For Quick Alerts
  ALLOW NOTIFICATIONS  
  For Daily Alerts

  'ರಾಘವೇಂದ್ರ ಸ್ಟೋರ್ಸ್' ರಿಲೀಸ್ ದಿನಾಂಕ ಫಿಕ್ಸ್: ವರಮಹಾಲಕ್ಷ್ಮಿ ಹಬ್ಬಕ್ಕೆ ರಸದೌತಣ!

  |

  'ರಾಘವೇಂದ್ರ ಸ್ಟೋರ್ಸ್' ಹೊಂಬಾಳೆ ಫಿಲಂಸ್ ಅಡಿಯಲ್ಲಿ ತಯಾರಾಗುತ್ತಿರುವ 12ನೇ ಸಿನಿಮಾ. ಈ ಚಿತ್ರ ಟೈಟಲ್ ಮೂಲಕವೇ ಹೆಚ್ಚಾಗಿ ಗಮನ ಸೆಳೆದಿತ್ತು. ಅದರಲ್ಲೂ ನವರಸ ನಾಯಕ ಜಗ್ಗೇಶ್ ಅಭಿನಯ ಇದೆ. ಚಿತ್ರವನ್ನು ನಿರ್ದೇಶಕ ಸಂತೋಷ್ ಆನಂದ್ ರಾಮ್ ನಿರ್ದೇಶನ ಮಾಡಿದ್ದರೆ. ಚಿತ್ರದ ಫಸ್ಟ್ ಲುಕ್ ಪೋಸ್ಟರ್, ಟೀಸರ್ ಗಮನ ಸೆಳೆದಿದೆ.

  ಈಗಾಗಲೇ ಚಿತ್ರದ ಟೀಸರ್ ರಿಲೀಸ್ ಆಗಿದೆ. ಚಿತ್ರದಲ್ಲಿ ಏನಿರಬಹುದು ಎನ್ನುವ ಬಗ್ಗೆ ಟೀಸರ್ ಸೂಚನೆ ಕೊಟ್ಟಿದೆ. ಈ ಟೀಸರ್‌ನಲ್ಲಿ ನಟ ಜಗ್ಗೇಶ್ ಜೀವನ ಶೈಲಿ, ಹಾವಾ, ಭಾವದ ಅನಾವರಣ ಆಗಿದೆ.

  ರಾಜ್ಯ ಸಭೆಗೆ ಟಿಕೆಟ್ ಘೋಷಣೆ: ನವರಸ ನಾಯಕನಿಗೆ ಬಂಪರ್ ಆಫರ್!ರಾಜ್ಯ ಸಭೆಗೆ ಟಿಕೆಟ್ ಘೋಷಣೆ: ನವರಸ ನಾಯಕನಿಗೆ ಬಂಪರ್ ಆಫರ್!

  ಚಿತ್ರದ ಟೈಟಲ್‌ಗೆ ತಕ್ಕಂತೆ ಟೀಸರ್‌ನಲ್ಲಿ ನಟ ಜಗ್ಗೇಶ್ ಅಡುಗೆ ಭಟ್ಟನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಡುಗೆ ಭಟ್ಟ ಆಗಿರುವ ನಟ ಜಗ್ಗೇಶ್ ಬದುಕಿನ ಕಥೆಯನ್ನು ಚಿಕ್ಕದಾಗಿ ಟೀಸರ್ ಮೂಲಕ ರಿವೀಲ್ ಮಾಡಿದೆ. ಈ ಚಿತ್ರದ ರಿಲೀಸ್ ದಿನಾಂಕ ಕೂಡ ಪ್ರಕಟ ಆಗಿದೆ.

  ರಾಘವೇಂದ್ರ ಸ್ಟೋರ್ಸ್ ಆಗಸ್ಟ್ 5ಕ್ಕೆ ರಿಲೀಸ್!

  'ರಾಘವೇಂದ್ರ ಸ್ಟೋರ್ಸ್' ಸಿನಿಮಾ ಹಲವು ಕಾರಣಕ್ಕೆ ತನ್ನದೇ ಆದ ರೀತಿಯಲ್ಲಿ ವಿಶೇಷವಾಗಿ ಮಗನ ಸೆಳೆದಿದೆ. ಇನ್ನು ಟೀಸರ್ ಮೂಲಕ ಸಾಕಷ್ಟು ನಿರೀಕ್ಷೆಯನ್ನು ಕೂಡ ಈ ಸಿನಿಮಾ ಹುಟ್ಟು ಹಾಕಿತ್ತು. ಇದೀಗ ಚಿತ್ರದ ರಿಲೀಸ್ ಡೇಟ್ ಪ್ರಕಟ ಆಗಿದೆ. ಆಗಸ್ಟ್ 5ಕ್ಕೆ ಸಿನಿಮಾ ಅದ್ಧೂರಿಯಾಗಿ ರಿಲೀಸ್ ಆಗಲಿದೆ. ವರಮಹಾಲಕ್ಷ್ಮಿ ಹಬ್ಬಕ್ಕೆ ಸಿನಿಮಾ ತೆರೆಗೆ ಬರುತ್ತಿದೆ.

  ದುಬಾರಿ ಕಾರು ಕೊಂಡ ಜಗ್ಗೇಶ್ ಅನ್ನು ಅರಸಿ ಬಂದ ಗುರು ರಾಯರು!ದುಬಾರಿ ಕಾರು ಕೊಂಡ ಜಗ್ಗೇಶ್ ಅನ್ನು ಅರಸಿ ಬಂದ ಗುರು ರಾಯರು!

  ಜಗ್ಗೇಶ್ ಟ್ವೀಟ್‌ನಲ್ಲಿ ಏನಿದೆ?

  ನಟ ಜಗ್ಗೇಶ್ ಸಿನಿಮಾ ರಿಲೀಸ್ ದಿನಾಂಕದ ಬಗ್ಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. "ರಾಘವೇಂದ್ರ ಸ್ಟೋರ್ಸ್ ಅಡುಗೆ ಸವಿಯಲು ಸಮಯ ಬಂದಿದೆ. ವರಮಹಾಲಕ್ಷ್ಮಿಯ ಹಬ್ಬದಂದು ಸಿಹಿಸವಿಯಲು ತಯಾರಾಗಿ. ಇದು ಚಿತ್ರವಲ್ಲಾ ಒಂದು ಅದ್ಭುತ ಕಾದಂಬರಿ. ಇಂಥ ಅವಕಾಶ ನೀಡಿದ, ಹೊಂಬಾಳೆ ಫಿಲ್ಮ್ಸ್, ಸಂತೋಷ್ ಆನಂದ್ ರಾಮ್, ಕಾರ್ತಿಕ್, ಯೋಗಿ ಅವರಿಗೆ ಧನ್ಯವಾದ. ಸಂತೋಷ ಆನಂದ ರಾಮ್ ನನ್ನನ್ನು ಬಹಳ ಅದ್ಭುತವಾಗಿ ಬಳಸಿಕೊಂಡಿದ್ದಾನೆ ಧನ್ಯವಾದ ಚಿನ್ನ". ಎಂದು ಬರೆದುಕೊಂಡಿದ್ದಾರೆ.

  ಜಗ್ಗೇಶ್ ಬಗ್ಗೆ ಸಂತೋಷ್ ಟ್ವೀಟ್!

  ಇನ್ನು ನಟ ಜಗ್ಗೇಶ್ ಮಾಡಿರುವ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿದ ನಿರ್ದೇಶನ ಸಂತೋಷ್ ಆನಂದ್ ರಾಮ್, ಜಗ್ಗೇಶ್ ಪಾತ್ರದ ಬಗ್ಗೆ ಹೇಳಿದ್ದಾರೆ. "ಅಣ್ಣ ನಿಮ್ಮಂತ ಅಪ್ರತಿಮ ಕಲಾವಿದರ ಜೊತೆ ಸಿನಿಮಾ ಮಾಡುವುದು ನಮ್ಮಂತ ನಿರ್ದೇಶಕರಿಗೆ ಬರಹಗಾರರಿಗೆ ಒಂದು ಅನುಭವ ಹಾಗೂ ಕಲಿಕೆ. ನಿಮ್ಮ 40 ವರ್ಷದ ಅನುಭವ, ಕನ್ನಡ ಭಾಷೆ ಮೇಲಿರುವ ಅಭಿಮಾನ ಹಾಗೂ ಪಾಂಡಿತ್ಯ ಅದ್ಭುತ. ಸಿನಿಮಾದಲ್ಲಿ ನೀವು ನಗಿಸಿದ್ದೀರ , ಅಳಿಸಿದ್ದೀರ , ಜೀವಿಸಿದ್ದೀರ. love you ಅಣ್ಣ. ಧನ್ಯವಾದ ಗುರು ರಾಯರಿಗೆ." ಎಂದು ಬರೆದು ಕೊಂಡಿದ್ದಾರೆ.

  Jaggesh: 'ರಾಘವೇಂದ್ರ ಸ್ಟೋರ್ಸ್‌'ನಲ್ಲಿ ಜಗ್ಗೇಶ್ ನವರಸ!Jaggesh: 'ರಾಘವೇಂದ್ರ ಸ್ಟೋರ್ಸ್‌'ನಲ್ಲಿ ಜಗ್ಗೇಶ್ ನವರಸ!

  Recommended Video

  ನಾನು ರೋಬೋತರ ಬದಲಾಗಲು 3ವರ್ಷ ಆಯ್ತು | Robo Ganesh
  ಚಿತ್ರದಲ್ಲಿದೆ ಸಾಮಾಜಿಕ ಸಂದೇಶ!

  ಚಿತ್ರದಲ್ಲಿದೆ ಸಾಮಾಜಿಕ ಸಂದೇಶ!

  ಇನ್ನು ನಟ ಜಗ್ಗೇಶ್ ಈ ಹಿಂದೆ ಚಿತ್ರದ ಟೀಸರ್ ಬಗ್ಗೆ ಮಾತನಾಡಿದ್ದರು. ಟ್ವಿಟ್ಟರ್‌ನಲ್ಲಿ ವಿಡಿಯೋ ಹಂಚಿಕೊಂಡು, ಈ ಚಿತ್ರದಲ್ಲಿ ಉತ್ತಮ ಸಾಮಾಜಿಕ ಸಂದೇಶ ಇದೆ ಎಂದಿದ್ದರು. ಹಾಗಾಗಿ ಸದ್ಯ ಟೀಸರ್‌ನಲ್ಲಿ ಇರುವುದನ್ನು ಬಿಟ್ಟು ಚಿತ್ರದಲ್ಲಿ ಇನ್ನೇನೋ ಇದೆ ಎನ್ನುವುದು ಗೊತ್ತಾಗುತ್ತದೆ. ಇನ್ನೂ ಟೀಸರ್‌ನಲ್ಲಿ ಜಗ್ಗೇಶ್ ಪಾತ್ರದ ಮೂಲಕ ನವರಸಗಳನ್ನು ತೋರಿಸಲಾಗಿತ್ತು.

  English summary
  Jaggesh Starrer Raghavendra Stores Movie releasing on August 5th, Know More Details,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X