ರಕ್ಷಿತ್ ಗೆ ಪ್ರಾಪಂಚಿಕ ತಂತ್ರದ ಪಾಠ ಮಾಡಿದ ಜಗ್ಗೇಶ್
Recommended Video

ನಟ ಜಗ್ಗೇಶ್ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಅನುಭವ ಇರುವ ಕಲಾವಿದ. ಈ ಕಾರಣದಿಂದ ಅವರು ಆಗಾಗ ಯುವ ನಟರಿಗೆ ಬುದ್ಧಿ ಹೇಳುತ್ತಿರುತ್ತಾರೆ. ಈಗ ನಟ ರಕ್ಷಿತ್ ಶೆಟ್ಟಿಗೆ ಜಗಣ್ಣ ತಿಳಿ ಹೇಳಿದ್ದಾರೆ.
ನಟ ರಕ್ಷಿತ್ ಬಗ್ಗೆ ಟ್ವೀಟ್ ಮಾಡಿರುವ ಜಗ್ಗೇಶ್ ''ನಾನು ಕಂಡ ಅದ್ಭುತ ಸಜ್ಜನಿಕೆಯ ಕಲಾ ಬಂಧು. ಸದಾ ಸಿನಿಮಾಗಾಗಿ ತುಡಿಯುವ ಕಲಾತಪಸ್ವಿ.ಇವನಿಗೆ ದೇವರ ದಯೆಯಿಂದ ಇನ್ನು ಎತ್ತರದ ದಿನಗಳು ಕಾದಿದೆ ಎಂದು ನನ್ನ ಮನ ಹೇಳಿತು. ನಮ್ಮ ಯಶಸ್ಸು ಕಬಳಿಸಿ ಮೇಲೆರಲು ಅನೇಕರು ಮುಖವಾಡ ಹಾಕಿ ಬರುತ್ತಾರೆ.ಇದು ಪ್ರಾಪಂಚಿಕ ವಾಮ ಮಾರ್ಗ ತಂತ್ರ! ಇಂಥವರ ನಗುತ್ತ ಪಕ್ಕ ತಳ್ಳುವ ಕಲೆ ಕರಗತವಾಗಲಿ ಮುಂದೆ!'' ಎಂದು ಬರೆದುಕೊಂಡಿದ್ದಾರೆ.

ಚಿತ್ರರಂಗದಲ್ಲಿ ಯಾವ ರೀತಿ ಇರಬೇಕು ಎಂದು ಹೇಳಿರುವ ಜಗ್ಗೇಶ್ ಅದರೊಂದಿಗೆ ರಕ್ಷಿತ್ ಶೆಟ್ಟಿ ಬೆಳೆವಣೆಗೆಯನ್ನು ಮೆಚ್ಚಿಕೊಂಡಿದ್ದಾರೆ. ಅವರ ಇನ್ನೂ ಎತ್ತರದ ದಿನಗಳು ಕಾದಿದೆ ಎಂದಿದ್ದಾರೆ.
ಅಂದಹಾಗೆ, ಈ ಹಿಂದೆ 'ವಾಸ್ತು ಪ್ರಕಾರ' ಸಿನಿಮಾದಲ್ಲಿ ಜಗ್ಗೇಶ್ ಹಾಗೂ ರಕ್ಷಿತ್ ಶೆಟ್ಟಿ ಒಟ್ಟಿಗೆ ನಟಿಸಿದ್ದರು. ಇದು ಯೋಗರಾಜ್ ಭಟ್ ನಿರ್ದೇಶನದ ಸಿನಿಮಾವಾಗಿತ್ತು.


Click it and Unblock the Notifications











