ಮುಸುಕುಧಾರಿಯಾಗಿ 'ಯಜಮಾನ' ಸಿನಿಮಾ ವೀಕ್ಷಿಸಿದ ನಟ ಜಗ್ಗೇಶ್
Recommended Video

ದರ್ಶನ್ ಅಭಿಮಾನಿಗಳ ನಿರೀಕ್ಷೆಯನ್ನು 'ಯಜಮಾನ' ಸಿನಿಮಾ ಸುಳ್ಳು ಮಾಡಿಲ್ಲ. ಅದೇ ಕಾರಣಕ್ಕೆ ಚಿತ್ರ ಯಶಸ್ವಿ ಪ್ರದರ್ಶನ ಮುಂದುವರೆಸಿದೆ. ಅಭಿಮಾನಿಗಳು ಮಾತ್ರವಲ್ಲದೆ ನಟ ಜಗ್ಗೇಶ್ ಸಹ ಸಿನಿಮಾವನ್ನ ನೋಡಿದ್ದಾರೆ.
'ಯಜಮಾನ' ಸಿನಿಮಾವನ್ನು ವೀಕ್ಷಿಸಿರುವ ಜಗ್ಗೇಶ್ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ''ಯಜಮಾನ ಚಿತ್ರ ನೋಡಿ ಆನಂದಿಸಿದ ಕ್ಷಣ (ಚಿತ್ರಮಂದಿರ ಸರ್ ಪ್ರೈಸ್) ಕಾರಣ ಫುಚ್ಛರ್ ನಲ್ಲಿ ನಾನು ಸಿನಿಮಾ ನೋಡಲಾಗದು ಕ್ಷಮೆಯಿರಲಿ. ಕನ್ನಡ ಚಿತ್ರ ಚಿತ್ರಮಂದಿರಲ್ಲೇ ನೋಡಿ ಪ್ರೊತ್ಸಾಹಿಸಿ ಎಂದು ಕನ್ನಡದ ಮನಸ್ಸುಗಳಿಗೆ ನನ್ನ ವಿನಂತಿ. ಬೆಸ್ಟ್ ಆಫ್ ಲಕ್.'' ಎಂದಿದ್ದಾರೆ.
ವಿಶೇಷ ಅಂದರೆ, ಮುಸುಕುಧಾರಿಯಾಗಿ ಜಗ್ಗೇಶ್ 'ಯಜಮಾನ' ಸಿನಿಮಾವನ್ನು ನೋಡಿದ್ದಾರೆ. ಚಿತ್ರಮಂದಿರವನ್ನು ಗುಪ್ತವಾಗಿ ಇಟ್ಟಿರುವ ಅವರು ವಿಡಿಯೋ ಮಾಡಿ ಸಿನಿಮಾ ನೋಡಿದ ವಿಷಯವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.

ಈ ಹಿಂದೆ ಯಶ್ ಅಭಿನಯದ 'ಕೆಜಿಎಫ್' ಸಿನಿಮಾವನ್ನು ಕೂಡ ಜಗ್ಗೇಶ್ ಮಂಕಿ ಕ್ಯಾಂಪ್ ಹಾಕಿ ನೋಡಿದ್ದರು.
ಯಜಮಾನ ಸಿನಿಮಾ ಹೇಗಿದೆ ?
'ಯಜಮಾನ' ಚಿತ್ರ ಎಲ್ಲ ರೀತಿಯ ಮನರಂಜನೆಯ ಅಂಶಗಳ ಮಿಶ್ರಣ. ಬೆಳೆ ಬೆಳೆದ ರೈತನೇ ನಿಜವಾದ 'ಯಜಮಾನ' ಎಂದು ಹೇಳುವ ಈ ಸಿನಿಮಾ ಕೆಲ ಸೂಕ್ಷ್ಮ ವಿಷಯಗಳನ್ನು ಕಮರ್ಶಿಯಲ್ ಶೈಲಿಯಲ್ಲಿ ಹೇಳಿದೆ. ಮಜಾ ನೀಡೋ ಹಾಡು, ಥ್ರಿಲ್ ನೀಡುವ ಫೈಟುಗಳ ಜೊತೆಜೊತೆಗೆ ಫ್ಯಾಮಿಲಿ ಹಾಗೂ ಊರಿನ ಕಥೆ ಇರುವ 'ಯಜಮಾನ' ದರ್ಶನ್ ಅಭಿಮಾನಿಗಳಿಗೆ ಮೋಸ ಮಾಡುವುದಿಲ್ಲ.


Click it and Unblock the Notifications











