»   » 'ಮುತ್ತಣ್ಣ' ಶಿವರಾಜ್ ಕುಮಾರ್ ಬಗ್ಗೆ ಜಗ್ಗೇಶ್ ಬಾಯಿಂದ ಉದುರಿದ ಮುತ್ತುಗಳಿವು

'ಮುತ್ತಣ್ಣ' ಶಿವರಾಜ್ ಕುಮಾರ್ ಬಗ್ಗೆ ಜಗ್ಗೇಶ್ ಬಾಯಿಂದ ಉದುರಿದ ಮುತ್ತುಗಳಿವು

Posted By:
Subscribe to Filmibeat Kannada

ಕನ್ನಡ ಚಿತ್ರರಂಗದಲ್ಲಿ 'ಅಜಾತಶತ್ರು' ಎಂದೇ ಹೆಸರಾಗಿರುವ ನಟ 'ಅಣ್ಣಾವ್ರ ಮಗ' ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್. ಯಾವುದೇ ತಂಟೆ-ತಕರಾರು-ವಿವಾದಗಳಿಗೆ ಸಿಲುಕದೆ, ಕನ್ನಡ ಚಿತ್ರರಂಗಕ್ಕಾಗಿ ಸೇವೆ ಸಲ್ಲಿಸುತ್ತಿರುವ ಶಿವಣ್ಣ ರವರನ್ನ ಕಂಡರೆ ಎಲ್ಲರಿಗೂ ಅಚ್ಚುಮೆಚ್ಚು. ನವರಸ ನಾಯಕ ಜಗ್ಗೇಶ್ ರವರನ್ನೂ ಸೇರಿಸಿ.!

ಹೌದು, ಶಿವರಾಜ್ ಕುಮಾರ್ ಅಂದ್ರೆ ಜಗ್ಗೇಶ್ ರವರಿಗೂ ಇಷ್ಟ. ಅದಕ್ಕೆ ಸಾಕ್ಷಿ ಇಂದು ಶಿವಣ್ಣನ ಬಗ್ಗೆ ಜಗ್ಗೇಶ್ ಮಾಡಿರುವ ಟ್ವೀಟ್.

''ಶಿವಣ್ಣ ಮಗುವಿನಂತಹ ಮನಸ್ಸಿನವ. ತಂದೆಯಂತೆ ಕೂಡಿ ಬಾಳುವ ಗುಣ ಮೈಗೂಡಿಸಿಕೊಂಡಿದ್ದಾರೆ. ಅಭಿಮಾನದ ಪರಾಕಾಷ್ಟೆಯಲ್ಲಿ ಕೆಲವರು ವಿಂಗಡಿಸಿ ವೈರತ್ವ ತರುತ್ತಾರೆ. ಅದಾಗದಿರಲಿ'' ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದಾರೆ. ಅಷ್ಟಕ್ಕೂ, ಶಿವಣ್ಣ ಬಗ್ಗೆ ಜಗ್ಗೇಶ್ ಟ್ವೀಟ್ ಮಾಡುವುದಕ್ಕೂ ಒಂದು ಕಾರಣ ಇದೆ. ಆ ಕಾರಣ ತಿಳಿಯಲು ಫೋಟೋ ಸ್ಲೈಡ್ ಗಳಲ್ಲಿ ಓದಿರಿ....

ಏನು ಆ ಕಾರಣ.?

ಜಗ್ಗೇಶ್ ರವರು ಈ ಟ್ವೀಟ್ ಮಾಡುವುದಕ್ಕೆ ಕಾರಣ ದರ್ಶನ್ ಹಾಗೂ ಶಿವಣ್ಣ ನಡುವಿನ ವೈರತ್ವದ ಗುಸು ಗುಸು.!

'ಕುರುಕ್ಷೇತ್ರ' ಚಿತ್ರವನ್ನ ಶಿವಣ್ಣ ರಿಜೆಕ್ಟ್ ಮಾಡಲು ಅಸಲಿ ಕಾರಣ ಬಹಿರಂಗ.!

ಗಾಂಧಿನಗರದ ಗಲ್ಲಿ ಗಾಸಿಪ್

''ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಶಿವಣ್ಣ ನಡುವೆ ದ್ವೇಷ ಇದೆ. ಇದೇ ಕಾರಣಕ್ಕೆ 'ಕುರುಕ್ಷೇತ್ರ' ಸಿನಿಮಾದಲ್ಲಿ ನಟಿಸಲು ಶಿವಣ್ಣ ಒಪ್ಪಿಕೊಂಡಿಲ್ಲ'' ಎಂಬ ಗಾಸಿಪ್ ಗಾಂಧಿನಗರದ ತುಂಬೆಲ್ಲ ರೌಂಡ್ ಹೊಡೆದಿತ್ತು. ಆದರೆ ಇದೆಲ್ಲ ಶುದ್ಧ ಸುಳ್ಳು ಎಂದು ಸ್ವತಃ ಶಿವಣ್ಣ ಸ್ಪಷ್ಟ ಪಡಿಸಿದ್ದಾರೆ.

ಶಿವಣ್ಣ ಸ್ಪಷ್ಟನೆ ನೀಡಿದ್ದರು

''ನನ್ನ ಹಾಗೂ ದರ್ಶನ್ ನಡುವೆ ಯಾವುದೇ ದ್ವೇಷ ಹಾಗೂ ವೈರತ್ವ ಇಲ್ಲ. 'ಕುರುಕ್ಷೇತ್ರ' ಚಿತ್ರ ಒಪ್ಪಿಕೊಳ್ಳದೇ ಇರಲು 'ಡೇಟ್ಸ್ ಕ್ಲಾಶ್' ಕಾರಣ ಅಷ್ಟೇ'' ಎಂದು ಶಿವಣ್ಣ ಹೇಳಿಕೆ ನೀಡಿದ್ದರು.

ದರ್ಶನ್ ಹಾಗೂ ನನ್ನ ನಡುವೆ ದ್ವೇಷ, ವೈರತ್ವ ಇಲ್ಲ ಎಂದ ಶಿವಣ್ಣ

ಶಿವಣ್ಣ ಮಾತಿಗೆ ಜಗ್ಗೇಶ್ ಬೆಂಬಲ

ಅದೇ ಹೇಳಿಕೆಯನ್ನು ಉದ್ದೇಶಿಸಿ, ''ಅಭಿಮಾನದ ಪರಾಕಾಷ್ಟೆಯಲ್ಲಿ ಕೆಲವರು ವಿಂಗಡಿಸಿ ವೈರತ್ವ ತರುತ್ತಾರೆ. ಅದಾಗದಿರಲಿ'' ಎಂದು ಜಗ್ಗೇಶ್ ಟ್ವೀಟಿಸಿದ್ದಾರೆ. ಜೊತೆಗೆ ಶಿವಣ್ಣನ ಮಗುವಿನಂತಹ ಮನಸ್ಸನ್ನು ಹಾಡಿ ಹೊಗಳಿದ್ದಾರೆ.

Shivarajkumar - Darshan Cold War | Jaggesh Speaks About Shivarajkumar | Oneindia Kannada
English summary
Kannada Actor Jaggesh has taken his twitter account to speak about Kannada Actor Shiva Rajkumar.
Please Wait while comments are loading...