For Quick Alerts
  ALLOW NOTIFICATIONS  
  For Daily Alerts

  ಅಣ್ಣವ್ರ ಹುಟ್ಟುಹಬ್ಬದಂದೆ ಮಗನ ಮದುವೆ ಮಾಡಿ ಅಭಿಮಾನ ಮೆರೆದ ಜಗ್ಗೇಶ್

  |

  ಭಾರತೀಯ ಚಿತ್ರರಂಗ ಕಂಡ ಅಪರೂಪದ ನಟ ಡಾ.ರಾಜ್ ಕುಮಾರ್. ಕೋಟ್ಯಾಂತರ ಅಭಿಮಾನಿ ದೇವರುಗಳ ಪಾಲಿನ ಆರಾಧ್ಯ ದೈವ. ರಾಜ್ ಅಂದ್ರೆ ಸಾಕು ದೊಡ್ಡ ಜನಸಾಗರವೆ ಹರಿದು ಬರುತ್ತಿತ್ತು. ಈ ಸರಳ ಜೀವಿಯನ್ನು ಕಂಡರೆ ನಾಡಿನ ಜನತೆ ಕೈ ಎತ್ತಿ ಮುಗಿಯುತ್ತಿದ್ದರು. ಇಂತಹ ಮಹಾನ್ ಚೇತನ ಹುಟ್ಟಿದ್ದ ದಿನವಿಂದು. ನಾಡಿನಾದ್ಯಂತ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ.

  ರಾಜ್ ಕುಮಾರ್ ಅವರನ್ನು ಇಷ್ಟಪಡುವವರು ಕೋಟ್ಯಾಂತರ ಮಂದಿ ಇದ್ದಾರೆ, ಅಂತಹ ಅಭಿಮಾನಿಗಲ್ಲಿ ನಟ ಜಗ್ಗೇಶ್ ಕೂಡ ಒಬ್ಬರು. ನವರಸನಾಯಕನಿಗೆ ರಾಜ್ ಅಂದ್ರೆ ಸಾಕು ಅದೇನೋ ಒಂದು ರೀತಿಯ ಶಕ್ತಿ ಮತ್ತು ಅಷ್ಟೆ ಭಕ್ತಿ. ಅಣ್ಣವ್ರನ್ನು ಹೃದಯದಲ್ಲಿ ಇಟ್ಟು ಪೂಜಿಸುತ್ತಾರೆ ಜಗ್ಗೇಶ್.

  ರಾಜ್,ವಿಷ್ಣು,ಅಂಬಿ ಸ್ಮಾರಕ ಒಂದೇ ಕಡೆ ಇರಲಿ: ಶಿವರಾಜ್ ಕುಮಾರ್ ರಾಜ್,ವಿಷ್ಣು,ಅಂಬಿ ಸ್ಮಾರಕ ಒಂದೇ ಕಡೆ ಇರಲಿ: ಶಿವರಾಜ್ ಕುಮಾರ್

  ರಾಜ್ ನೆನಪು ಸದಾ ಜಗ್ಗೇಶ್ ಮನದಲ್ಲೆ ಇರಬೇಕೆಂದು ಏಪ್ರಿಲ್ 24 ರಾಜ್ ಕುಮಾರ್ ಹುಟ್ಟಿದ ದಿನವೆ ಜಗ್ಗೇಶ್ ಮೊದಲ ಮಗ ಗುರು ಜಗ್ಗೇಶ್ ಅವರ ಮದುವೆ ಮಾಡಿಸಿದ್ದಾರೆ. ಮೊದಲೆ ಜಗ್ಗೇಶ್ ಅವರಿಗೆ ರಾಜ್ ಕುಮಾರ್ ಅಂದ್ರೆ ವಿಶೇಷವಾದ ಗೌರವ. ಅವರ ಹುಟ್ಟುಹಬ್ಬವನ್ನು ವಿಶೇಷವಾಗಿಯೇ ಆಚರಿಸುತ್ತಾರೆ. ಇನ್ನು ಮಗನ ಮದುವೆ ಸಂಭ್ರಮ ಕೂಡ ಅವತ್ತೇ ಆದ್ದರಿಂದ ಜಗ್ಗೇಶ್ ಕುಟುಂಬಕ್ಕೆ ಡಬಲ್ ಸಂತಸದ ದಿನ.

  ಈ ಬಗ್ಗೆ ನವರಸ ನಾಯಕ ಜಗ್ಗೇಶ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. "ರಾಜಣ್ಣನ ನೆನಪು ಸದಾ ನನ್ನ ಮಾನಸದಲ್ಲಿ ಉಳಿಸಿಕೊಳ್ಳಲು ನನ್ನ ಹಿರಿಯ ಮಗ

  ಗುರು ಜಗ್ಗೇಶ್ ಗೆ 24/4/2014 ರಾಜಣ್ಣನ ಹುಟ್ಟುಹಬ್ಬದ ದಿನ ಮದುವೆ ಮಾಡಿಸಿದ್ದೆ!

  ಹಾಗಾಗಿ ರಾಜಣ್ಣನ ಹುಟ್ಟುಹಬ್ಬ ನಮ್ಮ ಮನೆಯಲ್ಲಿಯು ಭಾವನಾತ್ಮಕವಾಗಿ ಬೆಸೆದಿದೆ" ಎಂದು ಹೇಳಿಕೊಂಡಿದ್ದಾರೆ.

  English summary
  Kannada actor Jaggesh, who made his son marriage on birthday of Rajkumar's memory. Actor jaggesh is very bigg fan of dr.raj kumar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X