Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜಗ್ಗೇಶ್ ಟ್ವಿಟ್ಟರ್ ಫಾಲೋ ಮಾಡೋರಿಗೆ ಒಂದು ಎಚ್ಚರಿಕೆ
ಸಿನಿಮಾ ಇಂಡಸ್ಟ್ರಿ ಹಾಗೂ ರಾಜಕೀಯ ಬೆಳವಣಿಗೆಗಳ ಕುರಿತು ತಮ್ಮ ಅಭಿಪ್ರಾಯಗಳನ್ನ ವ್ಯಕ್ತಪಡಿಸುವ ಮೂಲಕ ಟ್ವಿಟ್ಟರ್ ನಲ್ಲಿ ಸದಾ ಸಕ್ರಿಯರಾಗಿರುವ ನಟ ಜಗ್ಗೇಶ್ ಒಂದು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಅನಾವಶ್ಯಕ ವಿಚಾರಗಳ ಬಗ್ಗೆ ಟ್ಯಾಗ್ ಮಾಡಿ, ನಿಮ್ಮ ಅಭಿಪ್ರಾಯ ತಿಳಿಸಿ ಎಂದು ಕೇಳುವವರಿಗೆ ನಟ ಜಗ್ಗೇಶ್ ವಿರೋಧ ವ್ಯಕ್ತಪಡಿಸಿದ್ದಾರೆ. ಈ ರೀತಿ ಮಾಡಿದ್ರೆ ಅವರನ್ನ ಬ್ಲಾಕ್ ಮಾಡಬೇಕಾಗುತ್ತೆ ಎಂದು ಖಡಕ್ ಆಗಿ ತಿಳಿಸಿದ್ದಾರೆ.
ಜಗ್ಗೇಶ್ ಹೊಸ ಕಾರು ಎಗರಿಸಿಕೊಂಡು ಹೋಗಿದ್ದರಂತೆ ಖ್ಯಾತ ನಟ
''ನಾನು ನನ್ನ ಅಭಿಮಾನಿಗಳು ಚಿತ್ರರಂಗದ ಅಭಿಪ್ರಾಯ ವಿಚಾರ ವಿನಿಮಯಕ್ಕೆ ಸೇತುವೆ ಈ ನನ್ನ ಟ್ವಿಟ್ಟರ್ ಖಾತೆ. ಇಲ್ಲಿ ಅನಾವಶ್ಯಕ ಕಂಡವರ ವಿಚಾರ tag ಮಾಡಿ ಪ್ರಚಾರಕ್ಕೆ ಯತ್ನಿಸುವುದು ನಾನು ಸಹಿಸೋಲ್ಲಾ. ವಿನಂತಿ. ಮುಂದುವರೆದರೆ ಅವರ ನಾನು block ಮಾಡುವೆ. ಪರರ ಸಂತೋಷ ಬಯಸುವ ನನ್ನ ಶ್ರೇಷ್ಠವಾಗಿ ಬಳಸಿಕೊಳ್ಳಿ. ಪ್ರೀತಿಗೆ ಗೌರವಿಸುವಿರಿ ಎಂದು ಭಾವಿಸುವೆ'' ಎಂದು ಕೇಳಿಕೊಂಡಿದ್ದಾರೆ.
ರಾತ್ರೋರಾತ್ರಿ ಆಟೋ ಚಲಾಯಿಸಿ ಹಳೆಯ ದಿನಗಳನ್ನು ನೆನಪಿಸಿಕೊಂಡ ಜಗ್ಗೇಶ್
ಅಭಿಮಾನಿಗಳ ಜೊತೆ ಸದಾ ಸಂವಾದ, ಚರ್ಚೆ ಹಾಗೂ ಅವರ ಕೆಲವು ಬೇಡಿಕೆಗಳನ್ನ ಈಡೇರಿಸುವ ಸಲುವಾಗಿ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸುವ ಜಗ್ಗೇಶ್ ಕೆಲವೊಮ್ಮೆ ಬೇಡವಾದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ ಟೀಕೆಗೆ ಗುರಿಯಾಗಿರುವ ಉದಾಹರಣೆಯೂ ಇದೆ. ಹಾಗಾಗಿ, ಈ ಬಗ್ಗೆ ಜಗ್ಗೇಶ್ ಜಾಗೃತರಾಗಿದ್ದಾರೆ.
ನಾನು ನನ್ನ ಅಭಿಮಾನಿಗಳು ಚಿತ್ರರಂಗದ ಅಭಿಪ್ರಾಯ ವಿಚಾರವಿನಿಮಯಕ್ಕೆ
— ನವರಸನಾಯಕ ಜಗ್ಗೇಶ್ (@Jaggesh2) May 16, 2019
ಸೇತುವೆ ಈ ನನ್ನಟ್ವಿಟ್ಟರ್ ಖಾತೆ!
ಇಲ್ಲಿ ಅನಾವಶ್ಯಕ ಕಂಡವರ ವಿಚಾರ tagಮಾಡಿ ಪ್ರಚಾರಕ್ಕೆ ಯತ್ನಿಸುವುದು ನಾನು ಸಹಿಸೋಲ್ಲಾ!ವಿನಂತಿ!
ಮುಂದುವರೆದರೆ ಅವರ ನಾನು blockಮಾಡುವೆ!ಪರರ ಸಂತೋಷ ಬಯಸುವ ನನ್ನ ಶ್ರೇಷ್ಟವಾಗಿ ಬಳಸಿಕೊಳ್ಳಿ!ಪ್ರೀತಿಗೆ ಗೌರವಿಸುವಿರಿ ಎಂದು ಭಾವಿಸುವೆ!
ಸಮಾಜದ ಆಗುಹೋಗುಗಳ ಬಗ್ಗೆ ಅಭಿಮಾನಿಗಳು ಪ್ರಶ್ನೆ ಕೇಳುತ್ತಾರೆ. ಅದಕ್ಕೆ ಜಗ್ಗೇಶ್ ತಮ್ಮದೇ ಶೈಲಿಯಲ್ಲು ಉತ್ತರಿಸುತ್ತಾರೆ. ನನ್ನ ಹುಟ್ಟುಹಬ್ಬ ವಿಶ್ ಮಾಡಿ ಅಣ್ಣಾ ಎನ್ನುತ್ತಾರೆ. ಮನಸ್ಸಿನಿಂದ ಶುಭಹಾರೈಸುತ್ತಾರೆ. ವಿವಾಹ ವಾರ್ಷಿಕೋತ್ಸವ ಅಂತಾರೆ ಆಗಲು ವಿಶ್ ಮಾಡ್ತಾರೆ. ಸಿನಿಮಾ ಹಾಗು ಕಲಾವಿದರ ಬಗ್ಗೆ ಅಭಿಪ್ರಾಯ ಹಂಚಿಕೊಳ್ಳುತ್ತಾರೆ. ಹೀಗೆ, ಸಿನಿಮಾ ಹಾಗೂ ರಾಜಕೀಯ ವಿಷ್ಯಗಳ ಕುರಿತು ಅಭಿಮಾನಿಗಳ ಜೊತೆ ಜಗ್ಗೇಶ್ ಟ್ವಿಟ್ಟರ್ ನಲ್ಲಿ ಯಾವಾಗಲೂ ಸಂಪರ್ಕದಲ್ಲಿರುತ್ತಾರೆ.