ಜಗ್ಗೇಶ್ ಟ್ವಿಟ್ಟರ್ ಫಾಲೋ ಮಾಡೋರಿಗೆ ಒಂದು ಎಚ್ಚರಿಕೆ

ಸಿನಿಮಾ ಇಂಡಸ್ಟ್ರಿ ಹಾಗೂ ರಾಜಕೀಯ ಬೆಳವಣಿಗೆಗಳ ಕುರಿತು ತಮ್ಮ ಅಭಿಪ್ರಾಯಗಳನ್ನ ವ್ಯಕ್ತಪಡಿಸುವ ಮೂಲಕ ಟ್ವಿಟ್ಟರ್ ನಲ್ಲಿ ಸದಾ ಸಕ್ರಿಯರಾಗಿರುವ ನಟ ಜಗ್ಗೇಶ್ ಒಂದು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ಅನಾವಶ್ಯಕ ವಿಚಾರಗಳ ಬಗ್ಗೆ ಟ್ಯಾಗ್ ಮಾಡಿ, ನಿಮ್ಮ ಅಭಿಪ್ರಾಯ ತಿಳಿಸಿ ಎಂದು ಕೇಳುವವರಿಗೆ ನಟ ಜಗ್ಗೇಶ್ ವಿರೋಧ ವ್ಯಕ್ತಪಡಿಸಿದ್ದಾರೆ. ಈ ರೀತಿ ಮಾಡಿದ್ರೆ ಅವರನ್ನ ಬ್ಲಾಕ್ ಮಾಡಬೇಕಾಗುತ್ತೆ ಎಂದು ಖಡಕ್ ಆಗಿ ತಿಳಿಸಿದ್ದಾರೆ.

''ನಾನು ನನ್ನ ಅಭಿಮಾನಿಗಳು ಚಿತ್ರರಂಗದ ಅಭಿಪ್ರಾಯ ವಿಚಾರ ವಿನಿಮಯಕ್ಕೆ ಸೇತುವೆ ಈ ನನ್ನ ಟ್ವಿಟ್ಟರ್ ಖಾತೆ. ಇಲ್ಲಿ ಅನಾವಶ್ಯಕ ಕಂಡವರ ವಿಚಾರ tag ಮಾಡಿ ಪ್ರಚಾರಕ್ಕೆ ಯತ್ನಿಸುವುದು ನಾನು ಸಹಿಸೋಲ್ಲಾ. ವಿನಂತಿ. ಮುಂದುವರೆದರೆ ಅವರ ನಾನು block ಮಾಡುವೆ. ಪರರ ಸಂತೋಷ ಬಯಸುವ ನನ್ನ ಶ್ರೇಷ್ಠವಾಗಿ ಬಳಸಿಕೊಳ್ಳಿ. ಪ್ರೀತಿಗೆ ಗೌರವಿಸುವಿರಿ ಎಂದು ಭಾವಿಸುವೆ'' ಎಂದು ಕೇಳಿಕೊಂಡಿದ್ದಾರೆ.

Jaggesh warns to twitter followers

ಅಭಿಮಾನಿಗಳ ಜೊತೆ ಸದಾ ಸಂವಾದ, ಚರ್ಚೆ ಹಾಗೂ ಅವರ ಕೆಲವು ಬೇಡಿಕೆಗಳನ್ನ ಈಡೇರಿಸುವ ಸಲುವಾಗಿ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸುವ ಜಗ್ಗೇಶ್ ಕೆಲವೊಮ್ಮೆ ಬೇಡವಾದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ ಟೀಕೆಗೆ ಗುರಿಯಾಗಿರುವ ಉದಾಹರಣೆಯೂ ಇದೆ. ಹಾಗಾಗಿ, ಈ ಬಗ್ಗೆ ಜಗ್ಗೇಶ್ ಜಾಗೃತರಾಗಿದ್ದಾರೆ.

ಸಮಾಜದ ಆಗುಹೋಗುಗಳ ಬಗ್ಗೆ ಅಭಿಮಾನಿಗಳು ಪ್ರಶ್ನೆ ಕೇಳುತ್ತಾರೆ. ಅದಕ್ಕೆ ಜಗ್ಗೇಶ್ ತಮ್ಮದೇ ಶೈಲಿಯಲ್ಲು ಉತ್ತರಿಸುತ್ತಾರೆ. ನನ್ನ ಹುಟ್ಟುಹಬ್ಬ ವಿಶ್ ಮಾಡಿ ಅಣ್ಣಾ ಎನ್ನುತ್ತಾರೆ. ಮನಸ್ಸಿನಿಂದ ಶುಭಹಾರೈಸುತ್ತಾರೆ. ವಿವಾಹ ವಾರ್ಷಿಕೋತ್ಸವ ಅಂತಾರೆ ಆಗಲು ವಿಶ್ ಮಾಡ್ತಾರೆ. ಸಿನಿಮಾ ಹಾಗು ಕಲಾವಿದರ ಬಗ್ಗೆ ಅಭಿಪ್ರಾಯ ಹಂಚಿಕೊಳ್ಳುತ್ತಾರೆ. ಹೀಗೆ, ಸಿನಿಮಾ ಹಾಗೂ ರಾಜಕೀಯ ವಿಷ್ಯಗಳ ಕುರಿತು ಅಭಿಮಾನಿಗಳ ಜೊತೆ ಜಗ್ಗೇಶ್ ಟ್ವಿಟ್ಟರ್ ನಲ್ಲಿ ಯಾವಾಗಲೂ ಸಂಪರ್ಕದಲ್ಲಿರುತ್ತಾರೆ.

More from Filmibeat

English summary
Kannada actor Jaggesh gives warning to his twitter followers for unwanted tags.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X