twitter
    For Quick Alerts
    ALLOW NOTIFICATIONS  
    For Daily Alerts

    ಕನ್ನಡ ಹೋರಾಟಗಾರರ ಬಂಧನ : ಘಟನೆಯ ಬಗ್ಗೆ ಜಗ್ಗೇಶ್ ಪ್ರತಿಕ್ರಿಯೆ

    |

    ಬೆಂಗಳೂರಿನ ಜೈನ ದೇವಸ್ಥಾನದಲ್ಲಿ ಹಾಕಿದ್ದ ಹಿಂದಿ ಭಾಷೆಯ ಬ್ಯಾನರ್ ಅನ್ನು ಹರಿದು ಹಾಕಿರುವ ಕಾರಣಕ್ಕೆ ಕನ್ನಡ ಹೋರಾಟಗಾರರನ್ನು ಬಂಧನ ಮಾಡಲಾಗಿದೆ. ಇತ್ತ ಕೂಡಲೇ ಇವರನ್ನು ಬಿಡುಗಡೆ ಮಾಡಬೇಕು ಎನ್ನುವ ಕೂಗು ಹೆಚ್ಚಾಗುತ್ತಿದೆ.

    ಈ ಘಟನೆಯ ಬಗ್ಗೆ ಟ್ವೀಟ್ ಮಾಡಿದ್ದ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಹೋರಾಟ ಮಾಡಿದವರನ್ನು ರೌಡಿಗಳು ಎಂದು ಕರೆದಿದ್ದರು. ಈ ಕಾರಣ ತೇಜಸ್ವಿ ಸೂರ್ಯ ಟ್ವೀಟ್ ದೊಡ್ಡ ಮಟ್ಟದ ಆಕ್ರೋಶಕ್ಕೆ ಕಾರಣ ಆಗಿದೆ.

    ಕನ್ನಡ ಅಭಿಮಾನಿಗಳಲ್ಲಿ ಕಿಡಿ ಹಚ್ಚಿಸಿದ ತೇಜಸ್ವಿ ಸೂರ್ಯ ಟ್ವೀಟ್

    ಅಂದಹಾಗೆ, ತೇಜಸ್ವಿ ಸೂರ್ಯ ಬಳಿಕ ಈಗ ನಟ ಹಾಗೂ ಬಿಜೆಪಿ ಪಕ್ಷದ ಮತ್ತೊಬ್ಬ ನಾಯಕ ನಾಯಕ ಜಗ್ಗೇಶ್ ಈ ಸಂಬಂಧ ಟ್ವೀಟ್ ಮಾಡಿದ್ದಾರೆ. ಕರ್ನಾಟಕದಲ್ಲಿ ಕನ್ನಡವೇ ಧರ್ಮ ಎಂದು ಕನ್ನಡ ಧ್ವಜ ಹಾರಿಸಿದ್ದಾರೆ.

    ಕರ್ನಾಟಕದಲ್ಲಿ ಕನ್ನಡವೇ ಧರ್ಮ

    ಕರ್ನಾಟಕದಲ್ಲಿ ಕನ್ನಡವೇ ಧರ್ಮ

    ''ಕರ್ನಾಟಕದಲ್ಲಿ ಕನ್ನಡವೇ ಧರ್ಮ! ಅಂದಮೇಲೆ ಯಾರೆ ಆದರು ಇಲ್ಲಿ ಬಂದಮೇಲೆ ಕನ್ನಡ ಧರ್ಮ ಗೌರವಿಸಿ! ಕನ್ನಡ ನೆಲಕ್ಕೆ ಬಂದ ಎಲ್ಲಾ ಜಾತಿ ಧರ್ಮ ನನ್ನವರು ಎಂದು ಅಪ್ಪುತ್ತದೆ ಕನ್ನಡನಾಡು! ಅಂದ ಮೇಲೆ ಅನ್ಯರು ಯಾರೆ ಬಂದರು ಕನ್ನಡವನ್ನ ಅಪ್ಪಬೇಕು ಅದೆ ನಿಜ ಧರ್ಮ! ಅನ್ನ ನೀರು ನೀಡುವ ನೆಲ ತಾಯಿಮಡಿಲಂತೆ! ಇಲ್ಲಿಇ ರಲು ಬಂದವರು ಇಲ್ಲಿಯವರಾಗಿ! ಸಿರಿಗನ್ನಡಂಗೆಲ್ಗೆ'' ಎಂದು ಜಗ್ಗೇಶ್ ತಮ್ಮ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

    ಮೋಹಕ ತಾರೆ ರಮ್ಯಾ ಮದುವೆ ಸುದ್ದಿ ಕೇಳಿ ನಟ ಜಗ್ಗೇಶ್ ಹೇಳಿದ್ದೇನು? ಮೋಹಕ ತಾರೆ ರಮ್ಯಾ ಮದುವೆ ಸುದ್ದಿ ಕೇಳಿ ನಟ ಜಗ್ಗೇಶ್ ಹೇಳಿದ್ದೇನು?

    ಕನ್ನಡ ಧ್ವಜ ಹಾರಿಸಿದ ಜಗ್ಗೇಶ್

    ಕನ್ನಡ ಧ್ವಜ ಹಾರಿಸಿದ ಜಗ್ಗೇಶ್

    ಜಗ್ಗೇಶ್ ತಾವು ಮಾಡಿರುವ ಟ್ವೀಟ್ ಕನ್ನಡ ಹೋರಾಟಗಾರರ ಬಗ್ಗೆ ಯಾಗಲಿ ಅಥವಾ ತೇಜಸ್ವಿ ಸೂರ್ಯ ಬಗ್ಗೆಯಾಗಲಿ ಎಂದು ಪ್ರಸ್ತಾಪ ಮಾಡಿಲ್ಲ. ಆದರೆ, ಈ ಘಟನೆಯ ಹಿನ್ನಲೆಯಲ್ಲಿಯೇ ಟ್ವೀಟ್ ಮಾಡಿರುವುದು ತಿಳಿಯುತ್ತಿದೆ. ಕರ್ನಾಟಕಕ್ಕೆ ಬಂದ ಮೇಲೆ, ಇಲ್ಲಿನ ಅನ್ನ ತಿಂದ ಮೇಲೆ ಎಲ್ಲರೂ ಕನ್ನಡವನ್ನು ಗೌರವಿಸಬೇಕು ಎನ್ನುವುದು ಜಗ್ಗೇಶ್ ಮಾತಾಗಿದೆ.

    ವಿವಾದ ಮಾಡಿಕೊಂಡ ತೇಜಸ್ಟಿ ಸೂರ್ಯ

    ವಿವಾದ ಮಾಡಿಕೊಂಡ ತೇಜಸ್ಟಿ ಸೂರ್ಯ

    ಮತ್ತೊಂದು ಕಡೆ ಈ ಬಗ್ಗೆ ಟ್ವೀಟ್ ಮಾಡಿ, ಬೆಂಗಳೂರು ಸಂಸದ ತೇಜಸ್ವಿ ಸೂರ್ಯ ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ. ಈ ಬ್ಯಾನರ್ ಹಾರಿದು ಹಾಕಿದವರು ರೌಡಿಗಳು ಎಂದೂ ಆರೋಪ ಮಾಡಿದ್ದಾರೆ. ಬೆಂಗಳೂರಿನಲ್ಲಿ ಉರ್ದು ಭಾಷೆಯಲ್ಲಿ ಬಳಕೆ ಬಗ್ಗೆ ಯಾರೂ ಏನು ಹೇಳುವುದಿಲ್ಲ ಆದರೆ, ಹಿಂದಿ ಮೇಲೆ ಮಾತ್ರ ದಾಳಿ ನಡೆಸುತ್ತಿದ್ದಾರೆ ಎಂಬ ಅರ್ಥದಲ್ಲಿ ಅವರು ಟ್ವೀಟ್ ಮಾಡಿದ್ದಾರೆ.

    ಸೋಷಿಯಲ್ ಮೀಡಿಯಾದಲ್ಲಿ ಸಂಚಲನ

    ಸೋಷಿಯಲ್ ಮೀಡಿಯಾದಲ್ಲಿ ಸಂಚಲನ

    ಕನ್ನಡ ಹೋರಾಟಗಾರರ ಬಂಧನದ ಘಟನೆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಸಂಚಲನವನ್ನು ಸೃಷ್ಟಿಯಾಗಿದೆ. #ReleaseKannadaActivists ಹ್ಯಾಶ್ ಟ್ಯಾಗ್ ಮೂಲಕ ಬಂಧನ ಮಾಡಿರುವ ಕನ್ನಡ ಹೋರಾಟಗಾರನ್ನು ಬಿಡುಗಡೆ ಮಾಡಲು ಒತ್ತಡ ತರುತ್ತಿದ್ದಾರೆ. ಅಲ್ಲದೆ ಹೋರಾಟ ಮಾಡಿದವರನ್ನು ರೌಡಿಗಳು ಎಂದ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಕಿಡಿಕಾರಿದ್ದಾರೆ.

    English summary
    Kannada actor and BJP leader Jaggesh tweets about kannada activists hindi banner issue.
    Monday, August 19, 2019, 13:50
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X