For Quick Alerts
  ALLOW NOTIFICATIONS  
  For Daily Alerts

  'ಪದವಿ ಪೂರ್ವ' ಚಿತ್ರದ ಸೆಟ್‌ಗೆ ಸರ್ಪ್ರೈಸ್ ಭೇಟಿ ನೀಡಿದ ನಟ ಜಗ್ಗೇಶ್

  |

  ಹರಿಪ್ರಸಾದ್ ಜಯಣ್ಣ ನಿರ್ದೇಶನದಲ್ಲಿ ತಯಾರಾಗುತ್ತಿರುವ ಪದವಿ ಪೂರ್ವ ಚಿತ್ರದ ಸೆಟ್‌ಗೆ ನವರಸ ನಾಯಕ ಜಗ್ಗೇಶ್ ಸರ್ಪ್ರೈಸ್ ಭೇಟಿ ನೀಡಿದ್ದಾರೆ. ಜಗ್ಗೇಶ್ ಅವರ ಆಗಮನದಿಂದ ಇಡೀ ಚಿತ್ರತಂಡ ಸಂತಸಗೊಂಡಿದೆ.

  ಬೆಂಗಳೂರಿನ ಕಾಲೇಜುವೊಂದರಲ್ಲಿ ಪದವಿ ಪೂರ್ವ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ಜಗ್ಗೇಶ್ ಭೇಟಿ ನೀಡಿ ನಿರ್ದೇಶಕರಿಗೆ ಹಾಗು ಕಲಾವಿದರಿಗೆ ಶುಭಕೋರಿದ್ದಾರೆ.

  ''ಮುಂದಿನ ಪೀಳಿಗೆ ಉದ್ಧಾರಕ್ಕೆ ಸತ್ಯ ನುಡಿದೆ, ಅನುಭವಿಸಿ ಕನ್ನಡಕ್ಕೆ ಚಟ್ಟ ತಯಾರು''- ಜಗ್ಗೇಶ್

  ಪದವಿ ಪೂರ್ವ ಸಿನಿಮಾ ವಿದ್ಯಾರ್ಥಿಗಳ ಸುತ್ತ ಸುತ್ತುವ ಕಥೆಯಾಗಿದ್ದು, ಪೃಥ್ವಿ ಶಾಮನೂರ್ ಮತ್ತು ಅಂಜಲಿ ಅನೀಶ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಇವರ ಜೊತೆಗೆ ಯಶಾ ಶಿವಕುಮಾರ್ ಎಂಟ್ರಿಯಾಗಿದ್ದಾರೆ.

  ಇದು 90ರ ದಶಕದ ಹಿನ್ನೆಲೆಯಲ್ಲಿ ಬರುವ ಕಾಲೇಜಿನ ವಿದ್ಯಾರ್ಥಿಗಳ ಕಥೆಯಾಗಿದೆ. ಐದು ಪ್ರಮುಖ ಪಾತ್ರಗಳಿವೆ. ಸದ್ಯಕ್ಕೆ ಮೂರು ಪಾತ್ರಗಳನ್ನು ಅಂತಿಮ ಮಾಡಿದ್ದು, ಇನ್ನು ಎರಡು ಪಾತ್ರಕ್ಕೆ ಹುಡುಕಾಟ ಮಾಡುತ್ತಿದ್ದಾರೆ.

  ಸೂಪರ್ ಸ್ಟಾರ್ ನ ಲಾಂಚ್ ಮಾಡ್ತಿದೀನಿ ಅನ್ನೋ ಖುಷಿ ಇದೆ ನಂಗೆ | Super Star movie Director | Filmibeat Kannada

  ಯೋಗರಾಜ್ ಭಟ್ ಮತ್ತು ರವಿ ಶಾಮನೂರ್ ಈ ಚಿತ್ರವನ್ನು ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದು, ಈಗಾಗಲೇ ಮೊದಲ ಹಂತದ ಚಿತ್ರೀಕರಣ ಪ್ರಾರಂಭಿಸಿದೆ. ಯೋಗರಾಜ್ ಭಟ್ ಅವರು ಸಾಹಿತ್ಯ ರಚಿಸಲಿದ್ದು, ಅರ್ಜುನ್ ಜನ್ಯ ಸಂಗೀತ ಇರಲಿದೆ. ಸಂತೋಷ್ ರೈ ಪತಾಜೆ ಅವರು ಛಾಯಾಗ್ರಹಣವನ್ನು ಈ ಚಿತ್ರ ಒಳಗೊಂಡಿದೆ.

  English summary
  Kannada senior actor Jaggesh surprise visit to the sets of Hariprasad Jayanna's Padavi Poorva Movie. ಪದವಿ ಪೂರ್ವ ಚಿತ್ರದ ಸೆಟ್‌ಗೆ ಭೇಟಿ ನೀಡಿದ ನವರಸ ನಾಯಕ ಜಗ್ಗೇಶ್.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X