ಕೋಮಲ್ 'ಕೆಂಪೇಗೌಡ' ನೋಡಿ ಹೆಮ್ಮೆ ಆಯಿತು ಎಂದ ಜಗ್ಗೇಶ್

ಸುಮಾರು ವರ್ಷದ ನಂತರ ಮತ್ತೆ ಬೆಳ್ಳಿತೆರೆಯಲ್ಲಿ ಘರ್ಜಿಸಲು ನಟ ಕೋಮಲ್ ಸಜ್ಜಾಗಿದ್ದಾರೆ. 'ಕೆಂಪೇಗೌಡ-2' ಚಿತ್ರದ ಮೂಲಕ ಕಂಬ್ಯಾಕ್ ಆಗುತ್ತಿರುವ ಕೋಮಲ್ ಸಿನಿಮಾ ಬಿಡುಗಡೆಗೆ ಮುಂಚೆ ಯೂಟ್ಯೂಬ್ ನಲ್ಲಿ ಸದ್ದು ಮಾಡ್ತಿದೆ.

ಕೆಂಪೇಗೌಡ 2 ಚಿತ್ರದ ಟ್ರೈಲರ್ ಒಂದು ಮಿಲಿಯನ್ ವೀಕ್ಷಣೆ ಕಂಡಿದೆ. ಕಳೆದ ತಿಂಗಳು 'ಕೆಂಪೇಗೌಡ-2' ಚಿತ್ರದ ಟ್ರೈಲರ್ ರಿಲೀಸ್ ಆಗಿತ್ತು. ಈ ಬಗ್ಗೆ ನಟ ಜಗ್ಗೇಶ್ ಟ್ವೀಟ್ ಮಾಡಿದ್ದು, ಸಹೋದರ ಸಿನಿಮಾದ ಬಗ್ಗೆ ಹೆಮ್ಮೆಯ ಮಾತುಗಳನ್ನಾಡಿದ್ದಾರೆ.

Jaggesh watched kempegowda 2 movie

''ಕೆಂಪೇಗೌಡ 2 ಚಿತ್ರ #ಕೋಮಲ್ ಕುಮಾರ್ 1ಮಿಲಿಯನ್ ವೀಕ್ಷಿಸಿ ಬೆಂಬಲಿಸಿದ ಕನ್ನಡ ಕುಲಕೋಟಿ ಮನಗಳಿಗೆ ಧನ್ಯವಾದಗಳು.. ಕೊನೆ ಹಂತದ DI ಕಾರ್ಯ ನಡೆಯುತ್ತಿದೆ.. Raw ಸಿನಿಮಾ ನೋಡಿಯೇ ರೋಮಾಂಚನವಾಯಿತು.. One of the best commercial movie ಸಾಲಿಗೆ ಈ ಚಿತ್ರ ಸೇರುತ್ತದೆ ಎಂದು ಮನ ಹೇಳಿತು..ಅಣ್ಣನಾಗಿ ಹೆಮ್ಮೆ ಆಯಿತು..'' ಎಂದು ಜಗ್ಗೇಶ್ ಸಂತಸ ವ್ಯಕ್ತಪಡಿಸಿದ್ದಾರೆ.

Jaggesh watched kempegowda 2 movie

ಶಂಕರ್ ಗೌಡ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಸುದೀಪ್ ಕೆಂಪೇಗೌಡ ಸಿನಿಮಾದಂತೆ ಅಬ್ಬರಿಸುವ ಮುನ್ಸೂಚನೆ ನೀಡಿದ್ದಾರೆ. ವಿಶೇಷ ಅಂದ್ರೆ ಈ ಸಿನಿಮಾದಲ್ಲಿ ಭಾರತ ಕ್ರಿಕೆಟ್ ಆಟಗಾರ ಶ್ರೀಶಾಂತ್ ಖಳನಾಯಕನಾಗಿ ಮಿಂಚಿದ್ದಾರೆ. ಸರ್ಪ್ರೈಸ್ ಅಂದ್ರೆ ಲೂಸ್ ಮಾದ ಯೋಗಿ ಕೂಡ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.

ಚಿತ್ರದ ಬಹುತೇಕ ಕೆಲಸ ಮುಗಿಸಿರುವ ಕೆಂಪೇಗೌಡ 2 ಸಿನಿಮಾ ಸದ್ಯದಲ್ಲೇ ತೆರೆಗೆ ಬರಲಿದೆ. ಮೊದಲ ಪ್ರಿಂಟ್ ಜಗ್ಗೇಶ್ ನೋಡಿದ್ದು ಸಿನಿಮಾ ಚೆನ್ನಾಗಿ ಬಂದಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹೀಗಾಗಿ, ಕೋಮಲ್ ರೀ-ಎಂಟ್ರಿ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ.

More from Filmibeat

English summary
Kannada actor Jaggesh watched his brother komal kumar's comeback movie kempegowda 2. and he praised to his brother hardwork.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X