twitter
    For Quick Alerts
    ALLOW NOTIFICATIONS  
    For Daily Alerts

    ನಾವು ಮೂರ್ನಾಲ್ಕು ಜನ ಸತ್ತ ಮೇಲೆ ತಿಥಿ ಮಾಡಿ ಆನಂದಿಸಿ: ಜಗ್ಗೇಶ್ ಆಕ್ರೋಶದ ನುಡಿ

    |

    ಸ್ಯಾಂಡಲ್ ವುಡ್ ನಲ್ಲಿ ನವರಸನಾಯಕ ಜಗ್ಗೇಶ್ ಆಡಿಯೋ ಕ್ಲಿಪ್ ವಿವಾದ ಭುಗಿಲೆದಿದ್ದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಅವರ ಅಭಿಮಾನಿಗಳಿಗೆ ಅವಹೇಳನ ಮಾಡಿದ್ದಾರೆ ಎನ್ನಲಾಗುತ್ತಿರುವ ಆಡಿಯೋ ಬಗ್ಗೆ ಜಗ್ಗೇಶ್ ಆಕ್ರೋಶ ಹೊರಹಾಕಿದ್ದಾರೆ.

    Recommended Video

    ದರ್ಶನ್ ಅಭಿಮಾನಿಗಳು ಮಾಡಿದ್ದು ಎಷ್ಟು ಸರಿ

    ಮೈಸೂರಿನಲ್ಲಿ ಚಿತ್ರೀಕರಣದಲ್ಲಿದ್ದ ನಟ ಜಗ್ಗೇಶ್ ಮೇಲೆ ದರ್ಶನ್ ಅಭಿಮಾನಿಗಳು ಏಕಾಏಕಿ ಮುತ್ತಿಗೆ ಹಾಕಿ ತರಾಟೆ ತೆಗೆದುಕೊಂಡ ಬಳಿಕ ನವರಸನಾಯಕ ಜಗ್ಗೇಶ್ ಅವರ ಆಕ್ರೋಶದ ಕಟ್ಟೆ ಒಡೆದಿದೆ. ಒಬ್ಬ ಹಿರಿಯ ನಟ ಎನ್ನುವುದನ್ನು ಲೆಕ್ಕಿಸದೆ ಅವರ ಮೇಲೆ ಮುಗಿಬಿದ್ದ ಅಭಿಮಾನಿಗಳ ವಿರುದ್ಧ ಜಗ್ಗೇಶ ಅಸಮಾಧಾನ ಹೊರಹಾಕಿದ್ದಾರೆ. ಈ ಘಟನೆ ಬಳಿಕ ಜಗ್ಗೇಶ್ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿ ಆಕ್ರೋಶ ಹೊರಹಾಕಿದ್ದಾರೆ. ಮುಂದೆ ಓದಿ..

    ಜಗ್ಗೇಶ್ ಲೈವ್: ಮಾಧ್ಯಮ, ಸ್ಟಾರ್‌ಡಂ, ರೌಡಿಸಂ ಸಂಸ್ಕೃತಿ ಮೇಲೆ ಸಿಟ್ಟುಜಗ್ಗೇಶ್ ಲೈವ್: ಮಾಧ್ಯಮ, ಸ್ಟಾರ್‌ಡಂ, ರೌಡಿಸಂ ಸಂಸ್ಕೃತಿ ಮೇಲೆ ಸಿಟ್ಟು

    ಘಟಾನುಘಟಿಗಳ ಜೊತೆ ಹೆಜ್ಜೆ ಹಾಕಿದವನು ನಾನು

    ಘಟಾನುಘಟಿಗಳ ಜೊತೆ ಹೆಜ್ಜೆ ಹಾಕಿದವನು ನಾನು

    'ನಾನು ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಾಗ ಈ ಬಕೆಟ್ ಹೀಡಿಯೋರು ಯಾರು ಹುಟ್ಟಿರಲಿಲ್ಲ. 80ನೇ ದಶಕದಲ್ಲಿ ಸಿನಿಮಾರಂಗಕ್ಕೆ ಬಂದವನು ನಾನು. ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಪ್ರಭಾಕರ್, ಶಂಕರ್ ನಾಗ್ ಜೊತೆ ಹೆಜ್ಜೆ ಹಾಕಿದವನು ನಾನು. ಅವರ ಜೊತೆ ಮಾತಾನಾಡಿ, ನಕ್ಕು, ಅತ್ತು ಬದುಕಿದವನು. ಇವತ್ತು ಈ ಜಾಗದಲ್ಲಿ ನಿಂತಿದ್ದೀನಿ ಅಂದರೆ ಅದು ಕನ್ನಡಿಗರಿಂದ, ಕನ್ನಡಿಗರ ಪ್ರೀತಿಯಿಂದ ಮಾತ್ರ' ಎಂದಿದ್ದಾರೆ.

    ಕನ್ನಡ ಚಿತ್ರರಂಗ ಹಾಳಾಗಿ ಹೋಗುತ್ತಿದೆ

    ಕನ್ನಡ ಚಿತ್ರರಂಗ ಹಾಳಾಗಿ ಹೋಗುತ್ತಿದೆ

    'ಅನ್ಯ ಭಾಷಿಕರು ಬಂದು ಕನ್ನಡದ ಮಕ್ಕಳನ್ನು ದಬ್ಬಾಳಿಕೆ ಮಾಡುತ್ತಿದ್ದಾರೆ. ಕನ್ನಡ ಮಕ್ಕಳನ್ನು ತುಳಿಯುತ್ತಿದ್ದಾರೆ. ನಮ್ಮವರಿಗೆ ಪರಭಾಷೆಯಲ್ಲಿ ಮಾತನಾಡುವಂತೆ ಪ್ರಚೋದನೆ ನೀಡುತ್ತಿದ್ದಾರೆ. ಹಾಳಾಗಿ ಹೋಗುತ್ತಿದೆ ಕನ್ನಡ ಚಿತ್ರರಂಗ. ಇದನ್ನು ಕೇಳೋರು ಯಾರು ಇಲ್ಲ.'

    ನಾವು ಸತ್ತ ಮೇಲೆ ತಿಥಿ ಮಾಡಿ ಆನಂದಿಸಿ

    ನಾವು ಸತ್ತ ಮೇಲೆ ತಿಥಿ ಮಾಡಿ ಆನಂದಿಸಿ

    'ರಾಜ್ ಕಮಾರ್, ವಿಷ್ಣುವರ್ಧನ್, ಅಂಬರೀಶ್ ಸತ್ತ ಮಾರನೆ ದಿನ ಕನ್ನಡದ ಸ್ವಾಭಿಮಾನವೂ ಸಾಯುತ್ತಿದೆ. ನೆನಪಿರಲಿ ಉಳಿದಿದ್ದು ನಾವು ಮೂರ್ನಾಲ್ಕು ಜನ ಮಾತ್ರ. ನಾನೊಬ್ಬ ಶಿವರಾಜ್ ಕುಮಾರ್, ರವಿಚಂದ್ರನ್, ರಮೇಶ್ ಅರವಿಂದ್ ಮಾತ್ರ. ನಾವು ಸತ್ತ ಮೇಲೆ ತಿಥಿ ಮಾಡಿ, ಆನಂದ ಪಡಿ, ಸಂತೋಷ ಪಡಿ ಎಲ್ಲರೂ. ನಾಚಿಕೆ ಆಗಬೇಕು ನಿಮಗೆ' ಎಂದು ಗುಡುಗಿದ್ದಾರೆ.

    ಜಗ್ಗೇಶ್ ಆಡಿಯೋ ಕ್ಲಿಪ್ ವಿವಾದ: ನವರಸನಾಯಕನ ವಿರುದ್ಧ ಮುಗಿಬಿದ್ದ ದರ್ಶನ್ ಅಭಿಮಾನಿಗಳುಜಗ್ಗೇಶ್ ಆಡಿಯೋ ಕ್ಲಿಪ್ ವಿವಾದ: ನವರಸನಾಯಕನ ವಿರುದ್ಧ ಮುಗಿಬಿದ್ದ ದರ್ಶನ್ ಅಭಿಮಾನಿಗಳು

    ನನ್ನ ಪಾಡಿಗೆ ನನ್ನ ಬಿಡಿ

    ನನ್ನ ಪಾಡಿಗೆ ನನ್ನ ಬಿಡಿ

    'ನನ್ನ ಪಾಡಿಗೆ ನನ್ನ ಬಿಡಿ. ನಾನು ಕನ್ನಡದ ಕೆಲಸ ಮಾಡುತ್ತೇನೆ. ಎಷ್ಟೋ ಜನ ಮಕ್ಕಳು ಅವರ ಕಷ್ಟಸುಖಕ್ಕೆ ನನ್ನ ಸಲಹೆ ಕೇಳುತ್ತಾರೆ. ದಯವಿಟ್ಟು ನನ್ನನ್ನೂ ಅವಮಾನ ಮಾಡಬೇಡು. ನಾನು ಇನ್ನು ಹತ್ತಾರು ವರ್ಷ ಕನ್ನಡದ ಕೆಲಸ ಮಾಡಬೇಕು. ನನಗೆ ಮಸಿ ಬಳಿಯಬೇಡಿ' ಎಂದು ಮನವಿ ಮಾಡಿದ್ದಾರೆ.

    ನಾನು ತಲೆ ಹಿಡಿದು ಬೆಳೆದವನಲ್ಲ

    ನಾನು ತಲೆ ಹಿಡಿದು ಬೆಳೆದವನಲ್ಲ

    'ನನ್ನ 40 ವರ್ಷವನ್ನು ಅಪಮಾನಿಸುತ್ತಿದ್ದೀರಿ. 40 ವರ್ಷ ಊಟ ನಿದ್ದೆ ಇಲ್ಲದೆ ಚಾಪೆ ಹಾಸಿಕೊಂಡು ಬೆಳೆದವನು ನಾನು. ತಲೆ ಹಿಡಿದು ಬೆಳೆದವನಲ್ಲ. ನಾನು ಕನ್ನಡಿಗರ ಚಪ್ಪಾಳೆ ತೆಗೆದುಕೊಂಡು ಬೆಳೆದವನು. ನನಗೆ ಅವಮಾನ ಮಾಡುವುದು ಒಂದೇ ಕನ್ನಡಿಗರು ಅವಮಾನ ಮಾಡುವುದೇ ಒಂದೆ. ದಯಮಾಡಿ ನನ್ನ ಬಗ್ಗೆ ಮಾತನಾಡಬೇಡಿ.

    English summary
    Kannada Actpor Jaggesh Took Twitter Live to Talks about current situation of Kannada Film Industry.
    Tuesday, February 23, 2021, 15:02
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X