twitter
    For Quick Alerts
    ALLOW NOTIFICATIONS  
    For Daily Alerts

    ಮೂರು ವಾರಗಳಲ್ಲಿ 'ನೀರ್ ದೋಸೆ' ಚಿತ್ರದಿಂದ ಬಂದ ಲಾಭ ಎಷ್ಟು ಗೊತ್ತಾ?

    By Harshitha
    |

    'ಭಾರತ್ ಬಂದ್', 'ಕರ್ನಾಟಕ ಬಂದ್', ಕಾವೇರಿ ಹೋರಾಟ, ಪ್ರತಿಭಟನೆ, ಲಾಠಿ ಚಾರ್ಚ್, ಗೋಲಿಬಾರ್, ಸೆಕ್ಷನ್ 144 ಜಾರಿ, ಕರ್ಫ್ಯೂ....ಕಳೆದ ಮೂರು ವಾರಗಳಿಂದ ಕರ್ನಾಟಕದಲ್ಲಿ ಕಂಡು ಬಂದಿರುವ ಚಿತ್ರಣ ಇದು.

    ಮಂಡ್ಯ, ಮೈಸೂರು, ಬೆಂಗಳೂರು ಸೇರಿದಂತೆ ಕಾವೇರಿ ಕೊಳ್ಳದ ಪ್ರದೇಶಗಳಲ್ಲಿ ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಪ್ರತಿನಿತ್ಯ ಪ್ರತಿಭಟನೆ ನಡೆಯುತ್ತಲೇ ಇದೆ. [ವಿಮರ್ಶೆ : ಬಾಡೂಟದ ಜೊತೆ 'ನೀರ್ ದೋಸೆ' ಸವಿದಂತೆ ಇದೇ ಜಗ್ಗೇಶ.!]

    ಎಲ್ಲರ ಕಣ್ಣು ಸದ್ಯ ಕಾವೇರಿ ಮೇಲೆ ಇರುವುದರಿಂದ, ಚಿತ್ರಮಂದಿರಕ್ಕೆ ಹೋಗುವವರ ಸಂಖ್ಯೆ ಕಡಿಮೆ. ಹೀಗಿದ್ದರೂ, ಮೂರು ವಾರಗಳ ಹಿಂದೆ ಬಿಡುಗಡೆ ಆಗಿದ್ದ 'ನೀರ್ ದೋಸೆ' ಚಿತ್ರ ಮಾತ್ರ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಮುಂದೆ ಓದಿ....

    ಮೂರು ವಾರಗಳಲ್ಲಿ 'ನೀರ್ ದೋಸೆ' ಗಳಿಸಿದ ಹಣ ಎಷ್ಟು?

    ಮೂರು ವಾರಗಳಲ್ಲಿ 'ನೀರ್ ದೋಸೆ' ಗಳಿಸಿದ ಹಣ ಎಷ್ಟು?

    ಬಾಡೂಟದ ಮಾತುಗಳಿಂದ ಕನ್ನಡ ಸಿನಿ ಪ್ರೇಕ್ಷಕರಿಗೆ ರಸದೌತಣ ನೀಡಿದ್ದ 'ನೀರ್ ದೋಸೆ' ಚಿತ್ರ ಮೂರು ವಾರಗಳಲ್ಲಿ ಬರೋಬ್ಬರಿ 12 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. [ಕಲೆಕ್ಷನ್ ರಿಪೋರ್ಟ್: ಬಿಸಿಬಿಸಿಯಾಗಿ ಸೇಲಾದ 'ನೀರ್ ದೋಸೆ']

    ಜಾಸ್ತಿಯೋ, ಕಡಿಮೆಯೋ.?

    ಜಾಸ್ತಿಯೋ, ಕಡಿಮೆಯೋ.?

    ಬಂದ್, ಹೋರಾಟ, ಚಿತ್ರ ಪ್ರದರ್ಶನ ಸ್ಥಗಿತ...ಇವೆಲ್ಲದರ ನಡುವೆಯೂ 'ನೀರ್ ದೋಸೆ' ಸಿನಿಮಾ 12 ಕೋಟಿ ರೂಪಾಯಿ ಗಳಿಸಿದೆ ಅಂದ್ರೆ, ಅದು ಚಿತ್ರಕ್ಕೆ ಸಿಕ್ಕಿರುವ ನಿಜವಾದ ಯಶಸ್ಸು. ['ನೀರ್ ದೋಸೆ' ಸವಿಯಲು ಗರ್ಲ್ ಫ್ರೆಂಡ್ ಜೊತೆ ಹೋದ್ರೆ 'ಗುಮ್ಮೋದು' ಖಚಿತ!]

    ಇನ್ನೂ ಹೆಚ್ಚು ಗಳಿಕೆ ಮಾಡುವ ನಿರೀಕ್ಷೆ ಇತ್ತು.!

    ಇನ್ನೂ ಹೆಚ್ಚು ಗಳಿಕೆ ಮಾಡುವ ನಿರೀಕ್ಷೆ ಇತ್ತು.!

    ''ಬಂದ್ ಇಲ್ಲದೇ ಇದ್ದರೆ 'ನೀರ್ ದೋಸೆ' ಕಲೆಕ್ಷನ್ 20 ಕೋಟಿ ದಾಟುತ್ತಿತ್ತು'' ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ನಟ ಜಗ್ಗೇಶ್.

    ಒಂದು ವಾರಕ್ಕೆ ಆರು ಕೋಟಿ ಕಲೆಕ್ಷನ್

    ಒಂದು ವಾರಕ್ಕೆ ಆರು ಕೋಟಿ ಕಲೆಕ್ಷನ್

    ಕರ್ನಾಟಕ ರಾಜ್ಯಾದ್ಯಂತ ತೆರೆಕಂಡಿದ್ದ 'ನೀರ್ ದೋಸೆ' ಚಿತ್ರ ಮೊದಲನೇ ವಾರ ದೋಚಿದ್ದು 6 ಕೋಟಿ ರೂಪಾಯಿ.

    ಎರಡನೇ ವಾರ 'ಮಳೆ' ಬಂತಲ್ಲ.!

    ಎರಡನೇ ವಾರ 'ಮಳೆ' ಬಂತಲ್ಲ.!

    ಕಲೆಕ್ಷನ್ ವಿಷಯದಲ್ಲಿ ಮೊದಲನೇ ವಾರ ಫುಲ್ ಝೂಮ್ ನಲ್ಲಿ 'ನೀರ್ ದೋಸೆ' ಎರಡನೇ ವಾರ ಕೊಂಚ ಡಲ್ ಆಗಲು ಕಾರಣ 'ಮುಂಗಾರು ಮಳೆ-2'. ಗಣೇಶ್ ಅಭಿನಯದ 'ಮುಂಗಾರು ಮಳೆ-2' ಚಿತ್ರಕ್ಕೆ ನೆಕ್ ಟು ನೆಕ್ ಸ್ಪರ್ಧೆ ನೀಡುತ್ತಿರುವ 'ನೀರ್ ದೋಸೆ' ಮೂರು ವಾರಗಳ ಅಂತ್ಯಕ್ಕೆ 12 ಕೋಟಿ ರೂಪಾಯಿ ವಸೂಲಿ ಮಾಡಿದೆ.

    ಜಗ್ಗೇಶ್ ಕೆರಿಯರ್ ನಲ್ಲೇ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ

    ಜಗ್ಗೇಶ್ ಕೆರಿಯರ್ ನಲ್ಲೇ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ

    ಜಗ್ಗೇಶ್ ರವರ ಎರಡು ದಶಕಗಳ ಸಿನಿ ಪಯಣದಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ ಎಂಬ ಖ್ಯಾತಿಗೆ 'ನೀರ್ ದೋಸೆ' ಪಾತ್ರವಾಗಿದೆ.

    ಕಡಿಮೆ ಬಜೆಟ್: ಹೆಚ್ಚು ಲಾಭ

    ಕಡಿಮೆ ಬಜೆಟ್: ಹೆಚ್ಚು ಲಾಭ

    ನಿಜ ಹೇಳ್ಬೇಕಂದ್ರೆ, 'ನೀರ್ ದೋಸೆ' ಚಿತ್ರದ ಬಜೆಟ್ ಕಡಿಮೆ. ಆದರೂ, ಕ್ವಾಲಿಟಿಗೆ ಚಿತ್ರತಂಡ ಕಾಂಪ್ರೋಮೈಸ್ ಮಾಡಿಕೊಂಡಿರ್ಲಿಲ್ಲ. ಹೀಗಾಗಿ, ಬಾಕ್ಸ್ ಆಫೀಸ್ ನಲ್ಲಿ 'ನೀರ್ ದೋಸೆ' ಹೆಚ್ಚು ಕಲೆಕ್ಷನ್ ಮಾಡುವ ಮೂಲಕ ನಿರ್ಮಾಪಕರಿಗೆ ಲಾಭ ಆಗುತ್ತಿದೆ.

    ತಾಳ್ಮೆ, ಸಹನೆ ದೌರ್ಬಲ್ಯವಲ್ಲ, ಅವು ಅಸ್ತ್ರ.!

    ತಾಳ್ಮೆ, ಸಹನೆ ದೌರ್ಬಲ್ಯವಲ್ಲ, ಅವು ಅಸ್ತ್ರ.!

    ಎಷ್ಟೇ ವಿವಾದ ಆದರೂ 'ಮೌನ, ತಾಳ್ಮೆ, ಸಹನೆ ದೌರ್ಬಲ್ಯವಲ್ಲ, ಅವು ಅಸ್ತ್ರ' ಎಂಬುದನ್ನ ನಂಬಿದ್ದ 'ನೀರ್ ದೋಸೆ' ನಾಯಕ ಜಗ್ಗೇಶ್, ದತ್ತಣ್ಣ, ಹರಿಪ್ರಿಯಾ ನಿರ್ದೇಶಕ ವಿಜಯ್ ಪ್ರಸಾದ್ ರವರಿಗೆ ಈಗ ಪ್ರತಿಫಲ ಸಿಗುತ್ತಿದೆ.

    English summary
    Kannada Actor Jaggesh has taken his twitter account to reveal 3 weeks Collection report of Kannada Movie 'Neer Dose'.
    Friday, September 23, 2016, 14:26
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X