For Quick Alerts
  ALLOW NOTIFICATIONS  
  For Daily Alerts

  ಕೊರೊನಾ ಸಂಕಷ್ಟ: ಸ್ಟಾರ್ ನಟರ ಅಭಿಮಾನಿಗಳಿಂದ ಮಹತ್ವದ ಕೆಲಸ

  |

  ಕೊರೊನಾ ವೈರಸ್‌ನಿಂದ ಸಂಕಷ್ಟಕ್ಕೆ ಸಿಲುಕಿದವರ ಪಾಲಿಗೆ ಬಾಲಿವುಡ್ ನಟ ಸೋನು ಸೂದ್ ರಿಯಲ್ ಹೀರೋ ಆಗಿದ್ದಾರೆ. ಸೂಕ್ತ ಸಮಯಕ್ಕೆ ಸರ್ಕಾರಗಳು, ಅಧಿಕಾರಿಗಳು ನೆರವು ನೀಡದಿದ್ದರೂ ಸೋನು ಸೂದ್ ತಮ್ಮ ಚಾರಿಟಬಲ್ ಟ್ರಸ್ಟ್ ಮೂಲಕ ದೇಶಾದ್ಯಂತ ಸಹಾಯ ಮಾಡುತ್ತಿದ್ದಾರೆ.

  ಕೆಲವರ ಪಾಲಿಗೆ ಸುದೀಪ್ ವಿಲನ್ ಆಗಿದ್ದು ಯಾಕೆ ಗೊತ್ತಾ? | Filmibeat Kannada

  ಅಮಿತಾಭ್ ಬಚ್ಚನ್, ಅಕ್ಷಯ್ ಕುಮಾರ್, ಹುಮಾ ಖುರೇಶಿ, ಅನುಷ್ಕಾ ಶರ್ಮಾ ಹೀಗೆ ಅನೇಕ ಸೆಲೆಬ್ರಿಟಿಗಳು ದೇಣಿಗೆ ನೀಡುವುದು, ಆಕ್ಸಿಜನ್ ವ್ಯವಸ್ಥೆ ಮಾಡುವ ಕೆಲಸ ಮಾಡ್ತಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲೂ ಹಲವು ಸೆಲೆಬ್ರಿಟಿಗಳು ತಮ್ಮಿಂದ ಆಗುವ ಸಹಾಯ ಮಾಡ್ತಿದ್ದಾರೆ. ರಾಗಿಣಿ ದ್ವಿವೇದಿ, ಭುವನ್ ಪೊನ್ನಣ್ಣ, ಹರ್ಷಿಕಾ ಪೂಣಚ್ಚ, ಕಿರಣ್ ರಾಜ್, ಉಪೇಂದ್ರ, ಸುದೀಪ್ ಹೀಗೆ ಎಲ್ಲರೂ ಜನಸಾಮಾನ್ಯರ ಕಷ್ಟಕ್ಕೆ ಸ್ಪಂದಿಸುತ್ತಿದ್ದಾರೆ. ಇನ್ನು ಒಂದು ಹೆಜ್ಜೆ ಮುಂದೆ ಇಟ್ಟಿರುವ ಸ್ಟಾರ್ ಅಭಿಮಾನಿಗಳು ಕೋವಿಡ್ ವಾರಿಯರ್‌ಗಳಾಗಿ ಕೆಲಸ ಮಾಡ್ತಿದ್ದಾರೆ. ಮುಂದೆ ಓದಿ...

  ಕೊರೊನಾ ರೋಗಿಗಳಿಗೆ ಜಗ್ಗೇಶ್ ಫ್ಯಾನ್ಸ್ ನೆರವು

  ಕೊರೊನಾ ರೋಗಿಗಳಿಗೆ ಜಗ್ಗೇಶ್ ಫ್ಯಾನ್ಸ್ ನೆರವು

  ಕೊರೊನಾ ಸೋಂಕಿಗೆ ತುತ್ತಾಗಿ ಸಂಕಷ್ಟದಲ್ಲಿರುವ ರೋಗಿಗಳಿಗೆ ಸಹಾಯ ಮಾಡಲು ಜಗ್ಗೇಶ್ ಅಭಿಮಾನಿಗಳು ಉಚಿತ ಆಂಬುಲೆನ್ಸ್ ಸೇವೆ ಆರಂಭಿಸಿದ್ದಾರೆ. ಕೊರಟಗೆರೆ ಜಗ್ಗೇಶ್ ಅಭಿಮಾನಿಗಳು ಮಿನಿ ಆಂಬುಲೆನ್ಸ್ ಮೂಲಕ ರೋಗಿಗಳಿಗೆ ಆಸ್ಪತ್ರೆಗೆ ಹೋಗಲು ಸಹಾಯ ಮಾಡುತ್ತಿದ್ದಾರೆ. ಅಭಿಮಾನಿಗಳ ಈ ಕೆಲಸದ ಬಗ್ಗೆ ಜಗ್ಗೇಶ್ ಅವರು ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  ನನ್ನ ಹಳ್ಳಿಯಲ್ಲೂ ಸಾಲು ಸಾಲು ಹೆಣಗಳು ಬೀಳುತ್ತಿವೆ; ನಾಗತಿಹಳ್ಳಿ ಚಂದ್ರಶೇಖರ್ನನ್ನ ಹಳ್ಳಿಯಲ್ಲೂ ಸಾಲು ಸಾಲು ಹೆಣಗಳು ಬೀಳುತ್ತಿವೆ; ನಾಗತಿಹಳ್ಳಿ ಚಂದ್ರಶೇಖರ್

  ದಿನಸಿ ಕಿಟ್ ವಿತರಿಸಿದ ಉಪೇಂದ್ರ ಫ್ಯಾನ್ಸ್

  ದಿನಸಿ ಕಿಟ್ ವಿತರಿಸಿದ ಉಪೇಂದ್ರ ಫ್ಯಾನ್ಸ್

  ರಿಯಲ್ ಸ್ಟಾರ್ ಉಪೇಂದ್ರ ಅವರು ತಮ್ಮ ಉಪ್ಪಿ ಫೌಂಡೇಶನ್ ಮೂಲಕ ದೇಣಿಗೆ ಸಂಗ್ರಹ ಮಾಡಿ ಚಿತ್ರರಂಗದ ಕಾರ್ಮಿಕರಿಗೆ ಹಾಗೂ ಇತರರಿಗೆ ನೆರವು ನೀಡುತ್ತಿದ್ದಾರೆ. ಮತ್ತೊಂದೆಡೆ ಉಪ್ಪಿ ಅಭಿಮಾನಿಗಳು ಸಹ ಸಹಾಯಕ್ಕೆ ನಿಂತಿದ್ದಾರೆ. ದೊಡ್ಡಬಳ್ಳಾಪುರದ ಅಭಿಮಾನಿಗಳು 100 ಬಡ ಕುಟುಂಬಗಳಿಗೆ ರೇಷನ್ ಕಿಟ್ ವಿತರಿಸುತ್ತಿದ್ದಾರೆ. ಪ್ರಜಾಕೀಯದ ಫಾಲೋವರ್ಸ್ ಉಪ್ಪಿ ಫೌಂಡೇಶನ್‌ಗೆ ದೇಣಿಗೆ ನೀಡುತ್ತಿದ್ದಾರೆ.

  ಕಿಚ್ಚನ ಕೈ ತುತ್ತು ಆರಂಭಿಸಿದ ಸುದೀಪ್ ಫ್ಯಾನ್ಸ್

  ಕಿಚ್ಚನ ಕೈ ತುತ್ತು ಆರಂಭಿಸಿದ ಸುದೀಪ್ ಫ್ಯಾನ್ಸ್

  ಕೊರೊನಾ ವಾರಿಯರ್ಸ್ ಮತ್ತು ಹಸಿದವರಿಗೆ ಸುದೀಪ್ ಚಾರಿಟಬಲ್ ಸೊಸೈಟಿ ಕಡೆಯಿಂದ ಊಟದ ವ್ಯವಸ್ಥೆ ಮಾಡಲಾಗಿದೆ. ಪೊಲೀಸ್, ವೈದ್ಯರು, ನರ್ಸ್ ಹಾಗೂ ಇತರೆ ಸಿಬ್ಬಂದಿಗಳಿಗೆ ಊಟ ತಂದು ಕೊಡಲಾಗುತ್ತಿದೆ. ಕೊರೊನಾ ವಾರಿಯರ್ಸ್ ಪೊಲೀಸ್ ಮತ್ತು ಹಸಿದವರಿಗೆ ಊಟ ಹಂಚಿಕೆ ಮಾಡಿರುವ ಫೋಟೋ-ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಕಾಣಬಹುದು.

  ಜನರಿಗೆ, ಕೊರೊನಾ ವಾರಿಯರ್ಸ್‌ಗೆ ರಾಗಿಣಿ ಸಹಾಯ

  ಜನರಿಗೆ, ಕೊರೊನಾ ವಾರಿಯರ್ಸ್‌ಗೆ ರಾಗಿಣಿ ಸಹಾಯ

  ನಟಿ ರಾಗಿಣಿ ದ್ವಿವೇದಿ ಕೊರೊನಾ ವಾರಿಯರ್ಸ್‌ಗೆ ಹಸಿದ ಜನರಿಗೆ ದಿನನಿತ್ಯ ಊಟದ ವ್ಯವಸ್ಥೆ ಮಾಡುತ್ತಿದ್ದಾರೆ. ಊಟದ ಪೊಟ್ಟಣಗಳನ್ನು ಹಂಚುತ್ತಿದ್ದಾರೆ. ಪೊಲೀಸರಿಗೆ, ಸಾರ್ವಜನಿಕರಿಗೆ ಹೀಗೆ ಬೆಂಗಳೂರಿನ ಹಲವು ಕಡೆ ರಾಗಿಣಿ ಜನಸಾಮಾನ್ಯರಿಗೆ ಸಹಾಯ ಮಾಡ್ತಿದ್ದಾರೆ.

  English summary
  jaggesh, Upendra and Sudeep Fans helps people who are in distress due to Covid-19.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X