'ಫಾದರ್ಸ್ ಡೇ' ಅಂದ್ರೆ ಏನು?.. ಅಪ್ಪನ ಮಹತ್ವದ ಬಗ್ಗೆ ಜಗ್ಗೇಶ್ ಹೇಳಿದ್ದು ಹೀಗೆ..
'ಮದರ್ಸ್ ಡೇ' ಆಚರಣೆಯ ದಿನ ಅಮ್ಮನಿಗೆ ಶುಭಾಶಯ ಹೇಳಿ ಮರೆಯಲಾಗದ ಉಡುಗೊರೆ ಕೊಟ್ಟು, ಆಕೆಗೆ ಅಂದಿನ ದಿನ ಮಕ್ಕಳು ಸಹಾಯ ಮಾಡುತ್ತ ಎಲ್ಲಾ ರೀತಿಯಲ್ಲೂ ಸಂತೋಷ ನೀಡುವುದು ಅಂದಿನ ದಿನದ ಸ್ಪೆಷಲ್. ಅದೇ ರೀತಿ ಇಂದು 'ಫಾದರ್ ಡೇ' ಆಚರಣೆ ಮಾಡುವ ದಿನ.
ಇಂದು 'ಫಾದರ್ಸ್ ಡೇ' ಅಂತ ಅವರ ತಂದೆಗೆ ಯಾರು, ಹೇಗೆ ವಿಶ್ ಮಾಡುತ್ತಾರೋ, ಗಿಫ್ಟ್ ಮಾಡುತ್ತಾರೋ ಗೊತ್ತಿಲ್ಲ. ಆದರೆ ಸ್ಯಾಂಡಲ್ ವುಡ್ ನ ತಾರೆಯರು ತಮ್ಮ ತಂದೆಗೆ ವಿಶ್ ಮಾಡುವುದರ ಜೊತೆಗೆ ವಿಶೇಷವಾಗಿ 'ಫಾದರ್ಸ್ ಡೇ' ಸ್ಮರಿಸುತ್ತಾರೆ. ಇನ್ನೂ ಹಲವರು 'ಫಾದರ್ಸ್ ಡೇ' ಮಹತ್ವ ಕುರಿತು ಅರಿವು ಮೂಡಿಸುತ್ತಾರೆ. ನಿಜವಾಗಲು ಅಪ್ಪನ ಬೆಲೆ ಏನು ಎಂಬುದನ್ನು ಅರ್ಥ ಮಾಡಿಸುತ್ತಾರೆ. ಇಂದು ಇದೇ ಉತ್ತಮ ಕೆಲಸವನ್ನು ನವರಸ ನಾಯಕ ನಟ ಜಗ್ಗೇಶ್ ರವರು ಮಾಡಿದ್ದಾರೆ.
'ಫಾದರ್ಸ್ ಡೇ' ಕುರಿತು ಮತ್ತು ಅಪ್ಪನ ಮಹತ್ವದ ಬಗ್ಗೆ ಜಗ್ಗೇಶ್ ರವರು ಟ್ವೀಟ್ ಮಾಡಿದ್ದು, ಅವರು ಏನು ಹೇಳಿದ್ದಾರೆ ಎಂಬುದನ್ನು ಮಿಸ್ ಮಾಡದೇ ಓದಿರಿ...

ನಿಜವಾದ 'ಫಾದರ್ಸ್ ಡೇ' ಅಂದ್ರೆ ಏನು?
ಇಂದು ವಿಶ್ವದಾದ್ಯಂತ ಆಚರಿಸುತ್ತಿರುವ 'ಫಾದರ್ಸ್ ಡೇ' ಕುರಿತು ನಟ ಜಗ್ಗೇಶ್ ಟ್ವೀಟ್ ಮಾಡಿ ತಮ್ಮ ಪ್ರಕಾರ ಫಾದರ್ಸ್ ಡೇ ಅಂದ್ರೆ ಏನು ಎಂಬುದನ್ನು ತಿಳಿಸಿದ್ದಾರೆ. ಅವರ ಪ್ರಕಾರ 'ತಂದೆಗೆ, ಅವರ ಮಾತಿಗೆ ಮಾರ್ಯಾದೆ ಕೊಟ್ಟು ಅವರ ಮಾರ್ಯಾದೆ ಉಳಿಸಿದರೆ' ಅದೇ ನಿಜವಾದ ಫಾದರ್ ಡೇ ಎಂದು ಹೇಳಿದ್ದಾರೆ.

ಅಪ್ಪನ ಮಹತ್ವದ ಬಗ್ಗೆ ಜಗ್ಗೇಶ್ ಹೇಳಿದ್ದೇನು?
ಜಗತ್ತಿನ ಶೇಕಡ 90 ರಷ್ಟು ಜನರಿಗೆ ಅಪ್ಪನ ಬೆಲೆ ಅರಿವಾಗುವುದು ಯಾವಾಗ ಎಂಬುದರ ಕುರಿತು ತಿಳಿಯಲು ಜಗ್ಗೇಶ್ ರವರ ಈ ಮೇಲಿನ ಟ್ವೀಟ್ ಓದಿರಿ.

ಹಾಸ್ಯಮಯವಾದ ಟ್ವೀಟ್
ಅಪ್ಪನ ಮಹತ್ವದ ಬಗ್ಗೆ ಹೇಳಿರುವ ಜಗ್ಗೇಶ್ ಹಾಸ್ಯವಾಗಿಯೂ ಅಪ್ಪನ ಕುರಿತು ಒಂದು ಟ್ವೀಟ್ ಮಾಡಿದ್ದಾರೆ. ಅದನ್ನು ಈ ಮೇಲಿನ ಫೋಟೋದಲ್ಲಿ ಓದಿರಿ.

'ಫಾದರ್ಸ್ ಡೇ'ಗೆ ಪರಿಮಳ ಜಗ್ಗೇಶ್ ಟ್ವೀಟ್
'ಫಾದರ್ಸ್ ಡೇ' ಹಿನ್ನೆಲೆಯಲ್ಲಿ ಜಗ್ಗೇಶ್ ಪತ್ನಿ ಪರಿಮಳ ಜಗ್ಗೇಶ್ ರವರು, 'ತಂದೆಯೊಬ್ಬ ತನ್ನ ಮಗುವನ್ನು ತಮ್ಮ ಪರಿಶ್ರಮದ ಕೆಲಸದ ವೇಳೆಯಲ್ಲಿಯೂ ಪ್ರತಿದಿನ ಹೃದಯ ಮತ್ತು ಆತ್ಮದಲ್ಲಿ ಒಯ್ಯುತ್ತಾನೆ. ಅಂತಹವರು ಸ್ವಯಂ ತ್ಯಾಗಿಗಳು. ಹ್ಯಾಪಿ ಫಾದರ್ಸ್ ಡೇ" ಎಂದು ಪರಿಮಳ ಜಗ್ಗೇಶ್ ರವರು ಪತಿ ಜಗ್ಗೇಶ್ ಮತ್ತು ಮಗ ಜೊತೆಯಲ್ಲಿರುವ ಫೋಟೋ ಸಹಿತ ಟ್ವೀಟ್ ಮಾಡಿದ್ದಾರೆ.


Click it and Unblock the Notifications