'ತೋತಾಪುರಿ' ಪ್ರಚಾರಕ್ಕೆ ಜಗ್ಗೇಶ್-ವಿಜಯ್ ಪ್ರಸಾದ್ ಅವರಿಂದ ಮುನ್ನುಡಿ; ವಿಭಿನ್ನ ಪ್ರಚಾರಕ್ಕೆ ಫ್ಯಾನ್ಸ್ ಫಿದಾ

'ನೀರ್ ದೋೆಸೆ' ಸಿನಿಮಾ ಬಳಿಕ ನಿರ್ದೇಶಕ ವಿಜಯ್ ಪ್ರಸಾದ್ ಮತ್ತು ಜಗ್ಗೇಶ್ ಕಾಂಬಿನೇಷನ್ ನಲ್ಲಿ 'ತೋತಾಪುರಿ' ಸಿನಿಮಾ ಬರ್ತಿರುವ ವಿಚಾರ ಎಲ್ಲರಿಗೂ ಗೊತ್ತಿದೆ. ಈಗಾಗಲೇ ಚಿತ್ರೀಕರಣ ಮುಗಿಸಿರುವ ತೋತಾಪುರಿ ಸಿನಿಮಾ ಬಿಡುಗಡೆ ತಯಾರಿ ಮಾಡಿಕೊಳ್ಳುತ್ತಿದೆ ಚಿತ್ರತಂಡ. ಇದಕ್ಕೂ ಮೊದಲು ಸದ್ಯ ಸಿನಿಮಾದಿಂದ ಟೀಸರ್ ಬಿಡುಗಡೆ ಮಾಡಲು ಪ್ಲಾನ್ ಮಾಡಿದೆ ಚಿತ್ರತಂಡ.

ಚಿತ್ರದ ಪ್ರಚಾರ ಕಾರ್ಯ ಪ್ರಾರಂಭ ಮಾಡಿರುವ ಜಗ್ಗೇಶ್ ಮತ್ತು ತಂಡ ವಿಭಿನ್ನವಾಗಿ ಪ್ರಮೋಷನ್ ಮಾಡುವ ಮೂಲಕ ಅಭಿಮಾನಿಗಳ ಗಮನ ಸೆಳೆಯುತ್ತಿದ್ದಾರೆ. ಸದ್ಯ ತೋತಾಪುರಿ ಚಿತ್ರದ ಟೀಸರ್ ಬಿಡುಗಡೆಗೂ ಮೊದಲು ಚಿತ್ರಕ್ಕೆ ಮುನ್ನುಡಿ ಬರೆದಿರುವ ನಿರ್ದೇಶಕ ವಿಜಯ್ ಪ್ರಸಾದ್ ಮತ್ತು ಜಗ್ಗೇಶ್ ಅವರ ಪುಟ್ಟ ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

'ತೋತಾಪುರಿ' ಮಾವುಗಳನ್ನು ತಂದಿಟ್ಟು ಅದಕ್ಕೆ ಉಪ್ಪು-ಕಾರ ಹಾಕಿ ತಿನ್ನುತ್ತಾ ಜಗ್ಗೇಶ್ ಮತ್ತು ವಿಜಯ್ ಪ್ರಸಾದ್ ಇಬ್ಬರೂ ಮಾತುಕತೆ ನಡೆಸುವ ವಿಡಿಯೋ ಇದೀಗಿದೆ. ಈ ವಿಡಿಯೋದಲ್ಲಿ ಬರುವ ಒಂದಿಷ್ಟು ಡಬಲ್ ಮೀನಿಂಗ್ ಡೈಲಾಗ್ ಗಳು ಹೈಲೆಟ್ ಆಗಿವೆ. ಇನ್ಮೇಲೆ ನಾವು ಶುರುಹಚ್ಕೋತೀವಿ ಪ್ರಚಾರನಾ..ಮಾವಿನ ಹಣ್ಣಿನ ವಾಟೆನ ಕೌರೋದಕ್ಕೆ ನೀವು ಇಟ್ಕೋತೀರಾ ಅಥವಾ ನಮಗೆ ಬಿಟ್ಟುಕೊಡ್ತೀರಾ?.. ಎಂದು ಜಗ್ಗೇಶ್ ಕೇಳಿದಕ್ಕೆ ನಿರ್ದೇಶಕ ವಿಜಯ್ ಪ್ರಸಾದ್, ಇಂಡಸ್ಟ್ರಿಗೆ ಬಂದು 40 ವರ್ಷದಿಂದ ಬರೀ ನೀವೇ ಕೌರ್ಕೊಳ್ಳುತ್ತಿದ್ದೀರಾ..ಇನ್ಮೇಲಾದ್ರು ನಮ್ಮಂಥವರಿಗೆ ಬಿಡಿ ಎಂದು ನಿರ್ದೇಶಕ ವಿಜಯ್ ಪ್ರಸಾದ್ ಹೇಳುವ ಪೋಲಿ ಡೈಲಾಗ್ ಜಗ್ಗೇಶ್ ಅಭಿಮಾನಿಗಳ ಮನ ಸೆಳೆಯುತ್ತಿದೆ.

 Jaggesh Starrer Totapuri Movie Promotional teaser Released

ಸದ್ಯ ಚಿತ್ರದ ಪ್ರಚಾರಕ್ಕೆಂದು ಬಿಡುಗಡೆ ಮಾಡಿರುವ ಮುನ್ನುಡಿ ಟೀಸರ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಸಿನಿಮಾ ಯಾವಾಗ ತೆರೆಗೆ ಬರಲಿದೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. "ಆತ್ಮೀಯರೆ.. ತೋತಾಪುರಿ ಚಿತ್ರದ Teaser ಬಿಡುಗಡೆಗೆ ನಿರ್ದೇಶಕ ವಿಜಯ ಪ್ರಸಾದ್ ಹಾಗು ನಾನು ಸೇರಿ ಮುನ್ನುಡಿ. ನಗಿಸುವ ನಮ್ಮ ಕಾಯಕಕ್ಕೆ ನಿಮ್ಮ ಶುಭಹಾರೈಕೆ ಇರಲಿ. Internet ಇಲ್ಲದ ಹಳ್ಳಿಯಲ್ಲಿದ್ದೆ Upload ಮಾಡಲು ಬಹುದೂರ ಕ್ರಮಿಸಿದೆ. ಧನ್ಯವಾದ" ಎಂದು ಹೇಳಿದ್ದಾರೆ.

ತೋತಾಪುರಿ ವಿಭಿನ್ನ ಪ್ರಮೋಷನ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಪ್ರಮೋಷನ್ ಮುನ್ನುಡಿಗೆ ಈ ರೀತಿ ಗಮನ ಸೆಳೆದಿರುವ ತೋತಾಪುರಿ ಇನ್ಮುಂದೆ ಯಾವೆಲ್ಲ ಪ್ರಯತ್ನಗಳ ಮೂಲಕ ಅಭಿಮಾನಿಗಳ ಮುಂದೆ ಬರಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ.

ಈಗಾಗಲೇ ಚಿತ್ರದಿಂದ ಬಿಡುಗಡೆಯಾಗಿರುವ ಒಂದಿಷ್ಟು ಫೋಟೋಗಳು ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ. ನವರಸನಾಯಕ ಜಗ್ಗೇಶ್ ಅವರ ವಿಭಿನ್ನ ಅವತಾರಗಳನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಚಿತ್ರದಲ್ಲಿ ಜಗ್ಗೇಶ್ ಗೆ ಜೋಡಿಯಾಗಿ ನಟಿ ಅದಿತಿ ಪ್ರಭುದೇವ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ ಅದಿತಿ ಪ್ರಭುದೇವ ಜಗ್ಗೇಶ್ ಜೊತೆ ನಟಿಸುತ್ತಿದ್ದಾರೆ.

ಕೆಎ ಸುರೇಶ್ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ತೋತಾಪುರಿ ಸಿನಿಮಾ ಎರಡು ಭಾಗಗಳಲ್ಲಿ ಸಿನಿಮಾ ಮೂಡಿಬರಲಿದೆ ಎಂದು ಹೇಳಲಾಗಿದೆ. ಈ ಬಗ್ಗೆ ಚಿತ್ರತಂಡ ಎಲ್ಲೂ ಸುಳಿವು ಬಿಟ್ಟುಕೊಟ್ಟಿಲ್ಲ. ಅಂದ್ಹಾಗೆ, ತೋತಾಪುರಿ ಸಿನಿಮಾದಲ್ಲಿ ಜಗ್ಗೇಶ್ ರೈತನ ಪಾತ್ರದಲ್ಲಿ ನಟಿಸಿದ್ದು, ಅದಿತಿ ಪ್ರಭುದೇವ ಮುಸ್ಲಿಂ ಯುವತಿ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಧನಂಜಯ್ ಸಹ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಸುಮನ ರಂಗನಾಥ್ ಸಹ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅನೂಪ್ ಸೀಳಿನ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ.

ಕೊರೊನಾ ಭೀಕರ ಪರಿಸ್ಥಿತಿಯ ನಡುವೆಯೂ ತೋತಾಪುರಿ ಮುಗಿಸಿರುವ ಜಗ್ಗೇಶ್ ಆಗಲೇ ಮಠ ಗುರುಪ್ರಸಾದ್ ಜೊತೆ ರಂಗನಾಯಕ ಸಿನಿಮಾದ ಚಿತ್ರೀಕರಣ ಪ್ರಾರಂಭ ಮಾಡಿದ್ದಾರೆ. ಈಗಾಗಲೇ ರಂಗನಾಯಕ ಚಿತ್ರದ ಕೆಲವು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

More from Filmibeat

English summary
Actor Jaggesh Starrer Totapuri Movie Promotional teaser Released. This movie is directed by Vijay Prasad.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X