ಅಮ್ಮನಿಗಾಗಿ ಶಿವಲಿಂಗದ ಮೇಲೆ ಆಣೆ ಇಟ್ಟಿದ್ದೇಕೆ ನಟ ಜಗ್ಗೇಶ್
ಸ್ಯಾಂಡಲ್ ವುಡ್ ನ ಹಿರಿಯ ನಟ ಜಗ್ಗೇಶ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ ಎನ್ನುವ ವಿಚಾರ ಎಲ್ಲರಿಗೂ ಗೊತ್ತಿದೆ. ನವರಸನಾಯಕ ಒಂದಲ್ಲೊಂದು ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಸದಾ ಹಂಚಿಕೊಳ್ಳುತ್ತಿರುತ್ತಾರೆ.
Recommended Video
ಇತ್ತೀಚಿಗೆ ಅಧ್ಯಾತ್ಮದ ಕಡೆ ಹೆಚ್ಚು ಒಲವು ತೋರುತ್ತಿರುವ ಜಗ್ಗೇಶ್ ಅಧ್ಯಾತ್ಮದ ಬಗ್ಗೆ ಹೆಚ್ಚು ಪೋಸ್ಟ್ ಗಳನ್ನು ಶೇರ್ ಮಾಡುತ್ತಿದ್ದಾರೆ. ಇತ್ತೀಚಿಗೆ ಅಭಿಮಾನಿಯೊಬ್ಬ ಅಧ್ಯಾತ್ಮದ ಬಗ್ಗೆ ಕೇಳಿದ ಪ್ರಶ್ನೆಗೆ ಜಗ್ಗೇಶ್, ಜೀವನದಲ್ಲಿ ಎಲ್ಲವನ್ನೂ ಕೊಟ್ಟಿರುವ ದೇವರಿಗೆ ಧನ್ಯವಾದ ಅರ್ಪಿಸುವ ಸಮಯ ಬಂದಿದೆ, ಆ ಕೆಲಸ ಮಾಡುತ್ತಿರುವುದಾಗಿ ಉತ್ತರಿಸಿದ್ದರು.
ಇದೀಗ ಜಗ್ಗೇಶ್ ಮತ್ತೊಂದು ಇಂಟರೆಸ್ಟಿಂಗ್ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಹೌದು, ಬಾಲ್ಯದಿಂದ ಜಗ್ಗೇಶ್ ಪೂಜೆ ಮಾಡುತ್ತಿರುವ ಶಿವಲಿಂಗದ ಫೋಟೋವನ್ನು ಶೇರ್ ಮಾಡಿದ್ದಾರೆ. ಅಷ್ಟೆಯಲ್ಲ ಈ ಶಿವಲಿಂಗಕ್ಕೆ ಜಗ್ಗೇಶ್ ಅವರ ತಾಯಿ ಪ್ರತಿನಿತ್ಯ ಪೂಜೆ ಮಾಡಿಸುತ್ತಿದ್ದರಂತೆ. ಅಲ್ಲದೆ ಅಮ್ಮನಿಗಾಗಿ ಜಗ್ಗೇಶ್ ಯಾವ ತಪ್ಪು ಮಾಡುವುದಿಲ್ಲ ಎಂದು ಈ ಶಿವಲಿಂಗದ ಮೇಲೆ ಆಣೆ ಮಾಡಿದ ಸಂಗತಿಯನ್ನೂ ಬಿಚ್ಚಿಟ್ಟಿದ್ದಾರೆ.

ಅಂದ್ಹಾಗೆ ಜಗ್ಗೇಶ್ ಮಾಡಿರುವ ಟ್ವೀಟ್ ನಲ್ಲಿ, 'ಬಾಲ್ಯದಲ್ಲಿ ಅಮ್ಮ ನನಗೆ ಶಿವಪೂಜೆ ಮಾಡಿಸುತ್ತಿದ್ದ ಶಿವಲಿಂಗ. ಬದುಕಿನಲ್ಲಿ ನಾನು ಯಾವ ತಪ್ಪು ಮಾಡುವುದಿಲ್ಲ ಎಂದು ಅಮ್ಮನಿಗಾಗಿ ಆಣೆ ಇಟ್ಟ ಲಿಂಗ. ಅಮ್ಮ ಕಾಲವಾಗುವವರೆಗೆ ಇಲ್ಲೇ ಷೋಡಶ ಸೋಮವಾರ ವ್ರತ ಮಾಡುತ್ತಿದ್ದಳು. ನನ್ನ ಇಷ್ಟಲಿಂಗಕ್ಕೆ ಶರಣುಶರಣಾರ್ಥಿ' ಎಂದು ಟ್ವೀಟ್ ಮಾಡಿ ಶಿವಲಿಂಗದ ವಿಚಾರವನ್ನು ಬಹಿರಂಗಪಡಿಸಿದ್ದಾರೆ.
ಇತ್ತೀಚಿಗೆ ನಿರ್ದೇಶಕ ಸಂತೋಷ್ ಆನಂದ್ ರಾಮ್, ನಟ ಜಗ್ಗೇಶ್ ಅವರಿಗೆ ರಾತ್ರೋರಾತ್ರಿ ಫೋನ್ ಮಾಡಿ ಅಧ್ಯಾತ್ಮದ ಬಗ್ಗೆ ಮಾತನಾಡಿರುವ ವಿಷಯವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದರು. ಸಿನಿಮಾ ವಿಚಾರಕ್ಕೆ ಬರುವುದಾದರೆ ಜಗ್ಗೇಶ್ ಸದ್ಯ ತೋತಾಪುರಿ ಸಿನಿಮಾ ರಿಲೀಸ್ ಗೆ ಎದುರುನೋಡುತ್ತಿದ್ದಾರೆ. ಜೊತೆಗೆ ರಂಗನಾಯಕ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.


Click it and Unblock the Notifications











