'ಅವನಿಗಾಗಿ ಗೆಲ್ಲಲೆ ಬೇಕು ಒಂದು ದಿನ ಎಂಬ ಛಲ ಇತ್ತು': ಮಗನಿಗೆ ವಿಶ್ ಮಾಡಿದ ಜಗ್ಗೇಶ್
ನವರಸ ನಾಯಕ ಜಗ್ಗೇಶ್ ಅವರ ಹಿರಿಯ ಪುತ್ರ ಗುರುರಾಜ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಮಗನ ಬರ್ತಡೇಗೆ ಜಗ್ಗೇಶ್ ಅವರು ಟ್ವಿಟ್ಟರ್ ಮೂಲಕ ಶುಭಕೋರಿದ್ದಾರೆ.
ಗುರುರಾಜ್ ಅವರ ಸಣ್ಣ ವಯಸ್ಸಿನ ಫೋಟೋ ಹಂಚಿಕೊಂಡಿರುವ ಜಗ್ಗೇಶ್ ''ಅವನಿಗಾಗಿ ಗೆಲ್ಲಲೆ ಬೇಕು ಒಂದುದಿನ ಎಂಬ ಛಲ ಮೂಡಿತು ಅವನು ಬೆಳೆದಂತೆ ನಾನು ಬೆಳೆದೆ'' ಎಂದು ಹಳೆಯ ನೆನಪು ಮೆಲುಕು ಹಾಕಿದ್ದಾರೆ.
''5/1/1987...ಬದುಕು ಹೇಗೆ ನಿಭಾಯಿಸುವುದು ಎಂದು ಕೊರಗುತ್ತಿದ್ದ ದಿನಗಳು. ರಾಯರ ಪ್ರಸಾದ ಮಗ ಗುರುರಾಜನ ರೂಪದಲ್ಲಿ ಬಂತು. ಅವನಿಗಾಗಿ ಗೆಲ್ಲಲೆ ಬೇಕು ಒಂದುದಿನ ಎಂಬ ಛಲ ಮೂಡಿತು ಅವನು ಬೆಳೆದಂತೆ ನಾನು ಬೆಳೆದೆ. ಸಾತ್ವಿಕ ಸಂಭಾವಿತ ಮಗ ಗುರುರಾಜ ಹುಟ್ಟಿದದಿನ ಇಂದು. ಮನ ತುಂಬಿ ನನ್ನ ಶುಭ ಹಾರೈಕೆ ನೀವು ಹರಸಿ..ಧನ್ಯವಾದ'' ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.

ಗುರುರಾಜ್ ಸಹ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಜಗ್ಗೇಶ್ ನಟನೆಯ 'ಬೇಡ ಕೃಷ್ಣ ರಂಗಿನಾಟ' ಚಿತ್ರದಲ್ಲಿ ನಟಿಸಿದ್ದ ಗುರುರಾಜ್, ಬಳಿಕ ಮೇಕಪ್ ಚಿತ್ರಕ್ಕೆ ಕಥೆ ಬರೆದಿದ್ದರು. ಕೋಮಲ್ ನಟನೆಯ ತಮಾಷೆಗಾಗಿ ಸಿನಿಮಾದಲ್ಲೂ ಒಂದು ಪಾತ್ರ ಮಾಡಿದ್ದರು.
2009ರಲ್ಲಿ ತೆರೆಕಂಡ 'ಗಿಲ್ಲಿ' ಚಿತ್ರದ ಮೂಲಕ ನಾಯಕನಟನಾಗಿ ಸಿನಿ ಇಂಡಸ್ಟ್ರಿ ಪ್ರವೇಶ ಮಾಡಿದ್ದರು. ತಮಿಳಿನ ಹಿಟ್ ಚಿತ್ರ '7ಜಿ ರೈನ್‌ಬೋ ಕಾಲೋನಿ' ರೀಮೇಕ್ ಇದಾಗಿದ್ದು, ಈ ಚಿತ್ರದಲ್ಲಿ ರಕುಲ್ ಪ್ರೀತ್ ಸಿಂಗ್ ನಾಯಕಿಯಾಗಿದ್ದರು.
ನಂತರ ಗುರು, ಸಂಕ್ರಾಂತಿ, ಪೈಪೋಟಿ, ಮಾಸ್ ಲೀಡರ್ ಹಾಗೂ ವಿಷ್ಣು ಸರ್ಕಲ್ ಚಿತ್ರಗಳಲ್ಲಿ ಗುರುರಾಜ್ ನಟಿಸಿದ್ದಾರೆ. ವಿದೇಶಿ ಯುವತಿಯನ್ನು ಪ್ರೀತಿಸಿ ಮದುವೆಯಾದ ಗುರುರಾಜ್‌ಗೆ ಅರ್ಜುನ್ ಎಂಬ ಗಂಡು ಮಗು ಇದೆ.


Click it and Unblock the Notifications











