ಭಾಷೆಗಾಗಿ ಸ್ವಾಭಿಮಾನವಿಲ್ಲದ ಜನ್ಮ ಶವಕ್ಕೆ ಸಮಾನ: ಜಗನ್ ಸರ್ಕಾರದ ವಿರುದ್ಧ ಜಗ್ಗೇಶ್ ಬೇಸರ

Recommended Video

ಆಂಧ್ರ ಮುಖ್ಯಮಂತ್ರಿ ಜಗನ್ ಮೇಲೆ ಕೋಪಗೊಂಡ ಜಗ್ಗಣ್ಣ

ಕನ್ನಡ ನಾಡು-ನುಡಿ ವಿಚಾರದಲ್ಲಿ ಸದಾ ಮುಂದೆ ನಿಲ್ಲು ನವರಸ ನಾಯಕ ಜಗ್ಗೇಶ್, ಕನ್ನಡ ಶಾಲೆಗಳ ವಿಚಾರದಲ್ಲಿ ಆಂಧ್ರ ಪ್ರದೇಶ ಸರ್ಕಾರ ಕೈಗೊಂಡಿರುವ ನಿರ್ಧಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜಗನ್ ಮೋಹನ್ ರೆಡ್ಡಿ ನೇತೃತ್ವದ ಆಂಧ್ರ ಪ್ರದೇಶ ಸರ್ಕಾರ, ಆಂಧ್ರದಲ್ಲಿರುವ ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚಲು ತೀರ್ಮಾನಿಸಿದೆಯಂತೆ. ಈ ಕುರಿತು ಶಾಲೆಗಳಿಗೆ ಅಲ್ಲಿನ ಸರ್ಕಾರ ನೋಟೀಸ್ ಕೂಡ ನೀಡಿದೆಯಂತೆ.

ಗಡಿಭಾಗದಲ್ಲಿರುವ ಶಾಲೆಗಳು ತೆಲುಗು ಭಾಷೆ ಅಥವಾ ಇಂಗ್ಲಿಷ್ ಮಾಧ್ಯವಾಗಬೇಕೆಂದು ತಿಳಿಸಿದೆಯಂತೆ. ಆಂಧ್ರ ಸರ್ಕಾರದ ಈ ಆದೇಶ ತೆಲುಗು ರಾಜ್ಯಗಳಲ್ಲಿರುವ ಕನ್ನಡಿಗರಿಗೆ ಮತ್ತು ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಗೆ ಆಂತಕ ಸೃಷ್ಟಿಯಾಗಿದೆ.

Jaggesh Unhappy against Andhra Government

ಈ ಸುದ್ದಿ ತಿಳಿದ ಬಳಿಕ ನಟ ಜಗ್ಗೇಶ್ ತಮ್ಮ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿದ್ದು, ''ಇದು ಅನ್ಯರಾಜ್ಯದಲ್ಲಿ ಕನ್ನಡದ ಪರಿಸ್ಥಿತಿ! ನಮ್ಮ ರಾಜ್ಯದಲ್ಲಿ ವಿಶಾಲ ಹೃದಯವಂತೆ! ಎಂಥ ದೌರ್ಭಾಗ್ಯ! ಭಾಷೆಗಾಗಿ ಸ್ವಾಭಿಮಾನವಿಲ್ಲದ ಜನ್ಮ ಶವಕ್ಕೆ ಸಮಾನ! ಕನ್ನಡ ನೆಲದ ಬಂಧುಗಳೆ ನಮ್ಮ ಆಧ್ಯತೆ ಇರಲಿ ಮೊದಲು ನಮ್ಮ ಭಾಷೆಗೆ ಇನ್ನು ಮುಂದಾದರು! "ಕನ್ನಡಕ್ಕೆ ಕೈಯತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ" ಎಂದಿದ್ದಾರೆ.

ಆಂಧ್ರ ಜೊತೆ ಮಾತುಕತೆ ಮಾಡಿ, ಕನ್ನಡ ಶಾಲೆಗಳನ್ನು ಉಳಿಸಬೇಕಾದ ಒತ್ತಡ ರಾಜ್ಯ ಸರ್ಕಾರದ ಮೇಲಿದೆ. ಆದರೆ, ಜಗನ್ ಮೋಹನ್ ರೆಡ್ಡಿ ಸರ್ಕಾರದ ಈ ನಿರ್ಧಾರ ಬಗ್ಗೆ ಕರ್ನಾಟಕ ರಾಜ್ಯ ಸರ್ಕಾರ ಯಾವ ತೀರ್ಮಾನ ತೆಗೆದುಕೊಳ್ಳುತ್ತೆ ಎಂಬ ಪ್ರಶ್ನೆಯಾಗಿ ಉಳಿದಿದೆ.

More from Filmibeat

English summary
Kannada actor Jaggesh expressed displeasure against andhra government.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X