ಅಂಬಿಯನ್ನ ಮರೆತ ರಮ್ಯಾಗೆ ತಕ್ಕ ಉತ್ತರ ನೀಡಿದ ಜಗ್ಗೇಶ್!

Recommended Video

ನಟಿ ರಮ್ಯಾ ವಿರುದ್ಧ ಪರೋಕ್ಷವಾಗಿ ನಟ ಜಗ್ಗೇಶ್ ಟಾಂಗ್ | FILMIBEAT KANNADA

ಮಂಡ್ಯದ ಮಣ್ಣಿನ ಮಗ ಅಂಬರೀಶ್ ಅವರನ್ನ, ಕನ್ನಡಿಗರು ಕಣ್ಣೀರು ಹಾಕಿ ಕಳುಹಿಸಿ ಕೊಟ್ಟಿದ್ದಾರೆ. ಮತ್ತೆ ಇದೇ ನಾಡಿನಲ್ಲಿ ಹುಟ್ಟಿ ಬನ್ನಿ ಎಂದು ಪ್ರೀತಿಯಿಂದ ಅವರಲ್ಲಿ ಕೇಳಿಕೊಂಡಿದ್ದಾರೆ.

ಸಿನಿಮಾರಂಗದ ಗೆಳೆಯರು, ಬಂಧುಗಳು, ಕಡೆಯ ಬಾರಿ ಅಂಬಿ ಮುಖ ನೋಡಿ ಅವರಿಗೆ ನಮನ ಸಲ್ಲಿಸಿದ್ದಾರೆ. ಆದರೆ, ನಟಿ ರಮ್ಯಾ ಮಾತ್ರ ಅಂಬರೀಶ್ ಅವರ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲೇ ಇಲ್ಲ. ರಾಜಕೀಯದಲ್ಲಿ ಅ ಆ ಇ ಈ ಹೇಳಿಕೊಟ್ಟು, ಸಿನಿಮಾರಂಗದಲ್ಲಿ ಏನೇ ತೊಂದರೆ ಆದರೂ ಸಾಥ್ ನೀಡುತ್ತಿದ್ದ ಅಂಬರೀಶ್ ಅವರನ್ನು ಕೊನೆ ಗಳಿಗೆಯಲ್ಲಿ ರಮ್ಯಾ ಮರೆತಿದ್ದಾರೆ.

ಟ್ವಿಟ್ಟರ್ ನಲ್ಲಿ ಸಂತಾಪ ಸೂಚಿಸಿದ ರಮ್ಯಾ ಕೊನೆಗೂ ಅಂಬರೀಶ್ ಅವರ ಅಂತಿಮ ದರ್ಶನ ಪಡೆಯಲೇ ಇಲ್ಲ. ರಮ್ಯಾ ಅವರ ಈ ವರ್ತನೆ ಕಂಡು ಅನೇಕರು ತಮ್ಮ ಆಕ್ರೋಶ ವಕ್ತ ಪಡಿಸಿದ್ದಾರೆ. ನಟ ಜಗ್ಗೇಶ್ ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಮುಂದೆ ಓದಿ..

ರಮ್ಯಾ ಬಗ್ಗೆ ಜಗ್ಗೇಶ್ ಟ್ವೀಟ್

ರಮ್ಯಾ ಬಗ್ಗೆ ಜಗ್ಗೇಶ್ ಟ್ವೀಟ್

ಅಂಬರೀಶ್ ಅವರ ಅಂತಿಮ ದರ್ಶನ ಕಾರ್ಯಕ್ಕೆ ನಟಿ ರಮ್ಯಾ ಬರಲಿಲ್ಲ ಎಂದು ಸಾಕಷ್ಟು ಜನರು ತಮ್ಮ ಅಸಮಾಧಾನ ವ್ಯಕ್ತ ಪಡಿಸುತ್ತಿದ್ದಾರೆ. ಈ ಬಗ್ಗೆ ಜಗ್ಗೇಶ್ ಕೂಡ ಟ್ವೀಟ್ ಮಾಡಿದ್ದಾರೆ. ರಮ್ಯಾ ಹೆಸರು ಪ್ರಸ್ತಾಪ ಮಾಡದೆ ಪರೋಕ್ಷವಾಗಿ ಅವರಿಗೆ ಮಾತಿನ ಪೆಟ್ಟು ಕೊಟ್ಟಿದ್ದಾರೆ.

ಮನುರೂಪದ ರಾಕ್ಷಸ ಗುಣದವರು

''ಸಾವಿನಲ್ಲಿ ಗೌರವಿಸದವರು ಮನುರೂಪದ ರಾಕ್ಷಸ ಗುಣದವರು..! ಕ್ರೂರತ್ವದ ಮಗ್ಗಲು ಪ್ರಕಟಿಸಿದ ಮಹನೀಯರು.! ದೇವನೊಬ್ಬ ಇರುವ ಅವ ಎಲ್ಲ ನೋಡುತಿರುವ! ದೋಸೆ ಮೊಗಚಿ ತಳಸೀಯುತ್ತದೆ ತಪ್ಪದೆ ಒಂದು ದಿನ! ಯತಃಮನಃತಥಃಜೀವನ!'' ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.

ಅಭಿಮಾನಿಗಳ ಪ್ರಶ್ನೆಗೆ ಉತ್ತರ

ಅಭಿಮಾನಿಗಳ ಪ್ರಶ್ನೆಗೆ ಉತ್ತರ

ರಮ್ಯಾ ಬಗ್ಗೆ ತಾವೇ ಟ್ವೀಟ್ ಮಾಡದೆ ಇದ್ದರೂ ಜಗ್ಗೇಶ್ ತಮ್ಮ ಅಭಿಮಾನಿಗಳ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ಕೆಲ ಅಭಿಮಾನಿಗಳು ಸಾವಿನ ವಿಷಯದಲ್ಲಿ ರಮ್ಯಾ ಹೀಗೆ ಮಾಡಿದ್ದು, ಸರಿಯೇ ಎಂದು ಪ್ರಶ್ನೆ ಮಾಡಿದ್ದರು. ಇಂತಹ ಪ್ರಶ್ನೆಗಳಿಗೆ ಜಗ್ಗೇಶ್ ಪ್ರತಿಕ್ರಿಯೆ ನೀಡಿದ್ದಾರೆ.

ಟ್ವಿಟ್ಟರ್ ನಲ್ಲಿ ಸಂತಾಪ

ಅಂತಿಮ ದರ್ಶನಕ್ಕೆ ಬರದೆ ಇರುವ ರಮ್ಯಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಮಾತ್ರ ಅಂಬರೀಶ್ ಅವರ ನೆನಪು ಮಾಡಿಕೊಂಡಿದ್ದರು. ''ಅಂಬರೀಶ್ ಅಂಕಲ್ ಅವರ ಸುದ್ದಿ ಕೇಳಿ ನಾನು ತೀವ್ರ ದುಃಖಿತಳಾಗಿದ್ದೇನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಸಾವಿಗೆ ನನ್ನ ಸಂತಾಪಗಳು. ಅವರ ಪ್ರೀತಿಯನ್ನು ನಾವು ಎಂದಿಗೂ ನೆನೆಪಿನಲ್ಲಿಡುತ್ತೇವೆ.'' ಎಂದು ಟ್ವೀಟ್ ಮಾಡಿದ್ದರು.

ಹಿರಿಯಣ್ಣನಿಗೆ ಸ್ಯಾಂಡಲ್ ವುಡ್ ವಿದಾಯ

ಹಿರಿಯಣ್ಣನಿಗೆ ಸ್ಯಾಂಡಲ್ ವುಡ್ ವಿದಾಯ

ಕನ್ನಡ ಚಿತ್ರರಂಗದ ಹಿರಿಯಣ್ಣನಂತೆ ಇದ್ದ ಅಂಬರೀಶ್ ಅವರನ್ನು ಸ್ಯಾಂಡಲ್ ವುಡ್ ಬಳಗ ಭಾವಪೂರ್ಣವಾಗಿ ಕಳುಹಿಸಿಕೊಟ್ಟಿದೆ. ಯಶ್, ದರ್ಶನ್, ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ಉಪೇಂದ್ರ, ಗಣೇಶ್, ಸುದೀಪ್ ಹೀಗೆ ಎಲ್ಲ ನಟರು ಅಂತಿಮ ಕಾರ್ಯದಲ್ಲಿ ಭಾಗಿಯಾಗಿದ್ದರು.

More from Filmibeat

English summary
Kannada actor Jaggesh tweets about actress Ramya. Ramya absence during ambarishs funeral.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X