For Quick Alerts
  ALLOW NOTIFICATIONS  
  For Daily Alerts

  ''ಟ್ವಿಟ್ಟರ್ ಡಿಪಿ ಬದಲಿಸಿ'' ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್ ವಿಶೇಷ ಮನವಿ

  |

  ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಅಂಗವಾಗಿ ಪ್ರತಿ ಮನೆಯಲ್ಲೂ ತ್ರಿವರ್ಣ ಧ್ವಜ ಹಾರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರೊಫೈಲ್‌ಗೆ ರಾಷ್ಟ್ರಧ್ವಜದ ಚಿತ್ರವನ್ನು ಬಳಸಲು ಹೇಳಿದ್ದಾರೆ. ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್‌ ದನಿಗೂಡಿಸಿದ್ದು ತಮ್ಮ ಟ್ವಿಟ್ಟರ್ ಖಾತೆಯ ಡಿಪಿ ಆಗಿ ರಾಷ್ಟ್ರಧ್ವಜದ ಚಿತ್ರ ಹಾಕಿದ್ದಾರೆ.

  ಇತ್ತೀಚೆಗೆ ಮನ್ ಕೀ ಬಾತ್‍ನ 91ನೇ ಸರಣಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಭಾರತ ಐತಿಹಾಸಿಕ ಮತ್ತು ಶ್ರೀಮಂತ ಪರಂಪರೆಯ ಕ್ಷಣಗಳಿಗೆ ಸಾಕ್ಷಿಯಾಗಿದೆ ಎಂದು ಹೇಳಿದರು. ಸ್ವಾತಂತ್ರ್ಯೋತ್ಸವದ 75ನೇ ವರ್ಷದ ಅಜಾದಿ ಕಾ ಅಮೃತ ಮಹೋತ್ಸವದ ಸಂದರ್ಭದಲ್ಲಿ ವಿಶೇಷ ಅಭಿಯಾನ ಕೂಡ ನಡೆಯುತ್ತಿದೆ. ಆಗಸ್ಟ್ 13ರಿಂದ 15ರವರೆಗೆ ಪ್ರತಿಯೊಬ್ಬರು ತಮ್ಮ ಮನೆಯ ಮೇಲೆ ತ್ರಿವರ್ಣ ಧ್ವಜ ಹಾರಿಸುವ ಮೂಲಕ ಹರ್ ಘರ್ ತಿರಂಗ ಅಭಿಯಾನಕ್ಕೆ ಬೆಂಬಲ ನೀಡಬೇಕೆಂದು ಮನವಿ ಮಾಡಿದ್ದರು. ಈಗಾಗಲೇ ಕೇಂದ್ರ ಸಹಕಾರಿ ಮತ್ತು ಗೃಹ ಸಚಿವ ಅಮಿತ್ ಶಾ ಸೇರಿದಂತೆ ಸಾಕಷ್ಟು ಗಣ್ಯರು ನೆಟ್ಟಿಗರು ತಮ್ಮ ಸಾಮಾಜಿಕ ಜಾಲತಾಣದ ಡಿಸ್‌ಪ್ಲೇನಲ್ಲಿ ರಾಷ್ಟ್ರಧ್ವಜದ ಚಿತ್ರ ಹಾಕಿದ್ದಾರೆ.

  ರಾಯರ ಹೆಸರಲ್ಲಿ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಜಗ್ಗೇಶ್ರಾಯರ ಹೆಸರಲ್ಲಿ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಜಗ್ಗೇಶ್

  ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್‌ ಟ್ವೀಟ್ ಮಾಡಿ " ಗುಬ್ಬಚ್ಚಿ ಗೂಡಿನ ನನ್ನ ಆತ್ಮೀಯ ಸ್ನೇಹಿತರೆ ತಮ್ಮ ಖಾತೆಯ DPಯಲ್ಲಿ ಭಾರತದ ಧ್ವಜ ಹಾಕಿ. ನಮಗೆ ಸ್ವತಂತ್ರ ಬಂದ 75ನೇ ವರ್ಷ. ಆ ಸಮಯದಲ್ಲಿ ನಾವು ಹುಟ್ಟದೇ ಇರಬಹುದು. ಆದರೆ ಸಂಭ್ರಮಿಸಲು ಇಂದು ಇದ್ದೇವೆ. ನಮ್ಮ ಭಾರತದ ಧ್ವಜ ಗೌರವಿಸಿ ಜೈ ಎನ್ನುವ. ಪ್ರಧಾನಿ ಮೋದಿಯವರ ಭಾವಕ್ಕೆ ಸ್ಪಂದಿಸುವ" ಬರೆದುಕೊಂಡಿದ್ದಾರೆ.

  ಕನ್ನಡದಲ್ಲೇ ಜಗ್ಗೇಶ್ ಪ್ರಮಾಣ ವಚನ

  ಜುಲೈ 8ರಂದು ರಾಜ್ಯಸಭಾ ಸದಸ್ಯರಾಗಿ ನಟ ಜಗ್ಗೇಶ್​ ಪ್ರಮಾಣ ವಚನ ಸ್ವೀಕರಿಸಿದ್ದರು. ನವರಸ ನಾಯಕ​ ಕನ್ನಡ ಭಾಷೆಯಲ್ಲಿ ರಾಘವೇಂದ್ರ ಸ್ವಾಮಿಗಳ ಹೆಸರಿನಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿದ್ದು ವಿಶೇಷ. ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿದ್ದ ಪೀಠದ ಸಮ್ಮುಖದಲ್ಲಿ ಜಗ್ಗೇಶ್ ಪ್ರಮಾಣ ವಚನ ಸ್ವೀಕರಿಸಿದ್ದರು.

  3 ಸಿನಿಮಾಗಳಲ್ಲಿ ಜಗ್ಗೇಶ್ ನಟನೆ

  3 ಸಿನಿಮಾಗಳಲ್ಲಿ ಜಗ್ಗೇಶ್ ನಟನೆ

  ರಾಜ್ಯಸಭಾ ಸದಸ್ಯರಾಗಿರುವ ನವರಸ ನಾಯಕ ಜಗ್ಗೇಶ್ ಸದ್ಯ 3 ಚಿತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಸಂತೋಷ್ ಆನಂದ್‌ರಾಮ್ ನಿರ್ದೇಶನದ 'ರಾಘವೇಂದ್ರ ಸ್ಟೋರ್ಸ್', ವಿಜಯ್ ಪ್ರಸಾದ್ ನಿರ್ದೇನದ 'ತೋತಾಪುರಿ' ಸಿನಿಮಾಗಳು ರಿಲೀಸ್‌ಗೆ ರೆಡಿಯಾಗಿದೆ. ಗುರುಪ್ರಸಾದ್ ನಿರ್ದೇಶನದ 'ರಂಗನಾಯಕ' ಸಿನಿಮಾ ಚಿತ್ರೀಕರಣ ನಡೀತಿದೆ.

  'ರಾಘವೇಂದ್ರ ಸ್ಟೋರ್ಸ್' ಮುಂದಕ್ಕೆ

  'ರಾಘವೇಂದ್ರ ಸ್ಟೋರ್ಸ್' ಮುಂದಕ್ಕೆ

  ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಈ ವಾರವೇ 'ರಾಘವೇಂದ್ರ ಸ್ಟೋರ್ಸ್' ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ ಕಾರಣಾಂತರಗಳಿಂದ ರಿಲೀಸ್ ಡೇಟ್ ಮುಂದೂಡಿರುವುದಾಗಿ ಕೆಲ ದಿನಗಳ ಹಿಂದೆಯೇ ಹೊಂಬಾಳೆ ಫಿಲ್ಮ್ಸ್ ಘೋಷಿಸಿದೆ. ಚಿತ್ರದಲ್ಲಿ ಅಡುಗೆ ಭಟ್ಟನ ಪಾತ್ರದಲ್ಲಿ ಹಾಸ್ಯದ ರಸಪಾಕ ಉಣಬಡಿಸಲು ಜಗ್ಗೇಶ್ ಬರ್ತಿದ್ದಾರೆ. ಈಗಾಗಲೇ ಚಿತ್ರದ ಟೀಸರ್ ರಿಲೀಸ್ ಆಗಿ ಗಮನ ಸೆಳೆದಿದೆ.

  ಯಶ್ ಟ್ವಿಟ್ಟರ್ ಡಿಪಿಯಾಗಿ ರಾಷ್ಟ್ರಧ್ವಜ

  ಇನ್ನು ಹರ್ ಘರ್ ತಿರಂಗಾ ಅಭಿಯಾನಕ್ಕೆ ಯಶ್ ಸಾಥ್ ನೀಡಿದ್ದು, ಟ್ಟಿಟರ್ ಡಿಪಿಯಾಗಿ ರಾಷ್ಟ್ರಧ್ವಜದ ಚಿತ್ರವನ್ನ ಹಾಕಿದ್ದಾರೆ. "ನಮ್ಮ ವೈವಿಧ್ಯತೆಯಲ್ಲಿ ಭರವಸೆ, ಆಕಾಂಕ್ಷೆಗಳು ಮತ್ತು ಏಕತೆಯ ಸಂಕೇತವಾದ ತಿರಂಗ ನಮ್ಮೆಲ್ಲ ಭಾರತೀಯರ ಹೆಮ್ಮೆ. ಸ್ವಾತಂತ್ರ್ಯದ 75 ವರ್ಷಗಳ ಸಂದರ್ಭದಲ್ಲಿ, ನಮ್ಮ ರಾಷ್ಟ್ರದ ಗುರುತನ್ನು, ಭಾರತೀಯ ರಾಷ್ಟ್ರಧ್ವಜವನ್ನು ನಮ್ಮ ಮನೆಗಳಿಗೆ ತರೋಣ ಮತ್ತು 13-15 ಆಗಸ್ಟ್ 2022 ರವರೆಗೆ ಅದನ್ನು ಹಾರಿಸೋಣ" ಎಂದು ಟ್ವೀಟ್ ಮಾಡಿದ್ದಾರೆ.

  Recommended Video

  ಧ್ರುವ ಸರ್ಜಾ 'ಮಾರ್ಟಿನ್' ಚಿತ್ರದ ರಿಲೀಸ್ ಮುಂದೂಡಿಕೆ ? | Dhruva Sarja | Martin | Filmibeat Kannada

  English summary
  Jaggesh urges fans to change profile picture to Tiranga in social media channels. Know More.
  Wednesday, August 3, 2022, 16:29
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X