twitter
    For Quick Alerts
    ALLOW NOTIFICATIONS  
    For Daily Alerts

    ಟಿವಿಯಲ್ಲಿ 'ಗಂಧದಗುಡಿ' ನೋಡಿ ಭಾವುಕರಾದ ಜಗ್ಗೇಶ್

    |

    Recommended Video

    ಕನ್ನಡದ ಗಂಧದಗುಡಿ ಸಿನಿಮಾ ನೋಡಿ ಜಗ್ಗೇಶ್ ಭಾವುಕರಾಗಿದ್ಯಾಕೆ?

    ಕೆಲವು ಸಿನಿಮಾಗಳು ಮನರಂಜನೆಯನ್ನ ಕೊಡುತ್ತೆ. ಮತ್ತೆ ಕೆಲವು ಸಿನಿಮಾಗಳು ಮನರಂಜನೆಯ ಜೊತೆಗೆ ನೆನಪುಗಳನ್ನ ನೀಡುತ್ತೆ. ಹೀಗೆ, ಮನರಂಜನೆಯ ಜೊತೆಗೆ ನೆನಪುಗಳನ್ನ ಬಿಟ್ಟು ಹೋದ ಚಿತ್ರ ಗಂಧದ ಗುಡಿ. ಡಾ ರಾಜ್ ಮತ್ತು ವಿಷ್ಣು ಒಟ್ಟಿಗೆ ಅಭಿನಯಿಸಿದ್ದ ಮೊದಲ ಹಾಗೂ ಕೊನೆಯ ಸಿನಿಮಾ.

    1973ರಲ್ಲಿ ತೆರೆಕಂಡಿದ್ದ ಈ ಚಿತ್ರವನ್ನ ವಿಜಯ್ ನಿರ್ದೇಶನ ಮಾಡಿದ್ದರು. ಅರಣ್ಯ ಅಧಿಕಾರಿಯಾಗಿ ಅಣ್ಣಾವ್ರು ನಟಿಸಿದ್ದು, ಖಳನಾಯಕನಾಗಿ ವಿಷ್ಣುವರ್ಧನ್ ಕಾಣಿಸಿಕೊಂಡಿದ್ದರು. ಇನ್ನು ವಿಶೇಷ ಅಂದ್ರೆ ಈ ಸಿನಿಮಾದಲ್ಲಿ ರಾಜ್ ಮತ್ತು ವಿಷ್ಣು ಅಣ್ಣ-ತಮ್ಮನಾಗಿ ಅಭಿನಯಿಸಿದ್ದರು.

    ದುರಂತ ಅಂದ್ರೆ ಈ ಸಿನಿಮಾದ ಕ್ಲೈಮ್ಯಾಕ್ಸ್ ವೇಳೆ ನಡೆದ ಒಂದು ಗಂಭೀರ ಘಟನೆಯಿಂದ ರಾಜ್ ಮತ್ತು ವಿಷ್ಣು ಮುಂದೆ ಯಾವ ಸಿನಿಮಾದಲ್ಲೂ ಒಟ್ಟಿಗೆ ನಟಿಸುವ ಅವಕಾಶವೇ ಸಿಗಲಿಲ್ಲ. ಆದ್ರೆ, ಈ ಸಿನಿಮಾ ನೋಡಿದಾಗಲೆಲ್ಲ, ಇವರಿಬ್ಬರು ಮತ್ತಷ್ಟು ಚಿತ್ರವನ್ನ ಒಟ್ಟಿಗೆ ಮಾಡಬೇಕಿತ್ತು ಎಂಬ ಭಾವನೆ ಮಾತ್ರ ಬರದೇ ಇರಲ್ಲ.

    Jaggesh watched gandhadagudi in DD Channel

    'ಗಂಧದಗುಡಿ'ಯಲ್ಲಿ ರಾಜ್-ವಿಷ್ಣು ಮಧ್ಯೆ ಆಗಿದ್ದೇನು? 'ವೀಕೆಂಡ್'ನಲ್ಲಿ ನಟಿ ಭಾರತಿ ಹೇಳಿದ ಕಥೆ! 'ಗಂಧದಗುಡಿ'ಯಲ್ಲಿ ರಾಜ್-ವಿಷ್ಣು ಮಧ್ಯೆ ಆಗಿದ್ದೇನು? 'ವೀಕೆಂಡ್'ನಲ್ಲಿ ನಟಿ ಭಾರತಿ ಹೇಳಿದ ಕಥೆ!

    ಇದೀಗ, ಇಂತಹ ಸೂಪರ್ ಹಿಟ್, ಎವರ್ ಗ್ರೀನ್ ಚಿತ್ರವನ್ನ ನಟ ಜಗ್ಗೇಶ್ ಅವರು ಆಕಸ್ಮಿಕವಾಗಿ ಟಿವಿಯಲ್ಲಿ ನೋಡಿದ್ದಾರೆ. ಸಿನಿಮಾ ನೋಡಿ ನೆನಪು ಮೆಲುಕು ಹಾಕಿದ ನಟ ಭಾವುಕವಾಗಿ ಅಭಿಮಾನಿಗಳ ಜೊತೆ ಕೆಲವೊಂದು ವಿಷ್ಯ ಹಂಚಿಕೊಂಡಿದ್ದಾರೆ.

    Jaggesh watched gandhadagudi in DD Channel

    'ಗಂಧದ ಗುಡಿ'ಯಲ್ಲಿ ಡಾ.ರಾಜ್ ಗೆ ಗುಂಡು ಹಾರಿಸಿದ್ಯಾರು.? ದಶಕಗಳ ನಂತ್ರ ಸತ್ಯ ಬಟಾಬಯಲು.! 'ಗಂಧದ ಗುಡಿ'ಯಲ್ಲಿ ಡಾ.ರಾಜ್ ಗೆ ಗುಂಡು ಹಾರಿಸಿದ್ಯಾರು.? ದಶಕಗಳ ನಂತ್ರ ಸತ್ಯ ಬಟಾಬಯಲು.!

    ''ಆಕಸ್ಮಿಕ DD ಅಲ್ಲಿ #ಗಂಧದಗುಡಿ ಚಿತ್ರದ ಕ್ಲೈಮಾಕ್ಸ್ ನ ಈ ದೃಶ್ಯ ಕಣ್ಣಿಗೆ ಬಿತ್ತು..ಭಾವುಕನಾದೆ...ಕಾರಣ ಕಲಾವಿದ ದೈಹಿಕವಾಗಿ ಸತ್ತರು ಜನರ ಮಾನಸದಲ್ಲಿ ಉಳಿಯುವ ಚಿರಂಜೀವಿ ಎಂದು..ವಿಶ್ವದಲ್ಲಿ ಬೇರೆ ಯಾರಿಗುಂಟು ಈ ಸೌಭಾಗ್ಯ ಅಲ್ಲವೆ..ನಾನು ಕಂಡ ಈ ದೃಶ್ಯದ ಪಾತ್ರದಾರಿಗಳು ರಾಜಣ್ಣ ವಿಷ್ಣು ಸಾರ್ ಆಧಿವಾನಿ ಲಕ್ಷ್ಮೀಬಾಯ್ ಅಮ್ಮ ಮಕ್ಕಳಾಗಿ ಸಾವಿನಲ್ಲಿ ಒಂದಾಗುವ ಅಮೋಙ್ನ ಅಭಿನಯ ನೀಡಿದ್ದರು...
    ಈಗ ಈ ಮೂವರು ವಿಧಿವಶರು ದೈಹಿಕವಾಗಿ..ಮಾನಸಿಕವಾಗಿ ಜೀವಂತರು ತೆರೆಯಮೇಲೆ..''

    ಜಗ್ಗೇಶ್ ಟ್ವಿಟ್ಟರ್ ಫಾಲೋ ಮಾಡೋರಿಗೆ ಒಂದು ಎಚ್ಚರಿಕೆಜಗ್ಗೇಶ್ ಟ್ವಿಟ್ಟರ್ ಫಾಲೋ ಮಾಡೋರಿಗೆ ಒಂದು ಎಚ್ಚರಿಕೆ

    ''ಹಾಗೆ ನಾನು ಎಷ್ಟು ಅದೃಷ್ಟವಂತ ಕಲಾವಿದನಾಗಿ ಹುಟ್ಟಿದ್ದಕ್ಕೆ.. ಅನ್ನದ ಋಣ ಮುಗಿದ ಮೇಲೆ ನಾನು ದೈಹಿಕವಾಗಿ ನಿರ್ಗಮಿಸುವೆ ಒಂದು ದಿನ.. ಆದರು ಜನಮಾನದಲ್ಲಿ ಉಳಿಯುವ ಯೋಗ ಸಿಕ್ಕಿತ್ತಲ್ಲಾ ಎಂದು ದೇವರು ಕೊಟ್ಟ ನನ್ನ ಕಲಾಕ್ಷೇತ್ರಕ್ಕೆ ಧನ್ಯವಾದ ಅರ್ಪಿಸಿತು ಧನ್ಯತೆಯಿಂದ ನನ್ನಮನ..ಶಾಪಗ್ರಸ್ತ ಗಂಧರ್ವರು ಕಲಾವಿದರು..ವಿಶ್ವದಲ್ಲಿ ಎಲ್ಲರಿಗು ಸಾವುಂಟು ಜನರ ಕಲೆಯಲ್ಲಿ ಸಂತೋಷ ಪಡಿಸುವ ಕಲಾವಿದರಿಗೆ ಇಲ್ಲಾ..ಇದಲ್ಲವೆ ಜನ್ಮಾಂತರಪುಣ್ಯ...ಕಲಾವಿಶಾರದೆ ಧನ್ಯೋಸ್ಮಿ..'' ಎಂದು ತಮ್ಮ ಟ್ವಿಟ್ಟರ್, ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ.

    English summary
    Kannada actor Jaggesh watched gandhadagudi in DD Channel and he get emotional about dr rajkumar and vishnuvardhan.
    Tuesday, May 21, 2019, 12:22
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X