'8MM' ಚಿತ್ರದಲ್ಲಿ ಖಾಕಿ ತೊಟ್ಟ ನವರಸ ನಾಯಕ ಜಗ್ಗೇಶ್

By Pavithra

ನವರಸ ನಾಯಕ ಜಗ್ಗೇಶ್ ಅಭಿನಯದ '8 ಎಂ ಎಂ' ಸಿನಿಮಾದ ಚಿತ್ರೀಕರಣ ಕಂಪ್ಲೀಟ್ ಆಗಿದೆ. ಫಸ್ಟ್ ಲುಕ್ ರಿಲೀಸ್ ಮಾಡಿ ಪ್ರೇಕ್ಷಕರನ್ನ ಇಂಪ್ರೆಸ್ ಮಾಡಿದ್ದ '8 ಎಂ ಎಂ' ಚಿತ್ರವನ್ನ ಹರಿಕೃಷ್ಣ ನಿರ್ದೇಶನ ಮಾಡಿದ್ದು ಜಗ್ಗೇಶ್ ಸಾಕಷ್ಟು ವರ್ಷಗಳ ನಂತ್ರ ನೆಗೆಟಿವ್ ರೋಲ್ ನಲ್ಲಿ ಕಾಣಿಸಿಕೊಳ್ತಿದ್ದಾರೆ.

ಜಗ್ಗೇಶ್ ಜೊತೆಯಲ್ಲಿ ಸಾಕಷ್ಟು ಕಲಾವಿದರು ಸಿನಿಮಾದಲ್ಲಿ ತೆರೆ ಹಂಚಿಕೊಂಡಿದ್ದು, ಸಿನಿಮಾದ ಸೆಟ್ ನಲ್ಲಿ ಜಗ್ಗೇಶ್ ವಿಶೇಷವಾದ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ಹಳೇ ಖದರ್ ನಲ್ಲಿ 'ನವರಸ ನಾಯಕ'

ಹಳೇ ಖದರ್ ನಲ್ಲಿ 'ನವರಸ ನಾಯಕ'

ಜಗ್ಗೇಶ್ ಅಭಿನಯದ ಹರಿಕೃಷ್ಣ ನಿರ್ದೇಶನದ '8 ಎಂ ಎಂ' ಸಿನಿಮಾ ಚಿತ್ರೀಕರಣ ಇತ್ತೀಚೆಗಷ್ಟೇ ಮುಗಿದಿದೆ. ಸಿನಿಮಾದ ಸೆಟ್ ನಲ್ಲಿ ನಟ ಜಗ್ಗೇಶ್ ಪೋಲಿಸ್ ಡ್ರೆಸ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಜಗ್ಗೇಶ್ ಪೊಲೀಸ್ ವೇಷದಲ್ಲಿ ಪ್ರೇಕ್ಷಕರ ಮುಂದೆ ಕಾಣಿಸಿಕೊಳ್ತಿದ್ದು, ಸಿನಿಮಾದಲ್ಲೂ ನವರಸ ನಾಯಕ ಪೊಲೀಸ್ ಖದರ್ ತೋರಿಸಲಿದ್ದಾರಾ ಅನ್ನುವುದು ಮಾತ್ರ ಸಸ್ಪೆನ್ಸ್.

ಕ್ಲೈಮ್ಯಾಕ್ಸ್ ನಲ್ಲಿ ಸಿಕ್ತು ರಾಯರ ಆಶೀರ್ವಾದ

ಕ್ಲೈಮ್ಯಾಕ್ಸ್ ನಲ್ಲಿ ಸಿಕ್ತು ರಾಯರ ಆಶೀರ್ವಾದ

'8 ಎಂ ಎಂ' ಸಿನಿಮಾದ ಚಿತ್ರೀಕರಣ ಮುಗಿಸಿರುವ ಸಿನಿಮಾ ತಂಡ ಜಗ್ಗೇಶ್ ರವರಿಗೆ ರಾಯರ ಫೋಟೋ ಕೊಟ್ಟು ಗೌರವಿಸಿದೆ. ಎಲ್ಲರಿಗೂ ತಿಳಿದಿರುವಂತೆ ನವರಸ ನಾಯಕ ರಾಯರ ಪರಮ ಭಕ್ತರಾಗಿರೋದ್ರಿಂದ ಚಿತ್ರತಂಡದವ್ರು ಇಂಥದೊಂದು ಪ್ಲಾನ್ ಮಾಡಿದ್ದಾರೆ.

ವಿಭಿನ್ನ ಪಾತ್ರದಲ್ಲಿ 'ಜಗ್ಗೇಶ್'

ವಿಭಿನ್ನ ಪಾತ್ರದಲ್ಲಿ 'ಜಗ್ಗೇಶ್'

ಜಗ್ಗೇಶ್ ಅವರೇ ಹೇಳುವಂತೆ '8 ಎಂ ಎಂ' ಸಿನಿಮಾದಲ್ಲಿ ತುಂಬಾನೇ ವಿಭಿನ್ನವಾಗಿರೋ ಪಾತ್ರವನ್ನ ನಿರ್ವಹಿಸಿದ್ದಾರಂತೆ. ಇಷ್ಟು ವರ್ಷಗಳ ನಂತರ ಸಿಕ್ಕಿರೋ ಈ ಪಾತ್ರ ಜಗ್ಗೇಶ್ ಅವರ ಮನಸ್ಸಿಗೆ ಹತ್ತಿರವಾಗಿದೆ.

ಪೊಲೀಸ್ ಅಧಿಕಾರಿಯಾಗಿ 'ವಸಿಷ್ಠ'

ಪೊಲೀಸ್ ಅಧಿಕಾರಿಯಾಗಿ 'ವಸಿಷ್ಠ'

ಸಿನಿಮಾದಲ್ಲಿ ನಿರ್ಮಾಪಕ, ನಟ ರಾಕ್ ಲೈನ್ ವೆಂಕಟೇಶ್ ಕೂಡ ಅಭಿನಯಿಸಿದ್ದು ವಸಿಷ್ಠ ಸಿಂಹ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾವನ್ನ ಸಾನ್ವಿ ಪ್ರೊಡಕ್ಷನ್ಸ್ ಹಾಗೂ ಹರಿಚರಣ್ ಆರ್ಟ್ ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಜೂಡಾ ಸ್ಯಾಂಡಿ ಸಂಗೀತ ಸಂಯೋಜನೆ ಸಿನಿಮಾಗಿದೆ. ಸದ್ಯ ಶೂಟಿಂಗ್ ಮುಗಿಸಿರೋ ಸಿನಿಮಾ ಟೀಂ ಪೋಸ್ಟ್ ಪ್ರೊಡಕ್ಷನ್ ನಲ್ಲಿ ಬ್ಯುಸಿ ಆಗಿದೆ.

More from Filmibeat

English summary
Will Kannada Actor Jaggesh play cop role in 8MM Movie.?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X