»   » ನಲ್ಮೆಯ ಸಹೋದರನ ಜನುಮದಿನಕ್ಕೆ ಶುಭ ಕೋರಿದ ಜಗ್ಗಣ್ಣ

ನಲ್ಮೆಯ ಸಹೋದರನ ಜನುಮದಿನಕ್ಕೆ ಶುಭ ಕೋರಿದ ಜಗ್ಗಣ್ಣ

Posted By:
Subscribe to Filmibeat Kannada

ಬರ್ತ್ ಡೇ ಬಾಯ್ ಡಾ.ಶಿವರಾಜ್ ಕುಮಾರ್ ಅವರಿಗೆ ನವರಸ ನಾಯಕ ಜಗ್ಗೇಶ್ ಅವರು ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ತಮ್ಮ ಟ್ವಿಟ್ಟರ್ ನಲ್ಲಿ ವಿಶ್ ಮಾಡಿರುವ ಜಗ್ಗೇಶ್, ತಮ್ಮ ಮಿತ್ರನ ಜನುಮದಿನದ ವಿಶೇಷವಾಗಿ ಒಂದೆರಡು ಹಿತವಚನ ಹೇಳುವ ಮೂಲಕ ಶುಭ ಹಾರೈಸಿದ್ದಾರೆ.

''ನಲ್ಮೆಯ ಸಹೋದರ ಶಿವಣ್ಣನಿಗೆ ಹುಟ್ಟು ಹಬ್ಬದ ಶುಭಾಷಯಗಳು. ಅಪ್ಪ ಅಮ್ಮನ ರೂಪದಲ್ಲಿ ಕನ್ನಡ ನಾಡಿನ ಜನರು ನಿಮ್ಮನ್ನು ಹರಸುತ್ತಾರೆ. ನೂರ್ಕಾಲ ಸುಖವಾಗಿ ಬಾಳಿ, ಶುಭದಿನ....'' ಎಂದು ಸೆಂಚುರಿ ಸ್ಟಾರ್ ಗೆ ಶುಭ ಕೋರಿದ್ದಾರೆ.

'ಬಾಸ್' ಬರ್ತ್ ಡೇ ಗೆ ಶ್ರೀಮುರಳಿ ಕೊಟ್ಟ ಭರ್ಜರಿ ಗಿಫ್ಟ್

Jaggesh wish to Shiva Rajkumar's 55th Birthday

ನಟ ಶಿವರಾಜ್ ಕುಮಾರ್ ಮತ್ತು ಜಗ್ಗೇಶ್ ಇಬ್ಬರು ತುಂಬಾ ಆತ್ಮೀಯರು. ಪರಸ್ಪರ ಇಬ್ಬರು ಉತ್ತಮ ಬಾಂಧವ್ಯ ಹೊಂದಿದ್ದಾರೆ. ಮತ್ತು ಒಬ್ಬರಿಗೊಬ್ಬರು ಗೌರವಿಸುತ್ತಾರೆ. ಅದರಲ್ಲೂ ಒಂದು ಹೆಜ್ಜೆ ಮುಂದೆ ಇರುವ ಜಗ್ಗೇಶ್, ಡಾ.ರಾಜ್ ಕುಮಾರ್ ಕುಟುಂಬದೊಂದಿಗೆ ಹೆಚ್ಚು ಒಡನಾಟವಿಟ್ಟುಕೊಂಡಿರುವುದು ವಿಶೇಷ.

ಶಿವಣ್ಣನ ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಹರ್ಷೋದ್ಗಾರ

ಇನ್ನು ಜಗ್ಗೇಶ್ ಮತ್ತು ಶಿವಣ್ಣ ಪರಸ್ಪರ ತಮ್ಮ ಚಿತ್ರಗಳಿಗೆ ಒಬ್ಬರಿಗೊಬ್ಬರು ಪ್ರೋತ್ಸಾಹ ನೀಡುತ್ತಾರೆ. ಜಗ್ಗೇಶ್ ಅವರ ಚಿತ್ರದ ಸುದ್ದಿಗೋಷ್ಠಿಗಳಲ್ಲಿ ಶಿವಣ್ಣ ಭಾಗಿಯಾಗುತ್ತಾರೆ. ಅದೇ ರೀತಿ ಹ್ಯಾಟ್ರಿಕ್ ಹೀರೋ ಸಿನಿಮಾ ಕಾರ್ಯಕ್ರಮಗಳಲ್ಲಿ ಜಗ್ಗೇಶ್ ಅವರ ಪಾಲ್ಗೊಳ್ಳುತ್ತಾರೆ. ಹೀಗೆ, ಈ ಇಬ್ಬರು ನಟರು ಕೂಡ ಸ್ಯಾಂಡಲ್ ವುಡ್ ಗೆ ಒಂದು ರೀತಿ ಮಾದರಿಯಾಗಿದ್ದಾರೆ.

English summary
Kannada Actor Jaggesh has taken his twitter account to wish Dr Shiva Rajkumar For His 55th Birthday.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada