ನಟಿ ಶ್ವೇತಾ ಶ್ರೀವಾತ್ಸವ್ ಮಗಳ ಜಾತಕ ನೋಡಿ ಭವಿಷ್ಯ ಹೇಳಿದ ನಟ ಜಗ್ಗೇಶ್!

ನಟ, ರಾಜಕಾರಣಿ ಜಗ್ಗೇಶ್ ಅಧ್ಯಾತ್ಮದ ಬಗ್ಗೆ ದೈವ ಶಕ್ತಿಯ ಬಗ್ಗೆ ಅಪಾರ ವಿಶ್ವಾಸ ಹೊಂದಿರುವವರು. ದೈವ ಪವಾಡ ತಮ್ಮ ಜೀವನದಲ್ಲಿ ನಡೆದಿದೆ, ಅದೇ ತನ್ನನ್ನು ಕೈ ಹಿಡಿದು ನಡೆಸುತ್ತಿದೆ ಎಂದು ಹಲವು ಬಾರಿ ಜಗ್ಗೇಶ್ ಹೇಳಿಕೊಂಡಿದ್ದಾರೆ.

ರಾಜಕೀಯ ಹಾಗೂ ಸಿನಿಮಾ ಎರಡಲ್ಲೂ ಸಕ್ರಿಯರಾಗಿದ್ದಾರೆ ಜಗ್ಗೇಶ್. ಇತ್ತೀಚೆಗಷ್ಟೆ ರಾಜ್ಯಸಭಾ ಸದಸ್ಯರಾಗಿ ಆಯ್ಕೆ ಆಗಿರುವ ಜಗ್ಗೇಶ್, ಕೆಲವು ಸಿನಿಮಾಗಳಲ್ಲಿಯೂ ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ.

ಜಗ್ಗೇಶ್‌, ಸ್ವತಃ ಬಹಳ ನಿರೀಕ್ಷೆ ಇಟ್ಟುಕೊಂಡಿರುವ ಸಿನಿಮಾ 'ರಾಘವೇಂದ್ರ ಸ್ಟೋರ್ಸ್' ಈ ಸಿನಿಮಾವನ್ನು ಸಂತೋಶ್ ಆನಂದ್‌ ರಾಮ್ ನಿರ್ದೇಶನ ಮಾಡುತ್ತಿದ್ದು, ನಿರ್ಮಾಣ ಮಾಡುತ್ತಿರುವುದು ಹೊಂಬಾಳೆ. ಈ ಸಿನಿಮಾದಲ್ಲಿ ನಟಿ ಶ್ವೇತಾ ಶ್ರೀವಾತ್ಸವ್ ನಾಯಕಿಯಾಗಿ ನಟಿಸುತ್ತಿದ್ದಾರೆ. ತಾಯ್ತನದ ಖುಷಿಯಲ್ಲಿರುವ ಶ್ವೇತಾ ಶ್ರೀವಾತ್ಸ, ಮಗಳನ್ನು ಸೆಟ್‌ಗೆ ಕರೆದುಕೊಂಡು ಹೋಗಿ ಚಿತ್ರೀಕರಣದಲ್ಲಿ ಭಾಗವಹಿಸಿದ್ದರಂತೆ. ಈ ಸಂದರ್ಭ ನಟ ಜಗ್ಗೇಶ್, ಶ್ವೇತಾರ ಮಗಳ ಜಾತಕ ನೋಡಿ ಭವಿಷ್ಯ ಹೇಳಿದ್ದಾರೆ.

ಜಗ್ಗೇಶ್ ಹಾಗೂ ಅಸ್ಮಿತಾಳ ಬಾಂಡಿಂಗ್

ಜಗ್ಗೇಶ್ ಹಾಗೂ ಅಸ್ಮಿತಾಳ ಬಾಂಡಿಂಗ್

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ನಟಿ ಶ್ವೇತಾ ಶ್ರೀವಾತ್ಸವ್, ''ರಾಘವೇಂದ್ರ ಸ್ಟೋರ್ಸ್' ಸಿನಿಮಾ ಚಿತ್ರೀಕರಣ ಸಂದರ್ಭದಲ್ಲಿ ಜಗ್ಗೇಶ್ ಹಾಗೂ ನನ್ನ ಮಗಳು ಅಸ್ಮಿತಾ ನಡುವೆ ಒಳ್ಳೆಯ ಬಂಧ ಏರ್ಪಟ್ಟಿತ್ತು. ಇಬ್ಬರು ಸಾಕಷ್ಟು ಮಾತನಾಡುತ್ತಿದ್ದರು. ಜಗ್ಗೇಶ್ ಅವರಿಗಂತೂ ಅಸ್ಮಿತಾಳನ್ನು ನೋಡಿ ಅವರ ಮೊಮ್ಮಗ ನೆನಪಿಗೆ ಬರುತ್ತಿದ್ದನಂತೆ. ಇಬ್ಬರು ಒಟ್ಟಿಗೆ ಬಹಳ ಆಟವಾಡುತ್ತಿದ್ದರು, ಮಾತನಾಡುತ್ತಿದ್ದರು'' ಎಂದಿದ್ದಾರೆ.

ಶ್ವೇತಾ ಮಗಳ ಭವಿಷ್ಯ ಹೇಳಿದ ಜಗ್ಗೇಶ್

ಶ್ವೇತಾ ಮಗಳ ಭವಿಷ್ಯ ಹೇಳಿದ ಜಗ್ಗೇಶ್

''ಜಗ್ಗೇಶ್ ಅವರು, ನನ್ನ ಅಮ್ಮನಿಂದ ಅಸ್ಮಿತಾಳ ಜನ್ಮ ದಿನಾಂಕ ಸಮಯ ಎಲ್ಲ ತರಿಸಿಕೊಂಡು ಅಲ್ಲಿಯೇ ಅವರೇ ಕುಂಡಲಿ ಹಾಕಿ ನೋಡಿ ಭವಿಷ್ಯವನ್ನು ನನಗೆ ಹೇಳಿದರು. ನಿನ್ನ ಮಗಳು ಬಹಳ ಜಾಣೆ, ಬಹಳ ಚೆನ್ನಾಗಿ ಓದುತ್ತಾಳೆ. ಐಎಎಸ್ ಆಗುತ್ತಾಳೆ ಅಥವಾ ಸುಪ್ರೀಂ ಕೋರ್ಟ್ ಜಡ್ಜ್ ಆಗುತ್ತಾಳೆ. ಒಟ್ಟಾರೆ ಬಹಳ ಬುದ್ಧಿವಂತೆಯಾಗುತ್ತಾಳೆ. ಅವಳ ಬಗ್ಗೆ ಯೋಚನೆಯನ್ನೇ ಬಿಟ್ಟುಬಿಡಿ ಅಷ್ಟು ಚೆನ್ನಾಗಿ ಆಕೆ ಬೆಳೆಯುತ್ತಾಳೆ' ಎಂದೆಲ್ಲ ಹೇಳಿದರು. ಅದನ್ನು ಕೇಳಿ ನನಗಂತೂ ಬಹಳ ಖುಷಿ, ನೆಮ್ಮದಿಯಾಯಿತು'' ಎಂದಿದ್ದಾರೆ ಶ್ವೇತಾ ಶ್ರೀವಾತ್ಸವ್.

ವಿಡಿಯೋ ಚಿತ್ರಗಳನ್ನು ಹಂಚಿಕೊಂಡಿರುವ ಶ್ವೇತಾ

ವಿಡಿಯೋ ಚಿತ್ರಗಳನ್ನು ಹಂಚಿಕೊಂಡಿರುವ ಶ್ವೇತಾ

'ರಾಘವೇಂದ್ರ ಸ್ಟೋರ್ಸ್' ಸಿನಿಮಾ ಸೆಟ್‌ನಲ್ಲಿ ಜಗ್ಗೇಶ್ ಹಾಗೂ ಶ್ವೇತಾ ಶ್ರೀವಾತ್ಸವ್ ಪುತ್ರಿ ಒಟ್ಟಿಗೆ ಇರುವ ಚಿತ್ರಗಳು, ವಿಡಿಯೋಗಳನ್ನು ಶ್ವೇತಾ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಶ್ವೇತಾ ಹೇಳಿರುವಂತೆ, ಜಗ್ಗೇಶ್ ಹಾಗೂ ಅಸ್ಮಿತಾ ಬಹಳ ಆಪ್ತವಾಗಿದ್ದರಂತೆ. ಅವರಿಬ್ಬರ ಮಾತುಗಳು ಬಹಳ ಆಸಕ್ತಿಕರವಾಗಿದ್ದವಂತೆ. ಅವರಿಬ್ಬರು ಮಾತನಾಡುತ್ತಿದ್ದುದನ್ನು ತಾನು ಹೆಚ್ಚಾಗಿ ಮೊಬೈಲ್‌ನಲ್ಲಿ ರೆಕಾರ್ಡ್‌ ಮಾಡಿಕೊಳ್ಳಲಾಗಲಿಲ್ಲ ಎಂಬ ಬಗ್ಗೆ ಬೇಸರವನ್ನೂ ಶ್ವೇತಾ ವ್ಯಕ್ತಪಡಿಸಿದ್ದಾರೆ.

ಮತ್ತೆ ಸಿನಿಮಾಗಳಲ್ಲಿ ಬ್ಯುಸಿಯಾದ ಶ್ವೇತಾ

ಮತ್ತೆ ಸಿನಿಮಾಗಳಲ್ಲಿ ಬ್ಯುಸಿಯಾದ ಶ್ವೇತಾ

ಶ್ವೇತಾ ಶ್ರೀವಾತ್ಸವ್ ಬಹಳ ವರ್ಷಗಳ ಗ್ಯಾಪ್‌ನ ಬಳಿಕ ಮತ್ತೆ ನಟನೆಯಲ್ಲಿ ಸಕ್ರಿಯವಾಗಿದ್ದಾರೆ. 2016 ರಲ್ಲಿ ಬಿಡುಗಡೆ ಆದ 'ಕಿರಗೂರಿನ ಗಯ್ಯಾಳಿಗಳು' ಸಿನಿಮಾದ ಬಳಿಕ ಯಾವ ಸಿನಿಮಾದಲ್ಲೂ ನಟಿಸಿರಲಿಲ್ಲ ಶ್ವೇತಾ, ಈ ನಡುವೆ ತಾಯಿಯಾದ ಶ್ವೇತಾ ತಾಯ್ತನದ ಜವಾಬ್ದಾರಿಗಳನ್ನು ನಿಭಾಯಿಸಿದರು. ಈಗ 2022ರಲ್ಲಿ 'ಹೋಪ್' ಹೆಸರಿನ ಸಿನಿಮಾ ಮೂಲಕ ಚಿತ್ರರಂಗ ಮರುಪ್ರವೇಶ ಮಾಡಿದ ಅವರು, ಇದೀಗ 'ರಾಘವೇಂದ್ರ ಸ್ಟೋರ್ಸ್' ಸಿನಿಮಾದಲ್ಲಿ ಜಗ್ಗೇಶ್ ಜೊತೆ ನಟಿಸುತ್ತಿದ್ದಾರೆ. ಅದರ ಜೊತೆ 'ಚಿಕ್ಕಿಯ ಮುಕುತಿ' ಸಿನಿಮಾದಲ್ಲಿಯೂ ಶ್ವೇತಾ ನಟಿಸುತ್ತಿದ್ದಾರೆ.

More from Filmibeat

English summary
Jaggesh Told Shwetha Srivatsav daughter Ashmitha's future in Raghavendra Stores movie shooting set. Shwetha Srivatsav acting along with Jaggesh in that movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X