»   » ಕಿಲಾಡಿ ಗೋವಿಂದೇಗೌಡನ 'ಜಂತರ್ ಮಂತರ್'ಗೆ ಜಗ್ಗೇಶ್ ಗಾಯನ

ಕಿಲಾಡಿ ಗೋವಿಂದೇಗೌಡನ 'ಜಂತರ್ ಮಂತರ್'ಗೆ ಜಗ್ಗೇಶ್ ಗಾಯನ

Posted By:
Subscribe to Filmibeat Kannada

'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮದ ಜನಪ್ರಿಯ ಗೋವಿಂದೇಗೌಡ ನಟನೆಗು ಸೈ, ನಿರ್ದೇಶನಕ್ಕೂ ಸೈ. ಸದ್ಯದಲ್ಲಿ ಜೀ ಕನ್ನಡ ವಾಹಿನಿಯ 'ಕಿಲಾಡಿ ಕುಟುಂಬ' ಕಾರ್ಯಕ್ರಮದಲ್ಲಿಯೂ ಬ್ಯುಸಿ ಆಗಿರುವ ಗೋವಿಂದ್ರೇ ಗೌಡ್ರು ಜೊತೆಗೆ ತಮ್ಮ ನಿರ್ದೇಶನದ 'ಜಂತರ್ ಮಂತರ್' ಚಿತ್ರದ ಮೇಕಿಂಗ್ ನಲ್ಲೂ ತೊಡಗಿಕೊಂಡಿದ್ದಾರೆ. ಇವರ ಚಿತ್ರದ ಬಗೆಗಿನ ಲೇಟೆಸ್ಟ್ ಸುದ್ದಿ ಅಂದ್ರೆ ನವರಸ ನಾಯಕ ನಟ ಜಗ್ಗೇಶ್ ರವರು 'ಜಂತರ್ ಮಂತರ್'ಗೆ ಹಾಡಿರುವುದು.

ಕಿಲಾಡಿ ಗೋವಿಂದೇಗೌಡ ನಿರ್ದೇಶನದಲ್ಲಿ ಮೂಡಿಬರಲಿದೆ 'ಜಂತರ್ ಮಂತರ್'

ಹೌದು, 'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮದ ಸ್ಪರ್ಧಿಗಳನ್ನು ತುಂಬಾ ಇಷ್ಟಪಡುವ ನಟ ಜಗ್ಗೇಶ್ ರವರು ಈಗ ಗೋವಿಂದೇಗೌಡ ನಿರ್ದೇಶನದ ಚಿತ್ರಕ್ಕೆ ಹಾಡಿದ್ದಾರೆ. ನಟನೆಯ ಜೊತೆಗೆ ಈ ಹಿಂದೆ ಕೆಲವು ಚಿತ್ರಗಳಿಗೆ ಹಾಡುವ ಪ್ರಯತ್ನ ಮಾಡಿರುವ ಜಗ್ಗೇಶ್ ರವರು ಈಗ ಮತ್ತೊಮ್ಮೆ ಗಾಯಕರಾಗಿ 'ಜಂತರ್ ಮಂತರ್' ಚಿತ್ರಕ್ಕೆ ಹಾಡಿದ್ದಾರೆ.

Jaggesh sung a song for Govindegowda directorial 'Jantar Mantar' film

ಜಗ್ಗೇಶ್ ರವರು ತಮ್ಮ ಚಿತ್ರಕ್ಕೆ ಹಾಡಿರುವ ಬಗ್ಗೆ ಕಿಲಾಡಿ ಗೋವಿಂದೇಗೌಡ ತಮ್ಮ ಫೇಸ್ ಬುಕ್ ಪುಟದಲ್ಲಿ 'ಅಣ್ಣ ಬಂದು 'ಜಂತರ್ ಮಂತರ್' ಸಿನಿಮಾದ ವಿಶೇಷ ಗೀತೆಯೊಂದನ್ನು ಹಾಡಿ ಹರಸಿದ ಸಂತೋಷದ ಕ್ಷಣ' ಎಂದು ಫೋಟೋ ಹಾಕಿ ಖುಷಿಯನ್ನು ಹಂಚಿಕೊಂಡಿದ್ದಾರೆ. ಆದ್ರೆ ಚಿತ್ರದಲ್ಲಿ ಜಗ್ಗೇಶ್ ಹಾಡಿರುವ ಹಾಡು ಯಾವುದು ಎಂಬುದನ್ನು ತಿಳಿದುಕೊಳ್ಳಲು ಅಭಿಮಾನಿಗಳು ಚಿತ್ರದ ಆಡಿಯೋ ರಿಲೀಸ್ ವರೆಗೆ ಕಾಯಲೇಬೇಕಾಗಿದೆ.

ಅಂದಹಾಗೆ ಗೋವಿಂದೇಗೌಡ ನಿರ್ದೇಶನದ ಎರಡನೇ ಸಿನಿಮಾ 'ಜಂತರ್ ಮಂತರ್'. ಈ ಹಿಂದೆ ಅವರು 'ನಟೋರಿಯಸ್' ಚಿತ್ರ ನಿರ್ದೇಶನ ಮಾಡಿದ್ದರು. 'ಜಂತರ್ ಮಂತರ್' ಚಿತ್ರವನ್ನು ಮೈಸೂರಿನ ಹುಲಿಯೂರಮ್ಮ ಬ್ಯಾನರ್ ಅಡಿಯಲ್ಲಿ ಶಿವಸುಂದರ್ ಮತ್ತು ಮಂಜಣ್ಣ ರವರು ನಿರ್ಮಾಣ ಮಾಡಿದ್ದು, ರಾಕಿ ಸೋನು ಸಂಗೀತ ನಿರ್ದೇಶನ ಮಾಡಿದ್ದಾರೆ.

English summary
Jaggesh sung a song for Govindegowda directorial 'Jantar Mantar' film

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada