ನಟ ಜಗ್ಗೇಶ್ ಕೊರಳಲ್ಲಿ ಸದಾ ಇರುತ್ತೆ ಮಾಂಗಲ್ಯ ಸರ!

ನಟ ಜಗ್ಗೇಶ್ ಎಷ್ಟು ತಮಾಷೆ ಸ್ವಭಾವದ ವ್ಯಕ್ತಿಯೋ ಅಷ್ಟೇ ಗಂಭೀರ ವ್ಯಕ್ತಿಯೂ ಹೌದು. ಗುರುರಾಯರ ಅಖಂಡ ಭಕ್ತರಾಗಿರುವ ಜಗ್ಗೇಶ್ ಅವರಿಗೆ ಆಧ್ಯಾತ್ಮಿಕ ಒಲವು ಸಹ ತುಸು ಹೆಚ್ಚೇ ಇದೆ.

Recommended Video

ರಾಯರು ಅಂದ್ರೆ ಯಾಕೆ ಅಷ್ಟು ಭಕ್ತಿ ಅನ್ನೋದನ್ನ ಹೇಳಿದ ಜಗ್ಗೇಶ್ | Jaggesh 40 Years Cine Journey

ದೇವರನ್ನು ಅಪಾರವಾಗಿ ನಂಬುವ ಜಗ್ಗೇಶ್, ಬೆರಳಲ್ಲಿ ಸಾಕಷ್ಟು ಉಂಗುರ, ಕೊರಳಿಗೆ ಹಲವು ಮಾದರಿಯ ಮಾಲೆಗಳನ್ನು ಹಾಕಿಕೊಂಡಿರುತ್ತಾರೆ. ವಿಶೇಷವೆಂದರೆ ಇದರ ಜೊತೆಗೆ ಜಗ್ಗೇಶ್ ಕೊರಳಲ್ಲಿ ಮಾಂಗಲ್ಯ ಸರವೂ ಒಂದಿದೆ.

ಹೌದು, ಮಹಿಳೆಯರು ಮಾತ್ರವೇ ಧರಿಸುವ ಮಾಂಗಲ್ಯ ಸರವನ್ನು ನಟ ಜಗ್ಗೇಶ್ ಹಲವು ವರ್ಷಗಳಿಂದ ಕೊರಳಲ್ಲಿ ಧರಿಸಿದ್ದಾರೆ. ಒಂದು ಬಾರಿಯೂ ಆ ಸರವನ್ನು ಬಿಚ್ಚುವುದಿಲ್ಲವಂತೆ ನಟ ಜಗ್ಗೇಶ್. ತಾವು ಮಾಂಗಲ್ಯ ಸರವನ್ನು ಕಟ್ಟಿಕೊಳ್ಳಲು ಇರುವ ಭಾವನಾತ್ಮಕ ಕಾರಣವನ್ನು ಖಾಸಗಿ ಸುದ್ದಿವಾಹಿನಿಯ ಸಂದರ್ಶನದಲ್ಲಿ ಬಹಿರಂಗಗೊಳಿಸಿದ್ದಾರೆ.

ತಾಯಿಯ ಮಾಂಗಲ್ಯ ಸರ ಜಗ್ಗೇಶ್ ಕೊರಳಲ್ಲಿ

ತಾಯಿಯ ಮಾಂಗಲ್ಯ ಸರ ಜಗ್ಗೇಶ್ ಕೊರಳಲ್ಲಿ

ಜಗ್ಗೇಶ್ ಕೊರಳಿಗೆ ಹಾಕಿಕೊಂಡಿರುವ ಮಾಂಗಲ್ಯ ಸರ ಜಗ್ಗೇಶ್ ಅವರ ತಾಯಿ ನಂಜಮ್ಮನವರದ್ದು. ಜಗ್ಗೇಶ್ ಅವರ ತಾಯಿ ಕಾಲವಾಗುವ ಕೆಲವು ದಿನಗಳ ಹಿಂದೆಯಷ್ಟೆ ಜಗ್ಗೇಶ್ ಅನ್ನು ಕರೆದು, ಇದನ್ನು ಕೊರಳಿಗೆ ಹಾಕಿಕೊ, ನನ್ನ ಪುಣ್ಯ ಇದರಲ್ಲಿದೆ. ಇದನ್ನು ಧರಿಸಿಕೊಂಡರೆ ನಿನ್ನನ್ನು ಯಾರೂ ಏನೂ ಮಾಡಲಾರರು ಎಂದಿದ್ದರಂತೆ. ಅಂತೆಯೇ ಅಂದಿನಿಂದಲೂ ಜಗ್ಗೇಶ್ ಕೊರಳಲ್ಲಿ ತಾಯಿಯ ಮಾಂಗಲ್ಯವಿದೆ.

ನನ್ನ ಅಮ್ಮ ಕಾಲಜ್ಞಾನಿಯಾಗಿದ್ದರು: ಜಗ್ಗೇಶ್

ನನ್ನ ಅಮ್ಮ ಕಾಲಜ್ಞಾನಿಯಾಗಿದ್ದರು: ಜಗ್ಗೇಶ್

ಜಗ್ಗೇಶ್, ತಮ್ಮ ತಾಯಿಯನ್ನು ಅಪಾರವಾಗಿ ಪ್ರೀತಿಸುತ್ತಾರೆ. ತಾಯಿಯ ಬಗ್ಗೆ ಎಲ್ಲಿಲ್ಲದ ಪ್ರೀತಿ, ಅಭಿಮಾನ. ಜಗ್ಗೇಶ್ ಹೇಳಿರುವಂತೆ, ಅವರ ತಾಯಿ ಕಾಲಜ್ಞಾನಿಯಂತೆ. ತಾಯಿ ಕೊಟ್ಟಿರುವ ಮಾಂಗಲ್ಯವನ್ನು ಕೊರಳಲ್ಲಿ ಹಾಕಿಕೊಂಡಿರುವುದರಿಂದ ಅವರಿಗೆ ಪಾಸಿಟಿವ್ ಎನರ್ಜಿ ಬರುತ್ತದೆಯಂತೆ.

ಅಮ್ಮ ಕೊಟ್ಟಿದ್ದ ಹುಲಿ ಉಗುರಿನ ಸರ

ಅಮ್ಮ ಕೊಟ್ಟಿದ್ದ ಹುಲಿ ಉಗುರಿನ ಸರ

ಮಾಂಗಲ್ಯ ಸರ ಮಾತ್ರವಲ್ಲದೆ, ಜಗ್ಗೇಶ್‌ ಅವರ 20ನೇ ಹುಟ್ಟುಹಬ್ಬದಂದು ಅವರ ತಾಯಿಯವರು ಹುಲಿ ಉಗುರಿನಿಂದ ಮಾಡಿದ ಸರವನ್ನು ಉಡುಗೊರೆಯಾಗಿ ಕೊಟ್ಟಿದ್ದರಂತೆ. ಅದನ್ನೂ ಸಹ ಜಗ್ಗೇಶ್ ಸದಾ ತಮ್ಮ ಕೊರಳಲ್ಲಿ ತೊಡುತ್ತಾರೆ.

ಹಲವು ರೀತಿಯ ಮಾಲೆಗಳನ್ನು ಜಗ್ಗೇಶ್ ಧರಿಸುತ್ತಾರೆ

ಹಲವು ರೀತಿಯ ಮಾಲೆಗಳನ್ನು ಜಗ್ಗೇಶ್ ಧರಿಸುತ್ತಾರೆ

ಹಿಮಾಲಯಕ್ಕೆ ತೆರಳಿದ್ದಾಗ ಒಬ್ಬ ಜೈನ ಮುನಿ ಕೊಟ್ಟ ಒಂದು ಸರ, ಏಕಮುಖಿ ರುದ್ರಾಕ್ಷಿಯಿಂದ ಮಾಡಿದ ರುದ್ರಾಕ್ಷಿ ಮಾಲೆ. ಸುಶ್ಬೇಂದ್ರ ತೀರ್ಥ ಸ್ವಾಮಿಗಳು ತಮ್ಮ ಕೈಯಿಂದ ಮಾಡಿ ಕೊಟ್ಟಿದ್ದ ಮಾಲೆ, ಬೆರಳುಗಳಿಗೆ ವಿವಿಧ ರೀತಿಯ ಉಂಗುರಗಳನ್ನು ಜಗ್ಗೇಶ್ ಧರಿಸುತ್ತಾರೆ.

More from Filmibeat

English summary
Actor Jaggesh wears his mother's mangalya pendent. He said his mother only gave him before her death.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X