Just In
Don't Miss!
- News
Biden Inauguration live updates: ಅಮೆರಿಕ ಅಧ್ಯಕ್ಷರಾಗಿ ಜೋ ಬೈಡನ್ ಪದಗ್ರಹಣದ ನೇರಪ್ರಸಾರ
- Finance
ಸಿಯೆಟ್ ಲಿಮಿಟೆಡ್ ಲಾಭದ ಪ್ರಮಾಣ ಎರಡೂವರೆ ಪಟ್ಟು ಹೆಚ್ಚಳ
- Sports
ಐಎಸ್ಎಲ್: ಹೈದರಾಬಾದ್ ಜಯಕ್ಕೆ ಅಡ್ಡಿಯಾದ ಕಳಿಂಗ ವಾರಿಯರ್ಸ್
- Education
AAI Recruitment 2021: 7 ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Automobiles
ವಾಣಿಜ್ಯ ವಾಹನಗಳ ಖರೀದಿಗಾಗಿ ಹಲವು ಆಕರ್ಷಕ ಸಾಲಸೌಲಭ್ಯಗಳಿಗೆ ಚಾಲನೆ ನೀಡಿದ ಟಾಟಾ
- Lifestyle
ಜ. 25ಕ್ಕೆ ಕುಂಭ ರಾಶಿಗೆ ಬುಧನ ಸಂಚಾರ: 12 ರಾಶಿಗಳ ಮೇಲೆ ಇದರ ಪ್ರಭಾವವೇನು?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಮಹರ್ಷಿ' ಚಿತ್ರದಿಂದ ಕನ್ನಡಕ್ಕೆ ಅನ್ಯಾಯ: ಜಗ್ಗೇಶ್ ಚಾಟಿ ಏಟು
ಪರಭಾಷೆ ಚಿತ್ರಗಳು ಬಹಳ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾದ ಪ್ರತಿಸಲವೂ ಕನ್ನಡಕ್ಕ ಅನ್ಯಾಯವಾಗ್ತಿದೆ ಎಂಬ ಕೂಗು ಕೇಳುತ್ತಲೇ ಇದೆ. ಆದ್ರೆ, ಇದಕ್ಕೆ ಶಾಶ್ವತ ಪರಿಹಾರ ಮಾತ್ರ ಯಾರಿಂದಲೂ ಸೂಚಿಸಲು ಸಾಧ್ಯವಾಗುತ್ತಿಲ್ಲ.
ಈಗ ತೆಲುಗು ನಟ ಮಹೇಶ್ ಬಾಬು ಅಭಿನಯದ ಮಹರ್ಷಿ ಸಿನಿಮಾ ದೇಶಾದ್ಯಂತ ತೆರೆಕಂಡಿದೆ. ಕರ್ನಾಟಕದಲ್ಲಿ ಸುಮಾರು 100 ಚಿತ್ರಮಂದಿರದಲ್ಲಿ 496ಕ್ಕೂ ಅಧಿಕ ಶೋಗಳು ಪ್ರದರ್ಶನ ಕಂಡಿದೆ ಎನ್ನಲಾಗಿದೆ.
ಮಹೇಶ್ ಬಾಬು 'ಮಹರ್ಷಿ' ವಿರುದ್ಧ ಕನ್ನಡಾಭಿಮಾನಿಗಳು ಆಕ್ರೋಶ
'ಮಹರ್ಷಿ' ಚಿತ್ರಕ್ಕೆ ಶೋ ನೀಡುವುದಕ್ಕಾಗಿ ಕನ್ನಡದ ಬೆಲ್ ಬಾಟಮ್, ಪ್ರೀಮಿಯರ್ ಪದ್ಮಿನಿ ಅಂತಹ ಯಶಸ್ವಿ ಚಿತ್ರಗಳನ್ನ ಚಿತ್ರಮಂದಿರಿಂದ ತೆಗೆಯಲಾಗಿದೆ ಎಂಬ ಆರೋಪವೂ ಇದೆ. ಆದ್ರೆ, ಯಾರೂ ಏನೂ ಕ್ರಮ ತೆಗೆದುಕೊಳ್ಳುವಂತಹ ಸ್ಥಿತಿಯಲಿಲ್ಲ ಎಂಬುದು ನಟ ಜಗ್ಗೇಶ್, ರಿಷಬ್ ಶೆಟ್ಟಿ ಮಾತಿನಲ್ಲಿ ಅರ್ಥವಾಗುತ್ತಿದೆ. ಈ ಕಲಾವಿದರು ಏನಂದ್ರು? ಮುಂದೆ ಓದಿ....

ಊರಿನ ಉಸಾಬರಿ ನನಗೇಕೆ
ಜಗ್ಗೇಶ್ ಅವರೇ ಈ ಬಗ್ಗೆ ಏನೂ ಮಾತನಾಡಲ್ವ ಎಂದು ಅಭಿಮಾನಿಯೊಬ್ಬ ಕೇಳಿದ್ದಕ್ಕೆ ನವರಸ ನಾಯಕ ಈ ರೀತಿ ಪ್ರತಿಕ್ರಿಯಿಸಿದ್ದಾರೆ. ''ಕನ್ನಡದ ಪರ ಅಂದು ನಾನು ದನಿ ಎತ್ತಿದಾಗ ಸಂವಿಧಾನದ ವಿರುದ್ಧ ಎಂದು ನನಗೆ 2.75 ದಂಡ ವಿಧಿಸಿತು ಕಾನೂನು! ಆಗ ನನ್ನ ಉಧ್ಯಮದ ಮಹನೀಯರು ಮೌನ ಮುರಿಯದೆ ಜಾಣ ಕುರುಡರಾಗಿ ಪರದೆಯ ಮೇಲಿನ ಚಪ್ಪಾಳೆಗೆ ಸೀಮಿತವಾದರು! ಅಂದೆ ನಿರ್ಧರಿಸಿದೆ ಊರಿನ ಉಸಾಬರಿ ನನಗೇಕೆ ಎಂದು! ಕನ್ನಡ ಉಳಿಯಲಿ ಎನ್ನುವರು ಕನ್ನಡದ ಪರವಾಗಿ ಇದ್ದಾರೆ! ನನ್ನ ದುಡ್ಡು ನನ್ನ ಆಯ್ಕೆ ಪರ ಭಾಷೆಪರ!''
'ಮಹರ್ಷಿ' ಚಿತ್ರದ ರಿಲೀಸ್ ವೇಳೆ ಅಭಿಮಾನಿ ಸಾವು

ಬಲತ್ಕಾರದಿಂದ ಬದಲಾವಣೆ ಅಸಾಧ್ಯ
''ಇದು ವಾಣಿಜ್ಯ ಮಂಡಳಿ ಅಥವ ಬಲತ್ಕಾರದಿಂದ ಬದಲಾವಣೆ ತರಲಾಗದ ಸಂಗತಿ! ಈ ದೇಶದ ಸಂವಿಧಾನ ವ್ಯಕ್ತಿ ಅಭಿರುಚಿ ಆಯ್ಕೆಗೆ ಸ್ವಾತಂತ್ರ್ಯ ನೀಡಿದೆ! ಪ್ರತಿಯೊಬ್ಬ ಕನ್ನಡಿಗ ಸ್ವಾಭಿಮಾನಿಯಾದರೆ ಮಾತ್ರ ಕನ್ನಡತನ ಉಳಿವು! ಇಲ್ಲದಿದ್ದರೆ ಬೇಕು ಬೇಡ ನನ್ನ ದುಡ್ಡು ನನ್ನ ಆಯ್ಕೆಯ ಚರ್ಚೆಯೇ ನಿತ್ಯ ನಿರಂತರ! ನನಗೆ ಸಾಧ್ಯವಾದಷ್ಟು ನನ್ನ ಕನ್ನಡಕ್ಕೆ ನನ್ನ ಸೇವೆ ಸೀಮಿತ.!'' ಎಂದು ಜಗ್ಗೇಶ್ ತಮ್ಮ ಅಸಹಾಯಕತೆಯನ್ನ ಹೇಳಿಕೊಂಡಿದ್ದಾರೆ.

ಇದು ನಮ್ಮ ಪರಿಸ್ಥಿತಿ
ಮಹರ್ಷಿ ಚಿತ್ರಕ್ಕೆ 496 ಶೋಗಳು. ಕನ್ನಡದ ಬೆಲ್ ಬಾಟಮ್, ಪ್ರೀಮಿಯರ್ ಪದ್ಮಿನಿ ಚಿತ್ರಗಳು ಥಿಯೇಟರ್ ನಿಂದ ಹೊರಕ್ಕೆ ಎಂದು ಪತ್ರಿಕೆಗಳಲ್ಲಿ ಸುದ್ದಿ ವರದಿಯಾಗಿದೆ. ಈ ವರದಿ ನೋಡಿ ನಿರ್ದೇಶಕ ಹಾಗೂ ನಟ ರಿಷಬ್ ಶೆಟ್ಟಿ ಟ್ವಿಟ್ಟರ್ ನಲ್ಲಿಬೇಸರ ವ್ಯಕ್ತಪಡಿಸಿದ್ದಾರೆ. 'ಇದು ನಮ್ಮ ಪರಿಸ್ಥಿತಿ' ಎಂದು ಮೌನಕ್ಕೆ ಶರಣಾಗಿದ್ದಾರೆ.

ಪ್ರೇಕ್ಷಕರಿಂದಲೇ ಇದಕ್ಕೆ ಪರಿಹಾರ
ಚಲನಚಿತ್ರ ವಾಣಿಜ್ಯ ಮಂಡಳಿ ಈ ವಿಷ್ಯದಲ್ಲಿ ಯಾವ ಕ್ರಮವೂ ಜರುಗಿಸದ ಸ್ಥಿತಿಯಲ್ಲಿದೆ. ಚಿತ್ರರಂಗದವರೆಲ್ಲಾ ಒಗ್ಗಟ್ಟಾಗಿ ನಿಂತು ಈ ಬಗ್ಗೆ ಕಟ್ಟುನಿಟ್ಟಾದ ಯೋಜನೆ ರೂಪಿಸಿಬಹುದು. ಆದ್ರೆ, ಇದು ಎಲ್ಲರಿಗೂ ಬೇಕಾಗಿಲ್ಲ. ಯಾಕಂದ್ರೆ, ಪರಭಾಷೆ ಚಿತ್ರಗಳನ್ನ ಕರ್ನಾಟಕದಲ್ಲಿ ವಿತರಣೆ ಮಾಡೋದೇ ಇಲ್ಲಿನವರು. ಹಾಗಾಗಿ, ಇದು ಬಗೆಹರಿಯದ ಸಮಸ್ಯೆ. ಅಲ್ಲಿಗೆ ಪ್ರೇಕ್ಷಕರೇ ಬೇರೆ ಭಾಷೆಯ ಚಿತ್ರಗಳನ್ನ ನೋಡುವುದು ನಿಲ್ಲಿಸಬೇಕು. ಬಹುಶಃ ಅದು ಸಾಧ್ಯವಿಲ್ಲ. ನನ್ನ ದುಡ್ಡು ನನ್ನ ಆಯ್ಕೆಯೂ ಆಗಿರುತ್ತೆ.