲ್ಲಿ. ಧನ್ಯವಾದ ಕಿವುಡು ಕುರುಡು ಚಿತ್ರರಂಗದ ಹಿರಿಯರಿಗೆ. ಉದ್ದಾರ ಕನ್ನಡ ಚಿತ್ರರಂಗ. ಶುಭಮಸ್ತು ಕನ್ನಡಕ್ಕೆ" ಎಂದು ಬರೆದುಕೊಂಡಿದ್ದಾರೆ.

  ಉತ್ತಮ ಚಿತ್ರಗಳಿಗೆ ಆಗುತ್ತಿರುವ ಮೋಸವನ್ನು ನೋಡಿಯು ಚಿತ್ರರಂಗದ ಹಿರಿಯರು ಮೌನವಾಗಿದ್ದಾರೆ ಎಂದು ಹೇಳಿದ್ದಾರೆ. ಕಿವುಡು, ಕುರುಡು ಚಿತ್ರರಂಗದ ಹಿರಿಯರಿಗೆ ಧನ್ಯವಾದ ತಿಳಿಸಿದ್ದಾರೆ. ಅಂದ್ಹಾಗೆ ಕಾಳಿದಾಸ ಕನ್ನಡ ಮೇಷ್ಟ್ರು ಸಿನಿಮಾ ಶಿಕ್ಷಣ ವ್ಯವಸ್ತೆಯ ಬಗ್ಗೆ ಹೇಳಲಾಗಿದೆ. ಚಿತ್ರಕ್ಕೆ ಕೆ. ಕವಿರಾಜ್ ಆಕ್ಷನ್ ಕಟ್ ಹೇಳಿದ್ದಾರೆ.

  Read more about: jaggesh ಜಗ್ಗೇಶ್
  English summary
  Kannada actor Jaggesh starrer Kalidasa Kannada Mestru film has been removed from Theatre.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X