»   » ಧ್ರುವ್ ಶರ್ಮ ಸಾವಿನ ಸುದ್ದಿ ಕೇಳಿ ನಟ ಜಗ್ಗೇಶ್ ಹೃದಯ ಛಿದ್ರ

ಧ್ರುವ್ ಶರ್ಮ ಸಾವಿನ ಸುದ್ದಿ ಕೇಳಿ ನಟ ಜಗ್ಗೇಶ್ ಹೃದಯ ಛಿದ್ರ

Posted By:
Subscribe to Filmibeat Kannada

ತಾನೊಬ್ಬ ಕಿವುಡ, ಮೂಗ ಎಂದು ಕುಗ್ಗದೆ, ಅಂಗವೈಕಲ್ಯತೆಯನ್ನು ಮೆಟ್ಟಿನಿಂತು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿ, ಕ್ರಿಕೆಟ್ ಲೋಕದಲ್ಲೂ ಸಾಧನೆ ಮಾಡಿದ್ದ ಧ್ರುವ್ ಶರ್ಮ ಇಂದು ಇಹಲೋಕ ತ್ಯಜಿಸಿದ್ದಾರೆ.

ಧ್ರುವ್ ಶರ್ಮ ರವರದ್ದು ಸಾಯುವ ವಯಸ್ಸಲ್ಲ. ಅವರಿಗಿನ್ನೂ 35 ವರ್ಷವಷ್ಟೇ. ಬಾಳಿ ಬದುಕಬೇಕಾಗಿದ್ದ ಧ್ರುವ್ ಶರ್ಮ ಇಂದು ಹಠಾತ್ತಾಗಿ ಕೊನೆಯುಸಿರೆಳೆದಿದ್ದಾರೆ.

'ಸ್ನೇಹಾಂಜಲಿ' ನಟ ಧ್ರುವ್ ಶರ್ಮ ನಿಧನ

Jaggesh tweets about Dhruv Sharma

ಧ್ರುವ್ ಶರ್ಮ ಸಾವಿನ ಸುತ್ತ ಆತ್ಮಹತ್ಯೆ ವದಂತಿ ಕೇಳಿ ಬಂದಿದ್ದರೂ, ಅವರ ಸಾವಿನ ಸುದ್ದಿ ಇಡೀ ಕನ್ನಡ ಚಿತ್ರರಂಗಕ್ಕೆ ಸಿಡಿಲು ಬಡಿದಂತಾಗಿದೆ.

ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ್ರಾ ನಟ ಧ್ರುವ ಶರ್ಮಾ.!

ಧ್ರುವ್ ಶರ್ಮ ರವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ನವರಸ ನಾಯಕ ಜಗ್ಗೇಶ್ ಹೃದಯ ಛಿದ್ರಗೊಂಡಿದೆ. ಧ್ರವ್ ರವರನ್ನ ಕಳೆದುಕೊಂಡ ನೋವಿನಲ್ಲಿ ನಟ ಜಗ್ಗೇಶ್ ಟ್ವೀಟ್ ಮಾಡಿರುವುದು ಹೀಗೆ....

Sudeep Express His Condolences Over Dhruv Sharma's Demise, on Twitter | Filmibeat Kannada

''ನನ್ನ ಸ್ನೇಹಿತ ಡಾ.ಶರ್ಮ ರವರ ಮಗ. ಮಗುವಿನಿಂದ ಈಕಂದನ ಬಲ್ಲೆ. ಹೃದಯ ಛಿದ್ರವಾಯಿತು. ಈ ಆಘಾತ ಕೇಳಿ. ಅವನ ಆತ್ಮಕ್ಕೆ ಶಾಂತಿ ಸಿಗಲಿ'' ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.

English summary
Kannada Actor Jaggesh has taken his twitter account to speak about Kannada Actor Dhruv Sharma (35), who passed away today in Bengaluru.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada