ನಟ ಜಗ್ಗೇಶ್ ಗೆ ಸಾಥ್ ನೀಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
ನವರಸ ನಾಯಕ ಜಗ್ಗೇಶ್ ಸದ್ಯ 'ತೋತಾಪುರಿ' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇದರ ಜೊತೆಗೆ ಜಗ್ಗಣ್ಣ ಕನ್ನಡ ಮೇಷ್ಟ್ರಾಗಿಯೂ ಕೆಲಸ ಮಾಡುತ್ತಿದ್ದಾರೆ. ಹೌದು, ಜಗ್ಗೇಶ್ 'ಕಾಳಿದಾಸ ಕನ್ನಡ ಮೇಷ್ಟ್ರು' ಆಗಿ ಅನೇಕ ದಿನಗಳಾಗಿವೆ. ಚಿತ್ರಸಾಹಿತಿ ಮತ್ತು ನಿರ್ದೇಶಕ ಕವಿ ರಾಜ್ ಸಾರಥ್ಯದಲ್ಲಿ ಜಗ್ಗೇಶ್ 'ಕಾಳಿದಾಸ ಕನ್ನಡ ಮೇಷ್ಟ್ರು' ಆಗಿ ಅಭಿಮಾನಿಗಳ ಮುಂದೆ ಬರ್ತಿದ್ದಾರೆ.
ಈಗಾಗಲೆ ಟೀಸರ್ ಮೂಲಕ ಅಭಿಮಾನಿಗಳ ಗಮನ ಸೆಳೆದಿರುವ "ಕಾಳಿದಾಸ ಕನ್ನಡ ಮೇಷ್ಟ್ರು' ಈಗ ಟ್ರೈಲರ್ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. 'ಕಾಳಿದಾಸ ಕನ್ನಡ ಮೇಷ್ಟ್ರಿ'ಗೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಾಥ್ ನೀಡಿದ್ದಾರೆ. ಹೌದು, 'ಕಾಳಿದಾಸ ಕನ್ನಡ ಮೇಷ್ಟ್ರು' ಚಿತ್ರದ ಟ್ರೈಲರ್ ಅನ್ನು ಇಂದು ಡಿ ಬಾಸ್ ದರ್ಶನ್ ರಿಲೀಸ್ ಮಾಡುತ್ತಿದ್ದಾರೆ.
Recommended Video
ಶಿಕ್ಷಣ ವ್ಯವಸ್ಥೆಯ ಬಗ್ಗೆ ಇರುವ ಸಿನಿಮಾ ಇದಾಗಿದ್ದು, 90ರ ದಶಕದಲ್ಲಿ ಕನ್ನಡ ಮೇಷ್ಟ್ರು ಹೇಗಿರುತ್ತಿದ್ದರು, ಅವರ ತೊಳಲಾಟಗಳೇನು ಇನ್ನುವುದನ್ನು ಹಾಸ್ಯದ ಮೂಲಕ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಕವಿರಾಜ್. ಜಗ್ಗೇಶ್ ಗೆ ಇಲ್ಲಿ ನಾಯಕಿಯಾಗಿ ಮೇಘನಾ ಗಾಂವ್ಕರ್ ಬಣ್ಣಹಚ್ಚಿದ್ದಾರೆ. ತುಂಬ ಗ್ಯಾಪ್ ನ ನಂತರ ಮೇಘನಾ ಕಾಳಿದಾಸ ಮೇಷ್ಟ್ರು ಜೊತೆ ಎಂಟ್ರಿ ಕೊಡುತ್ತಿದ್ದಾರೆ.

ಚಿತ್ರದಲ್ಲಿ ತಬಲ ನಾಣಿ, ಸಾಧು ಕೋಕಿಲ ಸೇರಿದಂತೆ ಅನೇಕರು ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಗುರುಕಿರಣ್ ಸಂಗೀತ ಸಂಯೋಜನೆ ಮಾಡಿದ್ದಾರೆ. 'ಇಂಗ್ಲಿಷ್ ಮಾತಾಡು ಅಂದರೆ ಮೆಣಸಿನಕಾಯಿ ಇಟ್ಟಹಾಗೆ ಆಗುವುದು' ಎನ್ನುವ ಡೈಲಾಗ್ ಟೀಸರ್ ಈಗಾಗಲೆ ಪ್ರೇಕ್ಷಕರ ಮನಗೆದ್ದಿದೆ. ಇನ್ನು ಟ್ರೈಲರ್ ಹೇಗಿರಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.


Click it and Unblock the Notifications











