»   » ಕಿಚ್ಚ ಸುದೀಪ್ ಹಾಲಿವುಡ್ ಎಂಟ್ರಿಗೆ ಶುಭ ಹಾರೈಸಿದ ಜಗ್ಗೇಶ್

ಕಿಚ್ಚ ಸುದೀಪ್ ಹಾಲಿವುಡ್ ಎಂಟ್ರಿಗೆ ಶುಭ ಹಾರೈಸಿದ ಜಗ್ಗೇಶ್

Written By:
Subscribe to Filmibeat Kannada

ನಟ ಸುದೀಪ್ ಹಾಲಿವುಡ್ ಗೆ ಹಾರಲಿರುವ ಸುದ್ದಿ ಇತ್ತೀಚಿಗಷ್ಟೆ ಕೇಳಿ ಬಂದಿತ್ತು. ಈ ಸುದ್ದಿ ಕೇಳಿ ಕಿಚ್ಚನ ಹುಡುಗರು ಫುಲ್ ಖುಷಿ ಪಟ್ಟು ವಿಶ್ ಮಾಡಿದ್ದರು. ಇದೀಗ ನಟ ಜಗ್ಗೇಶ್ ಕೂಡ ಸುದೀಪ್ ಗೆ ಶುಭಾಶಯ ಕೋರಿದ್ದಾರೆ.

ಸುದೀಪ್ ಅವರಿಗೆ ಜಗ್ಗೇಶ್ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಶುಭ ಹಾರೈಸಿದ್ದಾರೆ. ಕಿಚ್ಚ ಸುದೀಪ್ ಅವರನ್ನು ಅಪ್ಪಿಕೊಂಡ ಫೋಟೋ ಹಾಕಿರುವ ಜಗ್ಗೇಶ್ ''ಸಹೋದರನ ಆಲಿಂಗನದಲ್ಲಿ ನೂರ್ಕಾಲ.. ಕನ್ನಡದ ಬಾವುಟ ಹಾರಿಸಿ ಬಾಳು'', ಕನ್ನಡ ಆಸ್ತಿ ಇಂದು ಹಾಲಿವುಡ್ ಗೆ ಪಾದಾರ್ಪಣೆ.. ಚಪ್ಪಾಳೆ ಕನ್ನಡಿಗನಿಗೆ'' ಎಂದು ಹೇಳಿದ್ದಾರೆ.

jaggesh-wishes-to-kiccha-sudeep

ಅಂದಹಾಗೆ, ಹಾಲಿವುಡ್ ಸಿನಿಮಾದ ವಿಷಯದ ಬಗ್ಗೆ ಸ್ವತಃ ಸುದೀಪ್ ಅವರೇ ತಮ್ಮ ಟ್ವಿಟ್ಟರ್ ನಲ್ಲಿ ಖಾತ್ರಿ ಪಡಿಸಿದ್ದಾರೆ. ಸ್ಯಾಂಡಲ್ ವುಡ್, ಬಾಲಿವುಡ್, ಟಾಲಿವುಟ್, ಕಾಲಿವುಡ್ ಬಳಿಕ ಈಗ ಹಾಲಿವುಡ್ ನಲ್ಲಿ ಕನ್ನಡದ ಕಿಚ್ಚ ಖದರ್ ತೋರಿಸಲಿದ್ದಾರೆ.

English summary
Kannada Actor Jaggesh has taken his twitter account to wish Kiccha Sudeep for his Hollywood debut.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada