ಪ್ರೆಗ್ನೆಂಟ್ ಜೊತೆಗೆ ಹೆರಿಗೆ ವಿಚಾರ: ನಟಿ ಅಮುಲ್ಯ ಬಗ್ಗೆ ನಿರ್ದೇಶಕರು ಹೀಗೆ ಹೇಳಿದ್ದು?
'ನೀರ್ ದೋಸೆ' ಸಿನಿಮಾ ಬಳಿಕ ನಿರ್ದೇಶಕ ವಿಜಯ್ ಪ್ರಸಾದ್ ಮತ್ತು ಜಗ್ಗೇಶ್ ಕಾಂಬಿನೇಷನ್‌ನಲ್ಲಿ 'ತೋತಾಪುರಿ' ಸಿನಿಮಾ ಬರ್ತಿದೆ. ಈ ಜೋಡಿಯ ಕಾಂಬಿನೇಷನ್ ಒಂದು ರೀತಿ ಕುತೂಹಲ ಮೂಡಿಸುವಂತಹ ಜೋಡಿ. 'ನೀರ್ ದೋಸೆ' ಇವರ ಕಾಂಬಿನೇಷನ್ ಯಾವಾಗ ಮರುಕಳಿಸುತ್ತೆ ಅಂತ ಪ್ರೇಕ್ಷಕರು ಕಾಯುತ್ತಿದ್ದಾರೆ.
ಸದ್ಯ ಚಿತ್ರದ ರಿಲೀಸ್ ಬಗ್ಗೆ ನಿರ್ದೇಶಕ ವಿಜಯ್ ಪ್ರಸಾದ್ ಮಾತನಾಡಿದ್ದಾರೆ. ಈಗಾಗಲೇ ಚಿತ್ರೀಕರಣ ಸಂಪೂರ್ಣವಾಗಿ ಮುಗಿದಿದೆ. ಇನ್ನೇನಿದ್ದರು ಚಿತ್ರ ತಂಡ ರಿಲೀಸ್ ದಿನಾಂಕವನ್ನು ಪ್ರಕಟ ಮಾಡಿ ಚಿತ್ರ ಮಂದಿರಕ್ಕೆ ಲಗ್ಗೆ ಇಡುವುದಷ್ಟೆ ಬಾಕಿ.
ಈ ಚಿತ್ರ ರಿಲೀಸ್ ಬಗ್ಗೆ ಇದ್ದ ಎಲ್ಲಾ ಪ್ರಶ್ನೆಗಳಿಗೂ ಸದ್ಯ ನಿರ್ದೇಶಕ ವಿಜಯ್ ಪ್ರಸಾದ್ ಉತ್ತರ ಕೊಟ್ಟಿದ್ದಾರೆ. ಆದರೆ ವಿಜಯ್ ಪ್ರಸಾದ್ ಅವರು ವಿಡಿಯೋ ಮೂಲಕ ವಿಚಾರವನ್ನು ಹಂಚಿಕೊಂಡು ವಿಶೇಷವಾಗಿ ಗಮನ ಸೆಳೆದಿದ್ದಾರೆ. ಈ ವಿಶೇಷತೆಗೆ ಕಾರಣ ನಟಿ ಅಮೂಲ್ಯ ತಾಯಿ ಆಗುತ್ತಿದ್ದಾರೆ ಎನ್ನುವ ವಿಚಾರ.

ಅವರು ಪ್ರೆಗ್ನೆಂಟ್ ಅಂತ ರಾಜ್ಯ ಖುಷಿಯಲ್ಲಿದೆ: ವಿಜಯ್ ಪ್ರಸಾದ್ ನಿರ್ದೇಶಕ!
ತೋತಾಪುರಿ ಸಿನಿಮಾ ರಿಲೀಸ್ ಆಗುವ ಬಗ್ಗೆ ನಿರ್ದೇಶಕ ವಿಜಯ್ ಪ್ರಸಾದ್ ವಿಡಿಯೋ ಮೂಲಕ ಮಾತನಾಡಿದ್ದಾರೆ. "ಅವರು ಪ್ರೆಗ್ನೆಂಟ್ ಆಗಿದ್ದಾರೆ ಅಂತ ಇಡೀ ರಾಜ್ಯವೇ ಖುಷಿಯಲ್ಲಿದೆ. ಇದರ ನಡುವೆ ನಮ್ಮದೊಂದು ಸುದ್ದಿ. ಅದು ಹೆರಿಗೆ ವಿಚಾರವಾಗಿ, ಹೆರಿಗೆ ನಿಜ ಅದರೆ ಅದು ಅವರದ್ದಲ್ಲ, ನಮ್ಮದು. ಅಂದರೆ ತೋತಾಪುರಿ ಚಿತ್ರದ ಪಾತ್ರ ಪರಿಚಯದ ಪುರಾಣ ನಿನ್ನೆಗೆ ಮುಗಿದಿದೆ. ಈಗ ಎಲ್ಲವೂ ಅಂದು ಕೊಂಡಂತೆ ಆದರೆ, ಜನವರಿಯಲ್ಲಿ ತೋತಾಪುರಿ ಚಿತ್ರದ ಬಿಡುಗಡೆ ನಿಜವಾಗಿಯೂ ಆಗುತ್ತೆ. ಅದಕ್ಕೂ ಮುನ್ನ ಡಿಸೆಂಬರ್‌ನಲ್ಲಿ ಆಡಿಯೋ ಲಾಂಚ್ ಆಗುತ್ತದೆ. ಜನವರಿ ಮೊದಲ ವಾರದಲ್ಲಿ ಟ್ರೇಲರ್ ಲಾಂಚ್ ಆಗುತ್ತದೆ. ನಂತರ ಸಿನಿಮಾ ರಿಲೀಸ್ ಆಗುತ್ತದೆ". ಎಂದು ವಿಡಿಯೋದಲ್ಲಿ ನಿರ್ದೇಶಕ ವಿಜಯ್ ಪ್ರಸಾದ್ ಹೇಳಿದ್ದಾರೆ.

ಪ್ರಗ್ನೆಂಟ್ ವಿಚಾರದ ಜೊತೆಗೆ ಹೆರಿಗೆ ವಿಚಾರ ಹೇಳಿದ ನಿರ್ದೇಶಕ!
ತೋತಾಪುರಿ ನಿರ್ದೇಶಕ ವಿಜಯ್ ಪ್ರಸಾದ್ ಅವರು ಈ ವೀಡಿಯೋ ಮಾಡಿರುವ ಉದ್ದೇಶ ಇದೇ. ಚಿತ್ರದ ಆಡಿಯೊ, ಟ್ರೇಲರ್ ಮತ್ತು ಬಿಡುಗಡೆಯ ಬಗ್ಗೆ ಮಾಹಿತಿ ನೀಡಲು. ಆದರೆ ವಿಡಿಯೋದ ಆರಂಭದಲ್ಲಿ ಅವರು ಒಂದು ಸಾಲನ್ನ ಹೇಳಿದ್ದಾರೆ. ಅವರು ಪ್ರೆಗ್ನೆಂಟ್ ಅಂತ ಇಡೀ ರಾಜ್ಯ ಖುಷಿಯಲ್ಲಿ ಇದೆ ಎಂದಿದ್ದಾರೆ. ಅದರೆ ನೇರವಾಗಿ ಯಾರ ಹೆಸರನ್ನೂ ಹೇಳಿಲ್ಲ. ಆದರೆ ಇದು ಪರೋಕ್ಷವಾಗಿ ನಟಿ ಅಮೂಲ್ಯ ಅವರಿಗೆ ಅನ್ವಯವಾಗುತ್ತಿದೆ.

ಪ್ರಚಾರಕ್ಕಾಗಿ ತೋತಾಪುರಿ ತಂಡದ ವಿಭಿನ್ನ ಪ್ರಯತ್ನ!
ಇನ್ನು ಸಿನಿಮಾ ಪ್ರಚಾರಕ್ಕಾಗಿ ತೋತಾಪುರಿ ಚಿತ್ರ ತಂಡ ವಿಭಿನ್ನ ಪ್ರಯತ್ನ ಮತ್ತು ಪ್ರಯೋಗಗಳನ್ನು ಮಾಡುತ್ತಲಿದೆ.
ಈ ಹಿಂದೆ ಜಗ್ಗೇಶ್ ಮತ್ತು ನಿರ್ದೇಶಕ ವಿಜಯ್ ಪ್ರಸಾದ್ ಸೇರಿ ಮಾಡಿದ್ದ ವಿಡಿಯೋ ಒಂದು ವೈರಲ್ ಆಗಿತ್ತು. ಜಗ್ಗೇಶ್ ಮತ್ತು ವಿಜಯ್ ಪ್ರಸಾದ್ ಮಾವಿನ ಹಣ್ಣು ತಿನ್ನುತ್ತಾ ಒಂದು ವಿಡಿಯೋ ಚಿತ್ರದ ಬಗ್ಗೆ ಹೇಳಿ ಕೊಂಡಿದ್ದರು.
ಈಗ ಚಿತ್ರ ನಿರ್ದೇಶಕ ವಿಜಯ್ ಪ್ರಸಾದ್ ತಮ್ಮದೇ ದಾಟಿಯಲ್ಲಿ ಚಿತ್ರದ ಅಪ್ಡೇಟ್ ನೀಡಿದ್ದಾರೆ.

ವಿಶೇಷ ಪಾತ್ರಗಳಲ್ಲಿ ಅದಿತಿ ಪ್ರಭುದೇವ, ಸುಮನ್ ರಂಗನಾಥ್!
ಇನ್ನು ಈ ಚಿತ್ರದಲ್ಲಿ ನಟಿ ಅದಿತಿ ಪ್ರಭುದೇವ, ಸುಮನ್ ರಂಗನಾಥ್ ವಿಶೇಷ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಅದಿತಿ ಬುರ್ಕಾ ಹಾಕಿರುವ ಲುಕ್‌ನಲ್ಲಿ ಈ ಹಿಂದೆ ಕಾಣಿಸಿಕೊಂಡಿದ್ದರು. ಅದಿತಿ ಪಾತ್ರದ ಜೊತೆಗೆ ಸುಮನ್ ರಂಗನಾಥ್, ಜಗ್ಗೇಶ್ ಪಾತ್ರಗಳು ಕೂಡ ಸಾಕಷ್ಟು ಕುತೂಹಲ ಮೂಡಿಸಿವೆ. ಸದ್ಯ ಚಿತ್ರದ ಮುಂದಿನ ವರ್ಷ ಜನವರಿಯಲ್ಲಿ ಬರಲಿದೆ ಎನ್ನುವ ಸೂಚನೆ ಕೊಟ್ಟಿದ್ದಾರೆ ನಿರ್ದೇಶಕ ವಿಜಯ್ ಪ್ರಸಾದ್.


Click it and Unblock the Notifications











