For Quick Alerts
  ALLOW NOTIFICATIONS  
  For Daily Alerts

  'ನಟ ಸಾರ್ವಭೌಮ' ಪುನೀತ್ ಗೆ ಶುಭಕೋರಿದ ಜಗ್ಗೇಶ್

  By Bharath Kumar
  |
  'ನಟ ಸಾರ್ವಭೌಮ' ಪುನೀತ್ ಗೆ ಶುಭಕೋರಿದ ಜಗ್ಗೇಶ್ | Filmibeat Kannada

  ಪವರ್ ಸ್ಟಾರ್ ಪುನೀತ್​ ರಾಜ್​ಕುಮಾರ್​ ಅಭಿನಯಿಸುತ್ತಿರುವ 'ನಟ ಸಾರ್ವಭೌಮ' ಚಿತ್ರದ ಪೋಸ್ಟರ್ ರಿಲೀಸ್​ ಆಗಿದೆ. 'ನಟ ಸಾರ್ವಭೌಮ' ಎಂಬ ವಿಶೇಷವಾದ​ ಶೀರ್ಷಿಕೆಯಲ್ಲಿ 'ಕನ್ನಡದ ರಾಜರತ್ನ' ಎಂಟ್ರಿ ಕೊಡ್ತಿದ್ದಾರೆ.

  ಅಪ್ಪು ಅವರ ಹೊಸ ಚಿತ್ರದ ಪೋಸ್ಟರ್ ಮತ್ತು ಟೈಟಲ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ 'ಅಭಿಮಾನಿ ದೇವರುಗಳು' ಪವರ್ ಸ್ಟಾರ್ ಗೆ ಸಂಪೂರ್ಣವಾಗಿ ಬೆಂಬಲಿಸಿದ್ದಾರೆ. ಚಿತ್ರದ ಟೈಟಲ್ ಮತ್ತು ಪೋಸ್ಟರ್ ಅದ್ಭುತವಾಗಿದೆ. ಸಿನಿಮಾ ಕೂಡ ಅಷ್ಟೇ ಚೆನ್ನಾಗಿ ಮಾಡಿ ಎಂದು ಮನವಿ ಮಾಡಿದ್ದಾರೆ.

  ಇದೀಗ 'ನಟ ಸಾರ್ವಭೌಮ' ಎಂಬ ಟೈಟಲ್ ಗೆ ಕನ್ನಡದ ನವರಸ ನಾಯಕ ಜಗ್ಗೇಶ್ ಅವರ ಕೂಡ ಶುಭಕೋರಿದ್ದಾರೆ. ಡಾ ರಾಜ್ ಅವರ ಬಹುದೊಡ್ಡ ಅಭಿಮಾನಿಯಾಗಿರುವ ಜಗ್ಗೇಶ್, ಅಪ್ಪುವಿನ ಹೊಸ ಚಿತ್ರಕ್ಕೆ ಟ್ವಿಟ್ಟರ್ ನಲ್ಲಿ ವಿಶ್ ಮಾಡಿದ್ದಾರೆ.

  'ನಟ ಸಾರ್ವಭೌಮ' ಶೀರ್ಷಿಕೆಯನ್ನ ಅಭಿಮಾನಿಗಳು ಒಪ್ಪಿಕೊಂಡ್ರಾ, ಇಲ್ವಾ.!

  ''Waw..super..one more megahit..conform.. ನನ್ನಬಾಲ್ಯದಲ್ಲಿ ನಟಸಾರ್ವಭೌಮ ಎಂದು ಪರದೆಯಮೇಲೆ ಬಂದಾಗ ಗಂಟಲು ಕಿತ್ತೋಗುವವರೆಗು ಕಿರಿಚಿ ಚಪ್ಪಾಳೆ ಹೊಡೆದಿರುವೆ ಈ ನಾಮಾಂಕಿತಕ್ಕೆ..ಗೀತಾಂಜಲಿ ಚಿತ್ರಮಂದಿರ 70ಪೈಸ ಗಾಂಧಿಕ್ಲಾಸ್ನಲ್ಲಿ.. ಮತ್ತೆ ಆ ಸುಧಿನ fix..godbless:) ನಟನೆಯಲ್ಲಿ ಸಾರ್ವಭೌಮ ನಮ್ಮಣ್ಣ..'' ಎಂದು ಮನಸ್ಸಿನಿಂದ ಆರ್ಶೀವಾದಿಸಿದ್ದಾರೆ.

  ನಟ ಸಾರ್ವಭೌಮನಾದ ರಾಜರತ್ನ

  ಇನ್ನುಳಿದಂತೆ ರಾಕ್ ಲೈನ್ ವೆಂಕಟೇಶ್ ಈ ಚಿತ್ರವನ್ನ ನಿರ್ಮಾಣ ಮಾಡುತ್ತಿದ್ದು, ಪವನ್ ಒಡೆಯರ್ ನಿರ್ದೇಶನ ಮಾಡುತ್ತಿದ್ದಾರೆ. ಡಿಂಪಲ್ ಕ್ವೀನ್ ರಚಿತಾ ರಾಮ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

  English summary
  Kannada Actor Jaggesh has taken his twitter account to appreciate Power Star Puneeth Rajkumar's New movie nata sarvabhouma.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X