Just In
Don't Miss!
- Finance
ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು 8.5 ರೂ. ಕಡಿತಗೊಳಿಸಬಹುದು!
- Sports
1 ಓವರ್ನಲ್ಲಿ 6 ಸಿಕ್ಸರ್: ವಿಶ್ವದಾಖಲೆ ಪಟ್ಟಿ ಸೇರಿದ ಕೀರನ್ ಪೊಲಾರ್ಡ್!
- Automobiles
ಕಿಗರ್ ಕಾರು ವಿತರಣೆ ಆರಂಭವಾದ ಮೊದಲ ದಿನವೇ 1,100 ಯುನಿಟ್ ಮಾರಾಟ
- News
ಜನರು ದಿನದ 24 ಗಂಟೆಯಲ್ಲಿ ಯಾವಾಗ ಬೇಕಾದರೂ ಕೊರೊನಾ ಲಸಿಕೆ ಪಡೆಯಬಹುದು
- Lifestyle
ದಿನ ಭವಿಷ್ಯ: ಗುರುವಾರದ ರಾಶಿಫಲ ಹೇಗಿದೆ ನೋಡಿ
- Education
Vijayapura District Court Recruitment 2021: ವಿಜಯಪುರ ಜಿಲ್ಲಾ ನ್ಯಾಯಾಲಯದಲ್ಲಿ 2 ಬೆರಳಚ್ಚು-ನಕಲುಗಾರ ಹುದ್ದೆಗಳ ನೇಮಕಾತಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಜಗ್ಗೇಶ್ ಮೇಲೆ ದರ್ಶನ್ ಅಭಿಮಾನಿಗಳ ಮುತ್ತಿಗೆ: ಜನರ ಅಭಿಪ್ರಾಯವೇನು?
ಹಿರಿಯ ನಟ ಜಗ್ಗೇಶ್ ಮೇಲೆ ದರ್ಶನ್ ಅಭಿಮಾನಿಗಳು ಮುತ್ತಿಗೆ ಹಾಕಿದ ವಿಷಯ ಬಹು ಜೋರಾಗಿ ಚರ್ಚೆಯಾಗುತ್ತಿದೆ. ಮಾಧ್ಯಮಗಳಲ್ಲಿ, ಸಾಮಾಜಿಕ ಮಾಧ್ಯಗಳಲ್ಲಿ ಅದರದ್ದೇ ಮಾತು.
'ಫಿಲ್ಮೀಬೀಟ್ ಕನ್ನಡ'ವು ಇದೇ ವಿಷಯವಾಗಿ 'ನಟ ಜಗ್ಗೇಶ್ ಮೇಲೆ ದರ್ಶನ್ ಅಭಿಮಾನಿಗಳು ಮುತ್ತಿಗೆ ಹಾಕಿದ್ದು ಸರಿಯೇ?' ಎಂಬ ಪೋಲ್ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿತ್ತು. ಈ ಪೋಲ್‌ಗೆ ಸಾವಿರಾರು ಮಂದಿ ಸ್ಪಂದಿಸಿದ್ದು, ಹಲವರು ಹಲವು ವಿಧವಾದ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
ಸಿನಿಮಾ ಪರದೆ ದಾಟಿ ಬಂತು 'ಸ್ಟಾರ್ ನಟರ ರೌಡಿಸಂ'
ಫಿಲ್ಮೀಬೀಟ್ ಕೊಟ್ಟಿದ್ದ ಪೋಲ್‌ಗೆ ಕೆಲವೇ ಗಂಟೆಗಳಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಮಂದಿ ಕಮೆಂಟ್ ಮಾಡಿ ತಮ್ಮ ಅಭಿಪ್ರಾಯ ದಾಖಲಿಸಿದ್ದಾರೆ. ಕೆಲವರು ಇಡೀಯ ಘಟನೆಯನ್ನು ವಿಶ್ಲೇಷಿಸಿ ವಸ್ತುನಿಷ್ಟ ಅಭಿಪ್ರಾಯವನ್ನು ಕಮೆಂಟ್‌ನಲ್ಲಿ ದಾಖಲಿಸಿದ್ದಾರೆ.

ದರ್ಶನ್ ಅಭಿಮಾನಿಗಳು ಮಾಡಿದ್ದು ತಪ್ಪು ಎಂದ ಹಲವರು
ಪೋಲ್‌ಗೆ ಬಂದಿರುವ ಕಮೆಂಟ್‌ಗಳಲ್ಲಿ ಸರಿ-ತಪ್ಪು ಎರಡೂ ವಿಧವಾದ ಅಭಿಪ್ರಾಯವಿದೆ. ಆದರೆ ಹೆಚ್ಚಿನ ಮಂದಿ ದರ್ಶನ್ ಅಭಿಮಾನಿಗಳು ಮಾಡಿದ್ದು ತಪ್ಪು ಎಂಬ ಅಭಿಪ್ರಾಯವನ್ನೇ ದಾಖಲಿಸಿದ್ದಾರೆ. 'ಹಿರಿಯ ನಟ ಜಗ್ಗೇಶ್ ಅನ್ನು ದರ್ಶನ್ ಅಭಿಮಾನಿಗಳು ನಡೆಸಿಕೊಂಡ ರೀತಿ ಸರಿಯಲ್ಲ' ಎಂಬುದೇ ಹಲವರ ಅಭಿಪ್ರಾಯವಾಗಿದೆ.

ದರ್ಶನ್ ಪರವಾಗಿಯೂ ಕೆಲವರು ಕಮೆಂಟ್ ಮಾಡಿದ್ದಾರೆ
ಜಗ್ಗೇಶ್ ಅವರ ವಿರುದ್ಧವಾಗಿ ಕೆಲವು ಕಮೆಂಟ್‌ಗಳು ಇದ್ದು, 'ದರ್ಶನ್ ಒಬ್ಬ ಸೆಲೆಬ್ರಿಟಿ, ಜಗ್ಗೇಶ್‌ಗೆ ಆಪ್ತರೂ ಹೌದು, ದರ್ಶನ್ ಬಗ್ಗೆ ಬಹಿರಂಗವಾಗಿ ಒಳ್ಳೆಯದು ಮಾತನಾಡಿ, ಮರೆಯಲ್ಲಿ ಏಕೆ ದರ್ಶನ್ ಅಭಿಮಾನಿಗಳನ್ನು ಹೀಗಳೆಯಬೇಕು' ಎಂದು ಕೆಲವರು ಪ್ರಶ್ನೆ ಎತ್ತಿದ್ದಾರೆ. ಹಲವಾರು ಪ್ರಶ್ನೆಗಳಿಗೆ ಒಬ್ಬರಿಗೊಬ್ಬರು ಉತ್ತರ ಕೊಟ್ಟುಕೊಳ್ಳುವ ಪ್ರಯತ್ನ ಮಾಡಲಾಗಿದೆ. ಪರಸ್ಪರ ಬೈದುಕೊಳ್ಳುವ ಕಮೆಂಟ್‌ಗಳೂ ಸಹ ಬಂದಿವೆ.
ಜಗ್ಗೇಶ್-ದರ್ಶನ್ ಅಭಿಮಾನಿಗಳ ವಿವಾದಕ್ಕೆ ಅವರೊಬ್ಬರಿಂದಲೇ ಪರಿಹಾರ ಸಾಧ್ಯ!

ಜಗ್ಗೇಶ್-ದರ್ಶನ್ ನಡುವೆ ಕುಮಾರಸ್ವಾಮಿ ಹೆಸರು
ಜಗ್ಗೇಶ್-ದರ್ಶನ್ ಚರ್ಚೆಯ ನಡುವೆ ಕೆಲವರು ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಸಹ ಎಳೆದು ತಂದಿದ್ದಾರೆ. 'ಕುಮಾರಸ್ವಾಮಿ ಅವರು ದರ್ಶನ್ ವಿರುದ್ಧ ಲಘುವಾಗಿ ಮಾತನಾಡಿದಾಗ ಏಕೆ ಯಾರೂ ಪ್ರಶ್ನಿಸಲಿಲ್ಲ. ಈಗ ಜಗ್ಗೇಶ್ ಅವರನ್ನು ಟಾರ್ಗೆಟ್ ಮಾಡುತ್ತಿರುವುದು ಏಕೆ?' ಎಂದು ಸಹ ಪ್ರಶ್ನೆಗಳನ್ನು ಮಾಡಲಾಗಿದೆ.

'ಅಭಿಮಾನಿಗಳಿಗೆ ಉಚಿತವಾಗಿ ಸಿನಿಮಾ ನೋಡಲು ಹೇಳುತ್ತಾರೆಯೇ?'
'ಅಂಧತ್ವ ಅನ್ನೋದು ಕಣ್ಣು ಕಾಣದವರಲ್ಲ, ಕಣ್ಣು ಇದ್ದು ಅಂಧರಂತೆ ನಟಿಸುವ ಹುಚ್ಚು ಅಭಿಮಾನ. ತೆರೆಯಮೇಲೆ ಬರುವವರೆಲ್ಲ ದೇವರಲ್ಲ ಪುಗ್ಸಟ್ಟೆಲ್ಲಿ ಸಿನಿಮಾ ಮಾಡಲ್ಲ, ಕಂತೆ ಕಂತೆ ಏಣಿಸುತ್ತಾರೆ ಅದು ಅವರ ವೈಯಕ್ತಿಕ. ನೀವು ನನ್ನ ಅಭಿಮಾನಿಗಳು ಪುಗ್ಸಟ್ಟೆ ಬಂದು ಸಿನಿಮಾ ನೋಡಿ ಅಂತ ಯಾವ ಕಲಾವಿದ ಸಹ ಹೇಳೊಲ್ಲ. ಕಲಾವಿದರು ದುಡಿಯುವುದು ಹಣಕ್ಕಾಗಿ, ನಾವು ನಮ್ಮ ಸ್ನೇಹಿತರು ದುಡಿಯುವುದು ಹಣಕ್ಕಾಗಿ. ಪುಗ್ಸಟ್ಟೆ ಮನರಂಜನೆ ಯಾರು ನೀಡುವುದಿಲ್ಲ, ಇವೆಲ್ಲ ಅರಿತರು, ಬುದ್ದಿವಂತರಾಗಿ ಅಂಧರಂತೆ. ಕಲಾವಿದರ ವ್ಯಯಕ್ತಿಕ ಜೀವನದಲ್ಲಿ ನಡೆಯುವ ಘಟನೆಗಳಿಗೆ ಅಭಿಮಾನಿಗಳು ಎಂದು ನಾಮಫಲಕ ಹಿಡಿದು ಮಾಡುವ ಕೆಲಸ ಖಂಡನೀಯ. ಅಭಿಮಾನ ನಿಮ್ಮ ತಂದೆ - ತಾಯಿ, ನಿಮಗೆ ಒಳಿತು ಮಾಡುವವರ ಮೇಲೆ ತೋರಿಸಿ, ನೊಂದವರಿಗೆ ಸಹಾಯ ಮಾಡಿ' ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ನಾಗರಾಜ್ ನಾಯಕ್.
ನಿಮ್ಮ ಮುಖದಲ್ಲಿ ನೋವಿನ ನೆರಳು ನೋಡಿ ತುಂಬಾ ದುಃಖವಾಯಿತು: ಜಗ್ಗೇಶ್ ಬಗ್ಗೆ ಶಶಿಕುಮಾರ್ ಮಾತು

'ಇಬ್ಬರೂ ಕುಳಿತು ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಲಿ'
'ದರ್ಶನ್ ಅವರು ಯಾವುದೇ ಹೇಳಿಕೆ ನೀಡುವ ಮೊದಲೇ ಜಗ್ಗೇಶ್ ಅವರನ್ನು ಮುತ್ತಿಗೆ ಹಾಕಬಾರದಿತ್ತು' ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಜೊತೆಗೆ 'ಇಬ್ಬರೂ ಸಹ ಕನ್ನಡ ಸಿನಿಮಾದ ಆಸ್ತಿಗಳು ಇಬ್ಬರೂ ನಟರು ಒಟ್ಟಿಗೆ ಕೂತು ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು' ಎಂಬ ಸಲಹೆಯನ್ನೂ ಸಹ ಹಲವಾರು ಮಂದಿ ವ್ಯಕ್ತಪಡಿಸಿದ್ದಾರೆ.