»   » ಮಿಸ್ಟರ್ ರಾಮಾಚಾರಿಗೆ ಡಿಫರೆಂಟ್ ಆಗಿ ವಿಶ್ ಮಾಡಿದ ಜಗ್ಗೇಶ್

ಮಿಸ್ಟರ್ ರಾಮಾಚಾರಿಗೆ ಡಿಫರೆಂಟ್ ಆಗಿ ವಿಶ್ ಮಾಡಿದ ಜಗ್ಗೇಶ್

Posted By:
Subscribe to Filmibeat Kannada

ರಾಕಿಂಗ್ ಸ್ಟಾರ್ ಯಶ್ ಬರ್ತಡೇಗೆ ನವರಸ ನಾಯಕ ವಿಶ್ ಮಾಡಿದ್ದಾರೆ. 32ನೇ ವಸಂತಕ್ಕೆ ಕಾಲಿಟ್ಟಿರುವ ಮಿಸ್ಟರ್ ರಾಮಾಚಾರಿಗೆ ಜಗ್ಗಣ್ಣ ಡಿಫರೆಂಟ್ ಆಗಿ ಶುಭಕೋರಿದ್ದಾರೆ.

ಇತ್ತೀಚೆಗಷ್ಟೆ ಕಿಚ್ಚ ಸುದೀಪ್ ದಂಪತಿಗೆ ಬೌಲ್ಡ್ ಆಗಿ ವಿಶ್ ಮಾಡಿ ಎಲ್ಲರ ಗಮನ ಸೆಳೆದಿದ್ದ ಜಗ್ಗೇಶ್ ಈಗ ಯಶ್ ಬರ್ತಡೇಗೂ ಅಷ್ಟೇ ವಿಭಿನ್ನವಾಗಿ ಶುಭಾಶಯ ತಿಳಿಸಿದ್ದಾರೆ. ಯಶ್ ಅವರ ಯಶಸ್ಸಿನ ಕಲಾಸೇವೆ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಜಗ್ಗೇಶ್, ಬೇಗ ತೊಟ್ಟಿಲು ತೂಗಲಿ ಎಂದು ಹಾರೈಸಿದ್ದಾರೆ.

ಭಾವ ಯಶ್ ಗೆ ಬಾಮೈದ ಪ್ರಥಮ್ ನಿಂದ ಸಂತಾನ ಸಲಹೆ

Jaggesh wish to Yash Birthday

''ನಲ್ಮೆಯ ಕಲಾಬಂದುವಿಗೆ ಹುಟ್ಟು ಹಬ್ಬದ ಶುಭಾಷಯಗಳು. ಕನ್ನಡದ ಕಲಾತೇರು ಸುಗಮವಾಗಿ ಸಾಗುತ್ತಿದೆ ನಿಮ್ಮ ಆಕರ್ಷಕ ನಟನೆಯಿಂದ. ಕಲೆಗೆ ನಾಡಿಗೆ ನಿಮ್ಮ ಸೇವೆ ಮುಂದುವರಿಯಲಿ. ರಾಯರ ದಯೆಯಿಂದ ಮನೆಯಲ್ಲಿ ತೊಟ್ಟಿಲು ಅನಾವರಣವಾಗಲಿ.'' - ಜಗ್ಗೇಶ್, ನಟ

ಸುದೀಪ್ ದಂಪತಿಗೆ ಜಗ್ಗೇಶ್ ಅವರಿಂದ ಸಂತಾನ ಸಲಹೆ

Jaggesh wish to Yash Birthday

ಯಶ್ ಅವರ ಹುಟ್ಟುಹಬ್ಬದ ಪ್ರಯುಕ್ತ ಕೆ.ಜಿ.ಎಫ್ ಚಿತ್ರದ ಟೀಸರ್ ರಿಲೀಸ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ಸೌಂಡ್ ಮಾಡ್ತಿದೆ. ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿರುವ ಈ ಚಿತ್ರದಲ್ಲಿ ರಾಕಿಂಗ್ ಸ್ಟಾರ್ 80 ದಶಕದ ವ್ಯಕ್ತಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

English summary
Rocking Star Yash is celebrating his 32nd Birthday. Kannada Film Industry stars are sending their wishes to Yash. Even Actor Jaggesh also wishes Yash trough Twitter & advises Yash to have Baby soon.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X