ಸಮ್ಮಿಶ್ರ ಸರ್ಕಾರ ಪತನದ ನಂತರ ಜಗ್ಗೇಶ್ ಹೇಳಿದ್ದೇನು?
Recommended Video
ದೇಶದಲ್ಲಿ ಯಾವ ಪಕ್ಷ ಆಡಳಿತದಲ್ಲಿರುತ್ತೋ ಅದೇ ಪಕ್ಷ ರಾಜ್ಯದಲ್ಲೂ ಅಧಿಕಾರದಲ್ಲಿದ್ರೆ ಆಗ ಮಾತ್ರ ರಾಜ್ಯ ಮತ್ತು ದೇಶ ಏಕಮುಖವಾಗಿ ಅಭಿವೃದ್ದಿಯತ್ತ ಹೆಜ್ಜೆ ಹಾಕಬಹುದು ಎಂಬ ಮಾತು ಅನೇಕರು ಹೇಳಿದ್ದಾರೆ. ಆದ್ರೆ, ನಮ್ಮ ಕರ್ನಾಟಕ ವಿಷ್ಯದಲ್ಲಿ ಅದು ಬಹುತೇಕ ವಿರುದ್ಧವಾಗಿಯೇ ಇತ್ತು.
ಕೇಂದ್ರದಲ್ಲಿ ಬಿಜೆಪಿ ಪಕ್ಷ ಅಧಿಕಾರದಲ್ಲಿದ್ದರೆ, ರಾಜ್ಯದಲ್ಲಿ ಕಾಂಗ್ರೆಸ್ ಅಥವಾ ಜೆಡಿಎಸ್ ಪಕ್ಷ ಅಧಿಕಾರ ನಡೆಸುತ್ತಿತ್ತು. ಕೇಂದ್ರದಲ್ಲಿ ಯುಪಿಎ ಸರ್ಕಾರ ಇದ್ದಾಗ ರಾಜ್ಯದಲ್ಲಿ ಬಿಜೆಪಿ ಅಧಿಕಾರ ಮಾಡಿದ್ದನ್ನ ನೋಡಿದ್ದೇವೆ.
ರಾಜ್ಯಪಾಲರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸಿದ ಎಚ್. ಡಿ. ಕುಮಾರಸ್ವಾಮಿ
ಇದೀಗ, ಈ ಟ್ರೆಂಡ್ ಗೆ ಸ್ವಲ್ಪ ಟ್ವಿಸ್ಟ್ ಸಿಕ್ಕಿದೆ. ರಾಜ್ಯದಲ್ಲಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನವಾಗಿದೆ. ವಿಧಾನಸಭೆಯಲ್ಲಿ ಸಿಎಂ ಕುಮಾರಸ್ವಾಮಿ ಸರ್ಕಾರ ವಿಶ್ವಾಸಮತ ಕಳೆದುಕೊಂಡಿದೆ. ಈಗ ಬಿಜೆಪಿ ಅಧಿಕಾರ ನಡೆಸಲು ಸಜ್ಜಾಗುತ್ತಿದೆ. ಈ ಬಗ್ಗೆ ನವರಸ ನಾಯಕ ಜಗ್ಗೇಶ್ ಟ್ವಿಟ್ಟರ್ ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ನಾಡಿಗಾಗಿ ಸ್ವಾರ್ಥ ಚಿಂತನೆ ಮಾಡುವೆ
''ನಾನು ರಾಜ್ಯದ ಹಿತಕ್ಕಾಗಿ ಕೆಲವೊಮ್ಮೆ ಸ್ವಾರ್ಥ ಚಿಂತನೆ ಮಾಡುವೆ! ರಾಜ್ಯ ಮತ್ತು ರಾಷ್ಟ್ರ ಸರ್ಕಾರ ಒಂದೆ ಇದ್ದಾಗ ಮಾತ್ರ ನಮ್ಮ ಪರಿಕಲ್ಪನೆಯ ಕನಸು ಸಫಲ! ಈಗ ಆ ಕಾಲ ಬಂದಿದೆ ಕನ್ನಡ ನಾಡಿಗೆ!'' ಎಂದು ಜಗ್ಗೇಶ್ ಅಭಿಪ್ರಾಯ ಪಟ್ಟಿದ್ದಾರೆ. ಸಿಎಂ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಬಹುಮತ ಕಳೆದುಕೊಳ್ಳುತ್ತಿದ್ದಂತೆ ಟ್ವಿಟ್ಟರ್ ನಲ್ಲಿ ಜಗ್ಗೇಶ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಕುಮಾರಸ್ವಾಮಿ

ಸ್ವಾರ್ಥಕ್ಕಿಂತ ಸಮಾಜಕ್ಕೆ ಚಿಂತಿಸುವ
ಸಮ್ಮಿಶ್ರ ಸರ್ಕಾರ ಪತನವಾಗಿದ್ದಕ್ಕೆ ಮತ್ತು ಬಿಜೆಪಿ ಅಧಿಕಾರ ವಹಿಸಿಕೊಳ್ಳುವುದರ ಬಗ್ಗೆ ಅನೇಕರು, ಪರ ಮತ್ತು ವಿರೋಧದ ಚರ್ಚೆ ಮಾಡ್ತಾರೆ. ಅದು ಸಹಜ ಎಂಬಂತೆ ಜಗ್ಗೇಶ್ ಹೇಳಿದ್ದಾರೆ. ''ಕಳೆದುಕೊಂಡವರು ದುಃಖಿಸಬಹುದು! ಪಡೆದವರು ಹರ್ಷಿಸಿಸಬಹುದು! ದಯಮಾಡಿ ಸ್ವಾರ್ಥಕ್ಕಿಂತ ಸಮಾಜಕ್ಕೆ ಚಿಂತಿಸುವ! ಇಲ್ಲದಿದ್ದರೆ ಕ್ಷಮೆಯಿರದು ರಾಜಕೀಯ ಬದುಕಿಗೆ..'' ಎಂದು ಟ್ವೀಟ್ ಮಾಡಿದ್ದಾರೆ.

ನನ್ನ ಹೇಳಿಕೆಗೆ ಪರ-ವಿರೋಧ ಸಹಜ
''ಮಾತಾಡುವ ಹಕ್ಕು ಪ್ರತಿಯೊಬ್ಬರಿಗು ನಮ್ಮದೇಶದ ಶ್ರೇಷ್ಟ ಸಂವಿಧಾನ ನೀಡಿದೆ.. ನನ್ನದು ನೇರನುಡಿ..ಎಲ್ಲರು ಒಪ್ಪುತ್ತಾರೆ ಎಂದು ಭಾವಿಸಿಲ್ಲಾ!ಅನಿಸಿಕೆಗೆ ಪರ ವಿರೋಧ ಸಹಜ! ವ್ಯಕ್ತಪಡಿಸುವಿಕೆ ಶ್ರೇಷ್ಟವಾಗಿದ್ದರೆ ಎಲ್ಲಾ ವರ್ಗವು ಚರ್ಚೆಮಾಡುತ್ತದೆ.. ಕೆಟ್ಟ ಪದಪುಂಜ ವರ್ಜಿತವಾಗುತ್ತದೆ..'' ಎಂದು ಮತ್ತೊಮ್ಮೆ ತಮ್ಮ ಅಭಿಪ್ರಾಯವನ್ನ ಸಮರ್ಥಿಸಿಕೊಂಡಿದ್ದಾರೆ.
ಸರ್ಕಾರ ಉರುಳಿಸಿದ ಖುಷಿ: ಮೋದಿಗೆ ಪತ್ರ ಬರೆದ ಯಡಿಯೂರಪ್ಪ

ವಿಧಾನಸಭೆ ಚುನಾವಣೆಯಲ್ಲಿ ಸೋತ್ತಿದ್ದರು
ಕಳೆದ ವರ್ಷ ನಡೆದ ವಿಧಾನಸಭೆ ಚುನಾವಣೆಯಲ್ಲಿ ನಟ ಜಗ್ಗೇಶ್ ಯಶವಂತಪುರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಕೊನೆಯ ಹಂತದಲ್ಲಿ ಟಿಕೆಟ್ ಸಿಕ್ಕ ಕಾರಣ, ನಿರೀಕ್ಷೆಯ ಪ್ರಚಾರ ಮಾಡಲು ಸಾಧ್ಯವಾಗದೇ, ಕಾಂಗ್ರೆಸ್ ಅಭ್ಯರ್ಥಿ ಎಸ್.ಟಿ ಸೋಮಶೇಖರ್ ವಿರುದ್ಧ ಸೋಲು ಕಂಡಿದ್ದರು.


Click it and Unblock the Notifications











