ಬಡವರ ಮನೆಯಿಂದ ಎದ್ದು ಬಂದ ಪ್ರತಿಭೆ ಶಶಿ ಕುಮಾರ್; ಸುಪ್ರೀಂ ಹೀರೋಗೆ ಜಗ್ಗೇಶ್ ವಿಶ್
ಸ್ಯಾಂಡಲ್ ವುಡ್ ನ ಖ್ಯಾತ ನಟರಲ್ಲಿ ಶಶಿ ಕುಮಾರ್ ಒಬ್ಬರು. ಒಂದು ಕಾಲದ ಹ್ಯಾಂಡ್ ಸಮ್ ನಟ ಶಶಿ ಕುಮಾರ್ ಸಿನಿಮಾರಂಗದಿಂದ ದೀರ್ಘ ಬ್ರೇಕ್ ತೆಗೆದು ಕೊಂಡಿದ್ದರು. ಕಳೆದ ವರ್ಷ ರಿಲೀಸ್ ಆದ ಕುರುಕ್ಷೇತ್ರ ಸಿನಿಮಾದಲ್ಲಿ ಮತ್ತೆ ಬಣ್ಣ ಹಚ್ಚುವ ಮೂಲಕ ಕನ್ನಡ ಚಿತ್ರಪ್ರೇಕ್ಷಕರ ಮುಂದೆ ಬಂದಿದ್ದಾರೆ.
ಇತ್ತೀಚಿಗಷ್ಟೆ ಮಗನನ್ನು ಚಿತ್ರರಂಗಕ್ಕೆ ಪರಿಚಯಿಸಿದ ಶಶಿ ಕುಮಾರ್ ತಾವು ಕೂಡ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ವರ್ಷಗಳ ಬಳಿಕ ತೆರೆಮೇಲೆ ಮಿಂಚಲು ಸಜ್ಜಾಗಿರುವ ಶಶಿ ಕುಮಾರ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. 54ನೇ ವಸಂತಕ್ಕೆ ಕಾಲಿಟ್ಟಿರುವ ಶಶಿ ಕುಮಾರ್ ಅವರಿಗೆ ಚಿತ್ರರಂಗದ ಗಣ್ಯರು, ಸ್ನೇಹಿತರು ಮತ್ತು ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ಶುಭಾಶಯ ಕೋರುತ್ತಿದ್ದಾರೆ.

ಸಾಧಿಸುವವರ ಮುಂದೆ ಸಾಧಿಸಿದವ ಸೂಪರ್ ಸ್ಟಾರ್- ಜಗ್ಗೇಶ್
ಸ್ಯಾಂಡಲ್ ವುಡ್ ನ ಹಿರಿಯ ನಟ ಜಗ್ಗೇಶ್ ಗೆಳೆಯ ಶಶಿ ಕುಮಾರ್ ಅವರಿಗೆ ವಿಶೇಷವಾಗಿ ಶುಭಾಶಯ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ವಿಶ್ ಮಾಡಿರುವ ಜಗ್ಗೇಶ್ ಬಡವರ ಮನೆಯಿಂದ ಎದ್ದುಬಂದ ಪ್ರತಿಭೆ, ಸಾಧಿಸುವವರ ಮುಂದೆ ಸಾಧಿಸಿದವ ನೀನು ಸೂಪರ್ ಸ್ಟಾರ್ ಎಂದು ಹೇಳಿದ್ದಾರೆ.

ಶುಭಹಾರೈಸಲು ಇನ್ನು 25 ವರ್ಷ ಬದುಕಿರುವೆ-ಜಗ್ಗೇಶ್
ಈ ಬಗ್ಗೆ ಟ್ವೀಟ್ ಮಾಡಿರುವ ನವರಸನಾಯಕ, ' ತಂತ್ರಜ್ಞಾನ ಟಿವಿ ಯೂಟ್ಯೂಬ್, ಫೇಸ್ ಬುಕ್ ಇಲ್ಲದ ಆ ಕಾಲದಲ್ಲಿ 5 ಲಕ್ಷ ಸಂಬಳ ಪಡೆಯುತ್ತಿದ್ದ ಬಡವರ ಮನೆಯಿಂದ ಎದ್ದು ಬಂದ ಪ್ರತಿಭೆ ನನ್ನ ಗೆಳೆಯ ಶಶಿ ಕುಮಾರನಿಗೆ ಹುಟ್ಟುಹಬ್ಬದ ಶುಭಾಶಯ. ಸಾಧಿಸುವವರ ಮುಂದೆ ಸಾಧಿಸಿದವ ನೀನು ಸೂಪರ್ ಸ್ಟಾರ್. ನಿನಗೆ ಸದ ಶುಭಹಾರೈಸಲು 34 ವರ್ಷದ ಗೆಳೆಯ ನಾನು ಬದುಕುವೆ ನಿನಗಾಗಿ ಇನ್ನು 25 ವರ್ಷ. smile pls God bless' ಎಂದು ಹರಿಸಿದ್ದಾರೆ.

ಎರಡು ಸಿನಿಮಾಗಳಲ್ಲಿ ಶಶಿ ಕುಮಾರ್ ಬ್ಯುಸಿ
ಶಶಿ ಇತ್ತೀಚಿಗಷ್ಟೆ ಹೊಸ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಶಂಭೋ ಶಿವ ಶಂಕರ ಸಿನಿಮಾ ಮೂಲಕ ಶಶಿ ಕುಮಾರ್ ಮತ್ತೆ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ನಟ ಶಿವರಾಜ್ ಕುಮಾರ್ ಅಭಿನಯಿಸುತ್ತಿರುವ ಶಿವಪ್ಪ ಸಿನಿಮಾದಲ್ಲೂ ಶಶಿ ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.
Recommended Video

ಶಶಿ ಕುಮಾರ್ ಪುತ್ರ ಚಿತ್ರರಂಗಕ್ಕೆ ಎಂಟ್ರಿ
ಶಶಿ ಕುಮಾರ್ ಪುತ್ರ ಅಕ್ಷಿತ್ ಕುಮಾರ್ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿದ್ದು, ಅಕ್ಷಿತ್ ನಟಿಸಿರುವ, ಸೀತಾಯಣ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಇತ್ತೀಚಿಗಷ್ಟೆ ಚಿತ್ರದ ಒಂದು ಹಾಡನ್ನು ಶಿವರಾಜ್ ಕುಮಾರ್ ರಿಲೀಸ್ ಮಾಡಿದ್ದಾರೆ. ಈ ಸಿನಿಮಾ ಕನ್ನಡ ಸೇರಿದಂತೆ ತೆಲುಗು, ತಮಿಳು ಮತ್ತು ಮಲಯಾಳಂನಲ್ಲಿ ಬಿಡುಗಡೆಯಾಗುತ್ತಿದೆ.


Click it and Unblock the Notifications











